ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್(IND vs ENG 2nd Test) ಪಂದ್ಯವನ್ನು 106ರನ್ಗಳಿಂದ ಗೆದ್ದ ಭಾರತ 5 ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತಂದು ನಿಲ್ಲಿಸಿದೆ. ಆದರೆ ಈ ಪಂದ್ಯದಲ್ಲಿ ಜಾಕ್ ಕ್ರಾಲಿ(zak crawley) ಔಟ್ ಆದ ಬಗ್ಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್(Ben Stokes) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
4ನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಭಾರತಕ್ಕೆ ತಿರುಗೇಟು ನೀಡುತ್ತಿದ್ದ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ ಅವರು 73 ರನ್ಗಳಿಸಿದ್ದ ವೇಳೆ ಕುಲ್ದೀಪ್ ಯಾದವ್ ಎಸೆದ ಚೆಂಡು ಕ್ರಾಲಿ ಅವರ ಪ್ಯಾಟ್ಗೆ ಬಡಿಯಿತು. ಈ ವೇಳೆ ಭಾರತೀಯ ಆಟಗಾರರು ಎಲ್ಬಿಡಬ್ಲ್ಯು ಗೆ ಅಂಪೈರ್ಗೆ ಮನವಿ ಮಾಡಿದರು.
ಚೆಂಡು ಬ್ಯಾಟ್ಗೆ ಬಡಿದು ಆ ಬಳಿಕ ಪ್ಯಾಟ್ಗೆ ಬಡಿದಂತೆ ಕಂಡ ಕಾರಣ ಫೀಲ್ಡ್ ಅಂಪೈರ್ ಎರಾಸ್ಮಸ್ ಭಾರತೀಯ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವೇಳೆ ರೋಹಿತ್ ಡಿಆರ್ಎಸ್(DRS call) ಮೊರೆ ಹೋದರು. ಮೂರನೇ ಅಂಪೈರ್ ಇದನ್ನು ಪರಿಶೀಲಿಸುವಾಗ ಚೆಂಡು ಬ್ಯಾಟ್ಗೆ ಬಡಿಯದಿರುವುದು ಸ್ಪಷ್ಟವಾಯಿತು. ಬಳಿಕ ಬಾಲ್ ಟ್ರ್ಯಾಕಿಂಗ್ ನೋಡುವಾಗ ಚೆಂಡು ಪಿಚಿಂಗ್ ಇನ್ ಸೈಡ್ ವಿಕೆಟ್ಹೆ ಬಡಿಯುವುದು ಕಂಡು ಬಂತು. ಹೀಗಾಗಿ ಅಂಪೈರ್ ಔಟ್ ನೀಡಿದರು. ಈ ವಿಕೆಟ್ ಬಿಳುತ್ತಿದ್ದಂತೆ ಭಾರತ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು.
ಇದನ್ನೂ ಓದಿ Ind vs eng : ರೋಹಿತ್ ಶರ್ಮಾ ಹಿಡಿದ ಈ ಕ್ಯಾಚ್ಗೆ ಕ್ರಿಕೆಟ್ ಕ್ಷೇತ್ರದ ಮೆಚ್ಚುಗೆ, ಇಲ್ಲಿದೆ ವಿಡಿಯೊ
Kuldeep yadav to Zak Crawley and some Controversial DRS technology.#INDvsENG | #INDvENGpic.twitter.com/K48giRt8da
— Don Cricket 🏏 (@doncricket_) February 5, 2024
ಆದರೆ ಕೆಲ ಕ್ರಿಕೆಟ್ ಪಂಡಿತರು ಕ್ರಾಲಿ ಔಟ್ ತೀರ್ಪಿನ ಬಳಿಕ ತಂತ್ರಜ್ಞಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಪಂದ್ಯದ ಬಳಿಕ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ತಂತ್ರಜ್ಞಾನವೂ ಶೇ. 100 ಪರಿಪೂರ್ಣವಲ್ಲ ಎಂದು ಅಸಮಾಧಾನ ಹೊರಹಾಕಿದರು. ಈ ಹಿಂದೆಯೂ ಹಲವು ಬಾರಿ ಇಂತಹದ್ದೇ ಸಮಸ್ಯೆಗಳು ಕಂಡು ಬಂದಿತ್ತು. ಕೆಲವೊಂದು ಬಾರಿ ಈ ಡಿಆರ್ಎಸ್ ಮತ್ತು ಅಲ್ರ್ಟಾಎಡ್ಜ್ ತೀರ್ಪುಗಳು ಅಚ್ಚರಿಗೆ ಕಾರಣವಾದ್ದು ಇದೆ. ಚೆಂಡು ಬ್ಯಾಟ್ಗೆ ಬಡಿಯದಿದ್ದರೂ ಕೂಡ ಕೆಲ ಆಟಗಾರರು ಈ ತಂತ್ರಜ್ಞಾನದ ಲೋಪದಿಂದಾಗಿ ವಿಕೆಟ್ ಕೈಚೆಲ್ಲಿದ ಹಲವು ನಿದರ್ಶನ ಕೂಡ ಇದೆ. ಒಟ್ಟಾರೆ ಈ ತಂತ್ರಜ್ಞಾನದ ಬಗ್ಗೆ ಹಲವರಿಗೆ ಅಸಮಾಧಾನವಿದೆ.
Ben Stokes spoke on Zak Crawley's LBW out said " Technology got wrong this time". #BenStokes #Bazball #WTC25 #INDvENGTest #INDvsENG #ENGvsIND #ENGvIND #INDvENGTest #INDvENG #TestCricket pic.twitter.com/1iIK4tayue
— sdn (@sdn7_) February 5, 2024
ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ನಾಲ್ಕನೇ ದಿನದಾಟದಲ್ಲಿ 292 ರನ್‌ಗಳಿಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 396 ರನ್ ಗಳಿಸಿದ್ದರೆ, ಇಂಗ್ಲೆಂಡ್ 253 ರನ್ ಮಾಡಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತವು 255 ರನ್ ಮಾಡಿದ್ದರೆ ಇಂಗ್ಲೆಂಡ್ ತಂಡವು 292 ರನ್ ಗಳಿಗೆ ಆಲೌಟಾಯಿತು. ಭಾರತದ ಪರ ದ್ವಿತೀಯ ಇನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಕಿತ್ತರು. ಉಳಿದಂತೆ ಮುಕೇಶ್ ಕುಮಾರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.