Site icon Vistara News

ISSF World Cup: ಶೂಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತದ ರಿದಮ್‌ ಸಂಗ್ವಾನ್‌

ISSF World Cup

ನವದೆಹಲಿ: ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾರತದ ಶೂಟರ್‌ ರಿದಮ್‌ ಸಂಗ್ವಾನ್‌(Rhythm Sangwan) ಅವರು ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ 29 ವರ್ಷಗಳ ಹಳೆಯ ವಿಶ್ವದಾಖಲೆಯೊಂದನ್ನು ಮುರಿದಿದ್ದಾರೆ. ಆದರೆ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಶನಿವಾರ ರಾತ್ರಿ ನಡೆದ ಅರ್ಹತಾ ಸುತ್ತಿನಲ್ಲಿ ರಿದಮ್‌ ಅವರು 595 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಆದರೆ ಫೈನಲ್ಸ್‌ನಲ್ಲಿ ಎಡವಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟರು. ಚೀನಾದ ಫೆಂಗ್‌ ಸಿಕ್ಸುವಾನ್‌ ಚಿನ್ನ ಗೆದ್ದರೆ, ಇರಾನ್‌ನ ಹನಿಯಾ ರೊಸ್ತಾಮಿಯಾನ್‌ ಮತ್ತು ಡೊರೀನ್‌ ವೆನ್‌ಕಾಂಪ್‌ ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದುಕೊಂಡರು. 1994 ರಲ್ಲಿ ಮಿಲಾನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಬಲ್ಗೇರಿಯಾದ ಡಯಾನಾ ಅಯೊರ್ಗೊವಾ ಅವರು 594 ಅಂಕಗಳಿದ್ದು ಇದುವರೆಗಿನ ವಿಶ್ವದಾಖಲೆ ಆಗಿತ್ತು. ಭಾರತದ ಮನು ಭಾಕರ್‌ ಅವರು 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಈ ದಾಖಲೆ ಸರಿಗಟ್ಟಿದ್ದರು. ಆದರೆ ಇದೀಗ ಈ ದಾಖಲೆಯನ್ನು ಸಂಗ್ವಾನ್‌ ಅವರು 595 ಅಂಕಗಳೊಂದಿಗೆ ಮುರಿದಿದ್ದಾರೆ.

ಶನಿವಾರ ಭಾರತಕ್ಕೆ ಯಾವುದೇ ಪದಕ ಒಲಿಯಲಿಲ್ಲ. ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಣದಲ್ಲಿದ್ದ ಇತರ ಶೂಟರ್‌ಗಳಾದ ಇಶಾ ಸಿಂಗ್‌ ಮತ್ತು ಮನು ಅವರು ಕ್ರಮವಾಗಿ 13 ಹಾಗೂ 27ನೇ ಸ್ಥಾನ ಪಡೆದರು.

ಇದನ್ನೂ ಓದಿ IPL 2023: ಲಕ್ನೋ,ಪಂಜಾಬ್​ಗೆ ಗೆಲುವು; ಅಂಪಟ್ಟಿಯಲ್ಲಿ ಭಾರಿ ಬದಲಾವಣೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಭಾರತಕ್ಕೆ ಮೂರು ಕಂಚು

ಟಾಷ್ಕೆಂಟ್‌:ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ(Boxing Championship) ಭಾರತ ಮೂರು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಮೊಹಮ್ಮದ್‌ ಹುಸ್ಸಮುದ್ದೀನ್‌, ದೀಪಕ್‌ ಕುಮಾರ್‌ ಭೋರಿಯಾ ಮತ್ತು ನಿಶಾಂತ್‌ ದೇವ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದ ಬಾಕ್ಸರ್​ಗಳಾಗಿದ್ದಾರೆ.

ಇದೇ ಮೊದಲ ಸಲ ವಿಶ್ವ ಬಾಕ್ಸಿಂಗ್‌ ಪಂದ್ಯಾವಳಿಯಲ್ಲಿ ಭಾರತದ ಮೂರು ಬಾಕ್ಸರ್​ಗಳು ಸ್ಪರ್ಧೆಗಿಳಿದಿದ್ದರು. 57 ಕೆ.ಜಿ. ವಿಭಾ​ಗ​ದಲ್ಲಿ ಕಣಕ್ಕಿಳಿದಿದ್ದ ಮೊಹಮ್ಮದ್‌ ಹುಸ್ಸಮುದ್ದೀನ್‌ ಅವರು ಗಾಯಾದ ಸಮಸ್ಯೆಯಿಂದಾಗಿ ಸೈಮಿಫೈನಲ್‌ ಸ್ಪರ್ಧೆಯಿಂದ ಹಿಂದೆ ಸರಿದರು. ಕ್ವಾರ್ಟರ್‌ ಫೈನಲ್‌ ದಾಟಿದ ಸಾಧನೆಗೆ ಅವರಿಗೆ ಕಂಚಿನ ಪದಕ ನೀಡಲಾಯಿತು. 51 ಕೆ.ಜಿ. ವಿಭಾಗದಲ್ಲಿ ದೀಪ​ಕ್‌ 2 ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ, ಫ್ರಾನ್ಸ್‌​ನ ಬಿಲಾಲಾ ಬೆನ್ನಾಮ ವಿರುದ್ಧ ತೀವ್ರ ಪೈಪೋಟಿ ನೀಡಿ 3-4 ಸಣ್ಣ ಅಂತ​ರ​ದಲ್ಲಿ ಸೋಲು ಕಂಡರು. 71 ಕೆ.ಜಿ. ವಿಭಾಗದಲ್ಲಿ ನಿಶಾಂತ್‌ ದೇವ್‌ ಅವರು 2022ರ ಏಷ್ಯನ್‌ ಚಾಂಪಿ​ಯನ್‌, ಕಜ​ಕ್​​ಸ್ತಾ​ನದ ಅಸ್ಲ​ನ್‌​ಬೆಕ್‌ ವಿರುದ್ಧ ಪರಾಭವಗೊಂಡರು.

Exit mobile version