ಕೈರೋ (ಈಜಿಪ್ಟ್): ಭಾರತತ ಸ್ಟಾರ್ ಶೂಟರ್, ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಬಾಳಾ ಸಾಹೇಬ್ ಪಾಟೀಲ್(Rudrankksh Patil) ಇಲ್ಲಿ ನಡೆದ ಕೈರೋ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ(ISSF World Cup) ಬಂಗಾರದ ಪದಕ ಜಯಿಸಿದ್ದಾರೆ.
10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ವಿಶ್ವದ ನಂ.1 ಖ್ಯಾತಿಯ ರುದ್ರಾಂಕ್ಷ್ ಪಾಟೀಲ್ ಜರ್ಮನಿಯ ಮ್ಯಾಕ್ಸಿಮಿಲಿಯನ್ ಉಲ್ಬಿಚ್ ವಿರುದ್ಧ 16-8 ಅಂತರದ ಗೆಲುವು ಸಾಧಿಸಿದರು. ಜತೆಗೆ ರ್‍ಯಾಂಕಿಂಗ್ ಸುತ್ತಿನಲ್ಲೂ ರುದ್ರಾಂಕ್ಷ್ 262.0 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರು. ಉಲ್ಬಿಚ್ 260.6 ಅಂಕ ಗಳಿಸಿದ್ದರು. ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ (629.3 ಅಂಕ) ಗಳಿಸುವ ಮೂಲಕ ರುದ್ರಾಂಕ್ಷ್ ರ್‍ಯಾಂಕಿಂಗ್ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದರು.
ಇದನ್ನೂ ಓದಿ Wrestling India: ಈಜಿಪ್ಟ್ ಕುಸ್ತಿ ಟೂರ್ನಿಯಿಂದ ಹಿಂದೆ ಸರಿದ ಭಾರತದ ಪ್ರಮುಖ ಕುಸ್ತಿ ಪಟುಗಳು
ರುದ್ರಾಂಕ್ಷ್ ಅವರ ಚಿನ್ನದ ಪದಕದ ಸಾಧನೆಯಿಂದ ಈ ಟೂರ್ನಿಯಲ್ಲಿ ಭಾರತ ಒಟ್ಟು 4 ಪದಕ ಗೆದ್ದಂತಾಯಿತು. 3 ಚಿನ್ನ ಮತ್ತು ಒಂದು ಕಂಚಿನ ಪದಕಗಳಾಗಿವೆ. ರುದ್ರಾಂಕ್ಷ್ ಪಾಟೀಲ್ ಗೆದ್ದ 2ನೇ ಸ್ವರ್ಣ ಪದಕ ಇದಾಗಿದೆ. 10 ಮೀ. ಏರ್ ಪಿಸ್ತೂಲ್ ಮತ್ತು ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಭಾರತ ಮೊದಲೆರಡು ಚಿನ್ನದ ಪದಕ ಗಳನ್ನು ಜಯಿಸಿತ್ತು. ಇದಕ್ಕೂ ಮುನ್ನ ವರುಣ್ ತೋಮರ್ ಕಂಚಿನ ಪದಕ ಜಯಿಸಿದ್ದರು.