ಮುಂಬಯಿ: ಟೀಮ್ ಇಂಡಿಯಾದ ಎಡಗೈ ಬ್ಯಾಟರ್ ಇಶಾನ್ ಕಿಶನ್(Ishan Kishan) ಅವರು ವಿಭಿನ್ನ ಶೈಲಿಯ ಹೇರ್‌ಸ್ಟೈಲ್‌ನಲ್ಲಿ(ishan kishan hairstyle) ಕಾಣಿಸಿಕೊಂಡಿದ್ದಾರೆ. ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಂತೆಯೇ ಕೂದಲಿನ ಶೈಲಿ ಮಾಡಿಸಿಕೊಂಡ ಫೋಟೊವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೊ ಕಂಡ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಇದು ಮುಳ್ಳು ಹಂದಿ ತರ ಕಾಣುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ವಿಶ್ರಾಂತಿಯಲ್ಲಿರುವ ಇಶಾನ್ ಕಿಶನ್ ತವರಿಗೆ ಬಂದು ವಿಭಿನ್ನ ಶೈಲಿಯ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಅವರ ಈ ಹೇರ್‌ಸ್ಟೈಲ್ ಸಖತ್ ಟ್ರಂಟ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊಗೆ ‘ನಂಬರ್-1’ ಎಂದು ಬರೆದಿದ್ದಾರೆ. ಈ ಫೋಟೋಗೆ ಹಾರ್ದಿಕ್ ಪಾಂಡ್ಯ ಬೆಂಕಿಯ ಎಮೊಜಿ ಕಳುಹಿಸಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಅವರ ಪತ್ನಿ ಮುಳ್ಳು ಹಂದಿ ಎಂದು ಬರೆಯುವುದರ ಜತೆಗೆ ಮುಳ್ಳು ಹಂದಿಯ ಸ್ಟಿಕ್ಕರ್ ಕೂಡ ಕಳುಹಿಸಿದ್ದಾರೆ. ಇದು ವೈರಲ್ ಆಗಿದೆ.
ಧೋನಿ ಶೈಲಿ ಅನುಕರಣೆ ಮಾಡಿದ ಇಶಾನ್
ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಇದೇ ರೀತಿಯ ಶೈಲಿಯಲ್ಲಿ ಹೇರ್‌ಸ್ಟೈಲ್ ಮಾಡಿದ್ದರು. ಧೋನಿ ಅವರ ಶೈಲಿ ಕೊಂಚ ಸಿಂಪಲ್ ಆಗಿತ್ತು. ಆದರೆ ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ ಹೇಳಿದಂತೆ ಇಶಾನ್ ಅವರ ಕೂದಲು ಮಾತ್ರ ಮುಳ್ಳು ಹಂದಿಯ ಮುಳ್ಳುನಿಂತೆ ಕಾಣಿಸುತ್ತಿದೆ. ಹಲವು ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದು ಇದು ಧೋನಿಯಿಂದ ಪಡೆದ ಪ್ರೇರಣೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ Ishan Kishan | ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಡಲಿದ್ದಾರೆ ಭಾರತದ ಕ್ರಿಕೆಟಿಗ ಇಶಾನ್ ಕಿಶನ್!
ಇಶಾನ್ ಕಿಶನ್ ವಿಭಿನ್ನ ಶೈಲಿಯ ಕೇಶ ವಿನ್ಯಾಸ ಹೀಗಿದೆ
ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ಶ್ರೇಷ್ಠ ಪ್ರದಶನ ತೋರುತ್ತಿರುವ ಇಶಾನ್ ಕಿಶನ್ ಏಷ್ಯಾ ಕಪ್(Asia Cup) ಮತ್ತು ವಿಶ್ವಕಪ್(ICC World Cup) ತಂಡದಲ್ಲಿಯೂ ಅವಕಾಶ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಈಗಾಗಲೇ ಭಾರತ ಪರ ದ್ವಿಶತಕವನ್ನು ಬಾರಿಸಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಅವರು ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಸಚಿನ್ ದಾಖಲೆ ಮುರಿದ ಇಶಾನ್
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ(India tour of West Indies, 2023) ಸತತ ಎರಡು ಅರ್ಧಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಮಹೇಂದ್ರ ಸಿಂಗ್(MS Dhoni) ಅವರ ದಾಖಲೆಯೊಂದನ್ನು ಸರಿಗಟ್ಟಿ ಸಚಿನ್ ತೆಂಡೂಲ್ಕರ್ ಅವರ ದಾಖಯನ್ನು ಮುರಿದಿದ್ದರು. ಧೋನಿ ಬಳಿಕ ವೆಸ್ಟ್ ಇಂಡೀಸ್ ನೆಲದಲ್ಲಿ ಸತತ ಎರಡು ಅರ್ಧಶತಕ ಬಾರಿಸಿದ ದ್ವಿತೀಯ ಭಾರತೀಯ ಆಟಗಾ ಎನಿಸಿದ್ದರು. ಇದರ ಜತೆಗೆ ಐದು ಇನಿಂಗ್ಸ್ಗಳ ಬಳಿಕ ನಂತರ ಭಾರತ ಪರ ಆರಂಭಿನಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಇಶಾನ್ ಮೊದಲ ಸ್ಥಾನ ಪಡೆದಿದ್ದಾರೆ. ತೆಂಡೂಲ್ಕರ್ ಅವರು ಆರಂಭಿಕನಾಗಿ ಮೊದಲ ಐದು ಇನಿಂಗ್ಸ್ನಲ್ಲಿ 321 ರನ್ ಬಾರಿಸಿದ್ದರು. ಕಿಶನ್ 348 ರನ್ ಗಳಿಸಿ ಸಚಿನ್ ಅವರನ್ನು ಹಿಂದಿಕ್ಕಿದ್ದರು.