ಬೆಂಗಳೂರು: ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(MS Dhoni) ನೇತೃತ್ವದಲ್ಲಿ ಭಾರತದ ಯುವ ತಂಡ ಚೊಚ್ಚಲ ಟಿ20(2007 t20 world cup) ವಿಶ್ವಕಪ್ ಗೆದ್ದ ವಿಜಯ ಯಾತ್ರೆಗೆ ಇಂದಿಗೆ 16 ವರ್ಷದ ಸಂಭ್ರಮ. 2007 ಸೆ.24ರಂದು(On This Day in 2007) ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ(ind vs pak 2007 t20 world cup final) ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ರೋಮಾಂಚನದಲ್ಲಿ ಗೆಲುವು ಸಾಧಿಸಿತ್ತು.
ಜೋಹಾನ್ಸ್ ಬರ್ಗ್ನ ವಾಂಡರರ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 157 ರನ್ ಗಳ ಸಾಧಾರಣ ಮೊತ್ತ ಪೇರಿಸಿ ಸವಾಲೊಡ್ಡಿತ್ತು. 75 ರನ್ ಗಳಿಸಿದ್ದ ಗೌತಮ್ ಗಂಭೀರ್ ಅವರದ್ದೇ ಗರಿಷ್ಠ ಗಳಿಕೆಯಾಗಿತ್ತು. ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.
ಇದನ್ನೂ ಓದಿ IND vs AUS: ಆಸೀಸ್ಗೆ ಬೀಳಲಿ ಸರಣಿ ಸೋಲಿನ ಏಟು
ಸುಲಭ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಸತತ ವಿಕೆಟ್ ಕಳೆದುಕೊಂಡಿತ್ತು, ಆದರೆ ತಂಡಕ್ಕಾಗಿ ಟೊಂಕಕಟ್ಟಿ ನಿಂತಿದ್ದ ಮಿಸ್ಬಾ ಉಲ್ ಹಕ್ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು. ಕೊನೆಯ ಓವರ್ಗೆ ಒಂದು ವಿಕೆಟ್ ಸಹಾಯದಿಂದ 13 ರನ್ ಪಡೆಯುವ ಸವಾಲು ಪಾಕ್ಗೆ ಎದುರಾಯಿತು.
#OnThisDay in 2007! 🗓️
— BCCI (@BCCI) September 24, 2023
The @msdhoni-led #TeamIndia created HISTORY as they lifted the ICC World Twenty20 Trophy 🏆👏 pic.twitter.com/en3kZlzguW
ಅನುಭವಿ ಬೌಲರ್ ಹರ್ಭಜನ್ ಅವರ ಓವರ್ ಬಾಕಿ ಉಳಿದಿದ್ದರೂ, ಧೋನಿ ಗಟ್ಟಿ ನಿರ್ಧಾರ ಮಾಡಿ ಜೋಗಿಂದರ್ ಶರ್ಮಾಗೆ ಬಾಲ್ ನೀಡಿದ್ದರು. ಆರಂಭದಲ್ಲೇ ಸಿಕ್ಸರ್ ಬಾರಿಸಿದರೂ, ಮೂರನೇ ಎಸೆತವನ್ನು ಸ್ಕೂಪ್ ಮಾಡಲು ಹೋದ ಮಿಸ್ಬಾ ಅವರು ಶ್ರೀಶಾಂತ್ ಕೈಗೆ ಕ್ಯಾಚ್ ನೀಡಿದ್ದರು. ಇದರೊಂದಿಗೆ ಭಾರತ ಐದು ರನ್ ಅಂತರದಿಂದ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಲ್ಲಿಂದ ಧೋನಿ ಯುವ ಕೂಡ ಆರಂಭವಾಯಿತು. ಬಳಿಕ 2011ರ ಏಕದಿನ ವಿಶ್ವಕಪ್ನಲ್ಲಿಯೂ ಭಾರತಕ್ಕೆ ಧೋನಿ ವಿಶ್ವಕಪ್ ತಂದುಕೊಟ್ಟರು.
ಬೇಸರದ ಸಂಗತಿ ಎಂದರೆ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬಳಿಕ ಇದುವರೆಗೂ ಮತ್ತೊಂದು ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಮುಂದಿನ ವರ್ಷವಾದರೂ ಭಾರತ 2ನೇ ಕಪ್ ಗೆಲ್ಲುವಂತಾಗಲಿ ಎನ್ನುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.