Site icon Vistara News

ISSF World Cup: ಶೂಟಿಂಗ್ ವಿಶ್ವಕಪ್‌; ಚಿನ್ನಕ್ಕೆ ಕೊರಳೊಡ್ಡಿದ ಒಲಿಂಪಿಯನ್ ಐಶ್ವರ್ಯ್ ಪ್ರತಾಪ್

ISSF World Cup: Shooting World Cup; Olympian Aishwarya Pratap who won gold

ISSF World Cup: Shooting World Cup; Olympian Aishwarya Pratap who won gold

ಕೈರೋ(ಈಜಿಪ್ಟ್‌): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ(ISSF World Cup) ಒಲಿಂಪಿಯನ್​, ಭಾರತದ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್(Aishwary Pratap Singh Tomar) ಚಿನ್ನದ ಪದಕ್ಕಕೆ ಗುರಿ ಇರಿಸಿದ್ದಾರೆ. ಪುರುಷರ ವೈಯಕ್ತಿಕ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಐಶ್ವರ್ಯ್ ಚಿನ್ನದ ಪದಕ್ಕೆ ಮುತ್ತಿಕ್ಕುವ ಮೂಲಕ ಭಾರತ ಈ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

22 ವರ್ಷದ ಐಶ್ವರ್ಯ್ ಪ್ರತಾಪ್‌ ಸಿಂಗ್‌ ತೋಮರ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯದ ಅಲೆಕ್ಸಾಂಡರ್‌ ಶ್ಮಿರ್ಲ್ ಅವರನ್ನು 16-6 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಭಾರತತ ಸ್ಟಾರ್​ ಶೂಟರ್​, ವಿಶ್ವ ಚಾಂಪಿಯನ್‌ ರುದ್ರಾಂಕ್ಷ್ ಬಾಳಾ ಸಾಹೇಬ್‌ ಪಾಟೀಲ್‌ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತ ಪದಕದ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಸದ್ಯ ಭಾರತ ಈ ಟೂರ್ನಿಯಲ್ಲಿ 6 ಪದಕ ಜಯಿಸಿದೆ. ಇದರಲ್ಲಿ 4 ಚಿನ್ನಗಳು ಸೇರಿವೆ. ಈ ಸಾಧನೆಯೊಂದಿಗೆ ಪದಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದನ್ನೂ ಓದಿ ISSF World Cup: ಶೂಟಿಂಗ್‌ ವಿಶ್ವಕಪ್‌; ಚಿನ್ನಕ್ಕೆ ಗುರಿ​ಯಿಟ್ಟ ರುದ್ರಾಂಕ್ಷ್ ಪಾಟೀಲ್‌

ರ್‍ಯಾಂಕಿಂಗ್‌ ರೌಂಡ್‌ನ‌ಲ್ಲಿ ತೋಮರ್‌ 406.4 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದರು. ಅಲೆಕ್ಸಾಂಡರ್‌ ಶ್ಮಿರ್ಲ್ ಅಗ್ರ ಸ್ಥಾನ ದಲ್ಲಿದ್ದರು (407.9). ಅರ್ಹತಾ ಸುತ್ತಿನಲ್ಲಿ ತೋಮರ್‌ 588 ಅಂಕ ಪಡೆದು ಅಗ್ರಸ್ಥಾನ ಪಡೆದಿದ್ದರು. ಅದು 3 ವಿಭಾಗಗಳ ಸ್ಪರ್ಧೆ ಆಗಿತ್ತು. ಭಾರತದ ಮತ್ತೋರ್ವ ಶೂಟರ್‌ ಅಖೀಲ್‌ ಶೋರನ್‌ ದ್ವಿತೀಯ ಸ್ಥಾನಿಯಾಗಿದ್ದರು (587). ಕಳೆದ ವರ್ಷ ಚಾಂಗನ್‌ ವಿಶ್ವಕಪ್‌ನಲ್ಲೂ ತೋಮರ್‌ ಬಂಗಾರದ ಪದಕ ಜಯಿಸಿದ್ದರು.

Exit mobile version