ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯಲ್ಲಿ ಅತಿ ವೇಗದ ದ್ವಿಶತ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಇಶಾನ್ ಕಿಶನ್(Ishan Kishan) ತಾನು ಔಟಾಗದೆ ಉಳಿದಿದ್ದರೆ 300 ರನ್ ಗಳಿಸುತ್ತಿದೆ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ದ್ವಿಶತಕ ವೀರ ಇಶಾನ್ ಕಿಶನ್ ಒಂದೊಮ್ಮೆ ನಾನು ವಿಕೆಟ್ ಒಪ್ಪಿಸದೇ ಇದ್ದರೆ 300 ರನ್‌ಗಳಿಸುವ ಅವಕಾಶವಿತ್ತು. ಏಕೆಂದರೆ ನಾನು ವಿಕೆಟ್ ಕಳೆದುಕೊಂಡಾಗ ಇನ್ನು ಕೂಡ 15 ಓವರ್‌ಗಳ ಆಟ ಬಾಕಿಯಿತ್ತು. ಹಾಗಾಗಿ ನನಗೆ ತ್ರಿಶತಕ ಬಾರಿಸುವ ಅವಕಾಶವೂ ಇತ್ತು ಎಂದು ಹೇಳಿದರು.
“ಈ ಪಿಚ್ ಬ್ಯಾಟಿಂಗ್ ಮಾಡಲು ಬಹಳ ಅದ್ಭುತವಾಗಿತ್ತು. ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಈಗ ದ್ವಿಶತ ಸಿಡಿಸಿದ ದಿಗ್ಗಜ ಆಟಗಾರರ ಜತೆಗೆ ನನ್ನ ಹೆಸರು ಕೂಡ ಕೇಳಿಸಿಕೊಳ್ಳುತ್ತಿರುವುದು ಸಂತಸ ತಂದಿದೆ” ಎಂದು ಇಶಾನ್ ಕಿಶನ್ ತಮ್ಮ ಸಾಧನೆಯ ಖುಷಿಯನ್ನು ಹಂಚಿಕೊಂಡರು. ಈ ಪಂದ್ಯದಲ್ಲಿ ಇಶಾನ್ ಕಿಶನ್ 131 ಎಸೆತಗಳನ್ನು ಎದುರಿಸಿ 210 ರನ್‌ಗಳಿಸಿದರು. ಈ ಸಿಡಿಲಬ್ಬರದ ಬ್ಯಾಟಿಂಗ್ ವೇಳೆ 24 ಬೌಂಡರಿ ಹಾಗೂ 10 ಸಿಕ್ಸರ್ ಸಿಡಿಯಿತು.
ಕೊಹ್ಲಿ ನೀಡಿದ ಸಲಹೆ
ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೀಡಿದ ಅತ್ಯಮೂಲ್ಯ ಸಲಹೆಯನ್ನು ಇಶಾನ್ ವಿವರಿಸಿದ್ದಾರೆ. ಶತಕದ ಸನಿಹಕ್ಕೆ ಬಂದಾಗ ಕೊಹ್ಲಿ ತಾಳ್ಮೆಯಿಂದ ಆಡುವಂತೆ ಎಚ್ಚರಿಸಿದರು. ಜತೆಗೆ ಬ್ಯಾಟಿಂಗ್ ನಡೆಸುವಾಗ ಅವರು ನನಗೆ ಯಾವ ಆಟಗಾರನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬೇಕು ಎಂದು ಸಲಹೆ ನೀಡುತ್ತಿದ್ದರು. ಇನ್ನು ನಾನು 95 ರನ್‌ಗಳಿಸಿದ್ದಾಗ ನನ್ನ ಮೊದಲ ಶತಕ ಎಂದು ನೆನಪಿಸಿ ತಾಳ್ಮೆಯಿಂದ ಆಟುವಂತೆ ಎಚ್ಚರಿಸಿದರು. ಎಂದು ಇಶಾನ್ ಹೇಳಿದರು. ಕಳೆದ ಐಪಿಎಲ್ನಲ್ಲಿ ತೀವ್ರ ರನ್ ಬರ ಅನುಭವಿಸಿ ಅಳುತಿದ್ದ ವೇಳೆಯೂ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಇಶಾನ್ ಕಿಶನ್ಗೆ ಬ್ಯಾಟಿಂಗ್ ಸಲಹೆ ನೀಡಿ ಬೆಂಬಲ ನೀಡಿದ್ದರು.
ಇದನ್ನೂ ಓದಿ | INDvsBAN | ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರ, ಬಾಂಗ್ಲಾದೇಶ ವಿರುದ್ಧ 227 ರನ್‌ಗಳ ಭರ್ಜರಿ ಜಯ