Site icon Vistara News

ISL: ಬೆಂಗಳೂರು ಎಫ್‌ಸಿ-ಕೇರಳ ಬ್ಲಾಸ್ಟರ್ಸ್‌ ಅಭಿಮಾನಿಗಳ ಮಧ್ಯೆ ಹೊಡೆದಾಟ; ವಿಡಿಯೊ ವೈರಲ್​

kerala blasters

#image_title

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ ಫುಟ್ಬಾಲ್(ISL)​ ಪಂದ್ಯದ ವೇಳೆ ಬೆಂಗಳೂರು ಎಫ್‌ಸಿ(bengaluru fc) ಮತ್ತು ಕೇರಳ ಬ್ಲಾಸ್ಟರ್ಸ್‌(kerala blasters) ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಕೇರಳ ಬ್ಲಾಸ್ಟರ್ಸ್‌ ವಿರುದ್ಧ 1-0 ಅಂತರದಲ್ಲಿ ಗೆದ್ದು ಬೀಗಿದೆ. ಇದೇ ವೇಳೆ ಸೋಲಿನಿಂದ ನಿರಾಸೆ ಕಂಡ ಕೇರಳ ತಂಡದ ಅಭಿಮಾನಿಗಳು ಬೆಂಗಳೂರು ಎಫ್‌ಸಿ ಅಭಿಮಾನಿಗೆ ಹೊಡೆದಿದ್ದಾರೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ Ravindra Jadeja : ಅಂಪೈರ್​ಗೆ ಮಾಹಿತಿ ಕೊಡದೇ ಕೈಗೆ ಮುಲಾಮು ಹಚ್ಚಿಕೊಂಡ ಜಡೇಜಾಗೆ ಶೇ.25 ದಂಡ, ಒಂದು ಡಿಮೆರಿಟ್​ ಅಂಕ

ಕೇರಳದ ಅಭಿಮಾನಿಗಳು ಪುಂಡಾಟಿಕೆ ತೋರಲು ಆರಂಭಿಸಿದಾಗ ಬೆಂಗಳೂರು ಅಭಿಮಾನಿಗಳು ಕೂಡ ತಿರುಗಿಬಿದ್ದು ಹೊಡೆದಿದ್ದಾರೆ. ಉಭಯ ತಂಡಗಳ ಅಭಿಮಾನಿಗಳ ಈ ಈ ವರ್ತನೆಗೆ ಇದೀಗ ಆಕ್ರೋಶ ವ್ಯಕ್ತಗೊಂಡಿದೆ. ಈ ರೀತಿಯ ವರ್ತನೆಯಿಂದ ಪಂದ್ಯ ನೋಡಲು ಬಂದ ಅನೇಕರಿಗೆ ಸಮಸ್ಯೆಗಳಾಗಿದೆ ಎಂದು ಪಂದ್ಯ ವೀಕ್ಷಿಸಲು ಬಂದ ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸುವ ಮೂಲಕ ಬೆಂಗಳೂರು ಎಫ್‌ಸಿ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Exit mobile version