Site icon Vistara News

Wrestlers Protest: ಬ್ರಿಜ್‌ ಭೂಷಣ್‌ ವಿರುದ್ಧದ ತನಿಖಾ ಸಮಿತಿ ಪುನರ್ ರಚನೆ ಅಸಾಧ್ಯ; ಕ್ರೀಡಾ ಸಚಿವಾಲಯ

Wrestlers Protest

ನವದೆಹಲಿ: ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷರ ಮೇಲಿನ((Wrestlers Protest)) ಆರೋಪಗಳ ತನಿಖೆಗೆ ರಚಿಸಿರುವ ಮೇಲುಸ್ತುವಾರಿ ಸಮಿತಿಯನ್ನು ಪುನರ್ ರಚಿಸುವುದಿಲ್ಲ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

ಬ್ರಿಜ್‌ ಭೂಷಣ್‌ ಶರಣ್ ಸಿಂಗ್‌ ಅವರ ಮೇಲಿನ ಆರೋಪಗಳ ತನಿಖೆಗೆ ಕ್ರೀಡಾ ಸಚಿವಾಲಯವು ಮಹಿಳಾ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ಸೋಮವಾರ ನೇಮಕ ಮಾಡಿತ್ತು. ಆದರೆ ಬುಧವಾರ ಕುಸ್ತಿ ಪಟುಗಳು ಸಮಿತಿಯನ್ನು ನೇಮಿಸುವ ಮನ್ನ ಕ್ರೀಡಾ ಸಚಿವಾಲಯವು ತಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು (Wrestlers Protest) ಟ್ವೀಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಜತೆಗೆ ತಾವು ಮಾಡಿರುವ ಟ್ವೀಟ್‌ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರ ಟ್ವಿಟರ್ ಖಾತೆಗೆ ಟ್ಯಾಗ್‌ ಮಾಡಿ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು.

ಇದೀಗ ಪ್ರತಿಕ್ರಿಯೆ ನೀಡಿರುವ ಕ್ರೀಡಾ ಸಚಿವಾಲಯ “ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಉಸ್ತುವಾರಿ ಸಮಿತಿಯನ್ನು ಪುನರ್​ ರಚಿಸುವ ಯಾವುದೇ ಯೋಜನೆಯನ್ನು ಸಚಿವಾಲಯ ಹೊಂದಿಲ್ಲ” ಎಂದು ಪಿಟಿಐಗೆ ತಿಳಿಸಿದೆ.

“ನಾವು ಮೇರಿ ಕೋಮ್ ನೇತೃತ್ವದಲ್ಲಿ ನ್ಯಾಯಯುತ ಸಮಿತಿಯನ್ನು ರಚಿಸಿದ್ದೇವೆ. ಈ ಸಮಿತಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸಮಿತಿಯ ರಚನೆಯ ಕುರಿತು ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ಹೊರಹಾಕಿದ ಕುಸ್ತಿಪಟುಗಳ ನಡವಳಿಕೆಯಿಂದ ಸರ್ಕಾರವು ಅಸಮಾಧಾನಗೊಂಡಿದೆ” ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ಇದನ್ನೂ ಓದಿ | Wrestlers Protest: ಬ್ರಿಜ್‌ ಭೂಷಣ್‌ ವಿರುದ್ಧದ ತನಿಖಾ ಸಮಿತಿ; ಕುಸ್ತಿಪಟುಗಳ ಅಸಮಾಧಾನ

Exit mobile version