ಬೆಂಗಳೂರು: ದುಲೀಪ್ ಟ್ರೋಫಿಯಿಂದ(duleep trophy 2023) ಹಿಂದೆ ಸರಿದಿರುವ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಇಶಾನ್ ಕಿಶನ್(Ishan Kishan) ಅವರು ಸದ್ಯದಲ್ಲೇ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(NCA) ಬರಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಇಲ್ಲಿ ವಿಂಡಿಸ್ ಪ್ರವಾಸಕ್ಕೂ ಮುನ್ನ ತಮ್ಮ ಫಿಟ್ನೆಸ್ ಸಾಭೀತುಪಡಿಸಬೇಕಿದೆ.
ಭಾರತ ತಂಡ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಜುಲೈ 12ರಿಂದ ಈ ಸರಣಿ ಆರಂಭವಾಗಲಿದೆ. ಉಭಯ ತಂಡಗಳ ಮಧ್ಯೆ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ.
ಟೆಸ್ಟ್ ಸರಣಿಯಲ್ಲಿ ಇಶಾನ್ ಕಿಶನ್ಗೆ ಅವಕಾಶ ಸಿಗುವುದು ಅನುಮಾನವಾಗಿದೆ. ಇದೇ ಕಾರಣಕ್ಕೆ ಅವರು ದುಲೀಪ್ ಟ್ರೋಫಿ ಸರಣಿಯಿಂದ ಹೊರಗುಳಿದಿರುವುದು. ಸದಯ ಅವರು ಸೀಮಿತ ಓವರ್ಗಳ ಕ್ರಿಕೆಟ್ನತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೆ ವಿಂಡೀಸ್ ಸರಣಿಯ ಸೀಮಿತ ಓವರ್ಗಳ ಸರಣಿಯಲ್ಲಿ ಅವರಿಗೆ ಅವಕಾಶ ಸಿಗಬೇಕಾದರೆ ಅವರು ಎನ್ಸಿಗೆ ಬಂದು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಸಂಬಂಧಿತ ತರಬೇತಿ ಪಡೆಯಬೇಕಿದೆ.
ಇದನ್ನೂ ಓದಿ IPL 2023: ಶುಭಮನ್ ಗಿಲ್ಗೆ ಕಪಾಳಮೋಕ್ಷ ಮಾಡಿದ ಇಶಾನ್ ಕಿಶನ್; ವಿಡಿಯೊ ವೈರಲ್
ಜಿಯೋದಲ್ಲಿ ಉಚಿತ ವೀಕ್ಷಣೆ
16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯನ್ನು ಆನ್ಲೈನ್ನಲ್ಲಿ ಉಚಿತವಾಗಿ ಪ್ರಸಾರ ಮಾಡುವ ಮೂಲಕ ಎಲ್ಲಡೆ ಸಂಚಲನ ಮೂಡಿಸಿದ್ದ ಜಿಯೋ ಸಿನಿಮಾ(JioCinema) ಬಹುನಿರೀಕ್ಷಿತ ಭಾರತ ಮತ್ತು ವೆಸ್ಟ್ ಇಂಡೀಸ್(IND vs WI) ನಡುವಣ ಕ್ರಿಕೆಟ್ ಸರಣಿಯನ್ನು ಉಚಿತವಾಗಿ ನೀಡಲಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಪ್ಯಾಕೆಜ್ ನೀಡಿದೆ.