ನವ ದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ (ind vs wi) ಯುವ ವಿಕೆಟ್ಕೀಪರ್ ಬ್ಯಾಟರ್ ಇಶಾನ್ ಕಿಶನ್ ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ. ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರು ಇಶಾನ್ ಕಿಶನ್ ಅವರನ್ನು 4ನೇ ಕ್ರಮಾಂಕಕ್ಕೆ ಬಡ್ತಿ ನೀಡಿ ಕಳುಹಿಸಿದ್ದರು. ಸಿಕ್ಕ ಅವಕಾಶ ಬಳಸಿಕೊಂಡ ಎಡಗೈ ಬ್ಯಾಟ್ಸ್ಮನ್ ತಮ್ಮ ಚೊಚ್ಚಲ ಟೆಸ್ಟ್ ಅರ್ಧ ಶತಕವನ್ನು ಬಾರಿಸಿದ್ದರು. ಆದರೆ ಯುವ ಬ್ಯಾಟರ್ ತಮ್ಮ ಅರ್ಧ ಶತಕ ಬಾರಿಸಿದ್ದು ತಮ್ಮ ಬ್ಯಾಟ್ನಿಂದ ಅಲ್ಲ. ಬದಲಾಗಿ ರಿಷಭ್ ಪಂತ್ ಪಂತ್ ಬ್ಯಾಟ್ನಿಂದ.
ರಿಷಭ್ ಪಂತ್ ಈ ವರ್ಷದ ಆರಂಭದಿಂದಲೂ ಆಟದಿಂದ ಹೊರಗುಳಿದಿದ್ದಾರೆ. ಅವರು ಕಾರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದು ಅವರ ಅನುಪಸ್ಥಿತಿಯಿಂದ ಭಾರತಕ್ಕೆ ಹಿನ್ನಡೆಯಾಗಿದೆ. ಭಾರತ ತಂಡ ಇನ್ನೂ ಬದಲಿ ಆಟಗಾರನ ಹುಡುಕಾಟದಲ್ಲಿರುವಾಗ, ಇಶಾನ್ ಕಿಶನ್ ಅದ್ಭುತ ಅರ್ಧ ಶತಕದೊಂದಿಗೆ ಛಾಪು ಮೂಡಿಸಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಎಡಗೈ ಬ್ಯಾಟರ್ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಚೆಂಡಾಡಿದ್ದರು. ಅವರು ಕೇವಲ 33 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳೊಂದಿಗೆ ಅರ್ಧಶತಕ ಬಾರಿಸಿದ್ದರು.
That's a smashing way to bring your maiden Test 50*@ishankishan51
— FanCode (@FanCode) July 23, 2023
.
.#INDvWIonFanCode #WIvIND pic.twitter.com/WIFaqpoGiD
ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಭಾರತ ತಂಡಕ್ಕೆ ವೇಗದ ರನ್ ಬೇಕಾಗಿದ್ದಾಗ ರಿಷಭ್ ಪಂತ್ ಜೋರಾಗಿ ಬ್ಯಾಟ್ ಬೀಸಿದ್ದರು. ಅಂತೆಯೆ ವಿಂಡೀಸ್ ವಿರುದ್ಧ ಇಶಾನ್ ಬ್ಯಾಟ್ ಬೀಸಿದ್ದಾರೆ. ಇಶಾನ್ ತಮ್ಮ ಸುಂಟರಗಾಳಿ ಇನ್ನಿಂಗ್ಸ್ಗೆ ರಿಷಭ್ ಪಂತ್ ಅವರ ಬ್ಯಾಟ್ ಬಳಸಿದ್ದೇ ಅಚ್ಚರಿ. ಅವರ ಬ್ಯಾಟ್ ಅನ್ನು ನೇರ ಪ್ರಸಾರದ ಕ್ಯಾಮೆರಾಗಳು ಝೂಮ್ ಮಾಡಿ ನೋಡಿದಾಗ ಆರ್ ಪಿ 17 ಎಂಬ ಲೋಗೊ ಕಾಣಿಸಿಕೊಂಡಿತ್ತು. ಹೀಗಾಗಿ ಅದರು ಪಂತ್ ಬ್ಯಾಟ್ ಎಂದು ಹೇಳಲಾಗಿದೆ.
Hey Rishabh Pant – Ishan Kishan thanks you 😊#TeamIndia | #WIvIND | @RishabhPant17 | @ishankishan51 | @windiescricket pic.twitter.com/hH6WxxJskz
— BCCI (@BCCI) July 24, 2023
ಪಂತ್ ಮತ್ತು ಕಿಶನ್ ಬಹಳ ಇಬ್ಬರೂ ತಮ್ಮ ಅಂಡರ್ 19 ಆಟದ ದಿನಗಳಿಂದಲೂ ಸಹ ಆಟಗಾರರಾಗಿದ್ದರು. ಭಾರತ ಮತ್ತು ವಿಂಡೀಸ್ ಸರಣಿಗೂ ಮುನ್ನ ಪಂತ್ ಕಿಶನ್ಗೆ ಬ್ಯಾಟಿಂಗ್ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದರು. ಆ ವೇಳೆ ಇಬ್ಬರೂ ಎನ್ಸಿಎನಲ್ಲಿದ್ದರು. ಕಿಶನ್ ಸರಣಿಗೆ ತಯಾರಿ ನಡೆಸುತ್ತಿದ್ದಾಗ ಪಂತ್ ಪುನಶ್ಚೇತನದ ಕಾರ್ಯದಲ್ಲಿದ್ದರು.
ಇದನ್ನೂ ಓದಿ : Team India : ಬಾಂಗ್ಲಾ ಸರಣಿ ವೇಳೆ ದುರ್ವರ್ತನೆ; ಹರ್ಮನ್ಪ್ರೀತ್ ಕೌರ್ ಬ್ಯಾನ್?
ಸರಣಿಗೆ ಬರುವ ಮೊದಲು ನಾನು ಎನ್ಸಿಎಯಲ್ಲಿದ್ದೆ. ಪಂತ್ ಕೂಡ ಅಲ್ಲಿದ್ದರು. ನಾನು ಹೇಗೆ ಆಡುತ್ತೇನೆಂದು ಅವನಿಗೆ ತಿಳಿದಿದೆ. ನಾವು 19 ವರ್ಷದೊಳಗಿನಿಂದಲೇ ಒಬ್ಬರಿಗೊಬ್ಬರು ಪರಿಚಿತರಾಗಿದ್ದೇವೆ. ಯಾರಾದರೂ ನನಗೆ ಸಲಹೆ ನೀಡಬೇಕೆಂದು ನಾನು ಬಯಸಿದ್ದೆ. ಅದೃಷ್ಟವಶಾತ್ ಪಂತ್ ನನ್ನ ಬ್ಯಾಟಿಂಗ್ ಸುಧಾರಣೆಗೆ ಸಲಹೆ ಕೊಟ್ಟರು ಎಂದು ಎಂದು ಕಿಶನ್ ಅರ್ಧ ಶತಕದ ಬಳಿಕ ಮಾತನಾಡುತ್ತಾ ನುಡಿದಿದ್ದಾರೆ.