Site icon Vistara News

ರಾಹುಲ್​ ಏಕದಿನ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿ ಟೆಸ್ಟ್ ಪ್ರದರ್ಶನವನ್ನು ಟೀಕಿಸಿದ ಮಾಜಿ ವೇಗಿ

KL Rahul scored 97 runs against Australia.

ಬೆಂಗಳೂರು: ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಕೆ.ಎಲ್​ ರಾಹುಲ್(KL Rahul)​ ಅವರ ವಿಶ್ವಕಪ್​ ಪ್ರದರ್ಶನವನ್ನು ಕಂಡು ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ವೆಂಕಟೇಶ್‌ ಪ್ರಸಾದ್‌(Venkatesh Prasad) ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಟೆಸ್ಟ್​ ಪ್ರದರ್ಶನವನ್ನು ಟೀಕಿಸಿದ್ದಾರೆ.

ಈ ಹಿಂದೆ ಹಲವು ಬಾರಿ ಬಹಿರಂಗವಾಗಿಯೇ ರಾಹುಲ್​ ವಿಚಾರದಲ್ಲಿ ಟೀಕೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದ ವೆಂಕಟೇಶ್‌ ಪ್ರಸಾದ್‌ ಇದೇ ಮೊದಲ ಬಾರಿಗೆ ರಾಹುಲ್​ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಟ್ವಿಟರ್​ನಲ್ಲಿ ರಾಹುಲ್​ಗೆ ಮೆಚ್ಚುಗೆ ಸೂಚಿಸಿದ್ದು,” ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಾಹುಲ್​ ಉತ್ತಮ ಆಟವಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಪರಿ ಪಕ್ವತೆಯ ಆಟವಾಡಿ ಗಮನಸೆಳೆದಿದ್ದಾರೆ. ಹೀಗಾಗಿ ಅವರ ಏಕದಿನ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತಪಡಿಸುವುದಿಲ್ಲ. ನಾನು ಅವರನ್ನು ಟೀಕಿಸುವುದು ಕೇವಲ ಟೆಸ್ಟ್​ ವಿಚಾರದಲ್ಲಿ” ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಾಹುಲ್​ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಈ ವೇಳೆ ವೆಂಕಿ ಬ್ಯಾಕ್ ಟು ಬ್ಯಾಕ್ ಟ್ವಿಟ್ ಮಾಡಿ ರಾಹುಲ್ ಅವರನ್ನು ಟೀಕಿಸಿದ್ದರು. ಇವರಿಗೆ ಅವಕಾಶ ನೀಡುದಕ್ಕಿಂತ ಬೇರೆ ಆಟಗಾರನಿಗೆ ಅವಕಾಶ ನೀಡಿದರೆ ಉತ್ತಮ. ಬಿಸಿಸಿಐ ಏಕೆ ಇಷ್ಟೋಂದು ಅವಕಾಶ ನೀಡುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದಿದ್ದರು. ಆದರೆ ಈಗ ಉಲ್ಟಾ ಹೊಡೆದಿದ್ದಾರೆ.

“ನನಗೆ ರಾಹುಲ್ ಅವರ ಟೆಸ್ಟ್ ಪ್ರದರ್ಶನದ ಬಗ್ಗೆ ಬೇಸರವಿದೆಯೇ ಹೊರತು ಏಕದಿನ ಸ್ವರೂಪದಲ್ಲಿ ಅಲ್ಲ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2 ರನ್​ಗೆ ಮೂರು ವಿಕೆಟ್​ ಬಿದ್ದಾಗ ಬ್ಯಾಟಿಂಗ್​ ನಡೆಸಲು ಬಂದ ರಾಹುಲ್​ ಯಾವುದೇ ಆತಂಕಕ್ಕೆ ಒಳಗಾಗದೆ ಕೊನೆಯ ತನಕ ನಿಂತು ಪಂದ್ಯವನ್ನು ಗೆಲ್ಲಿಸಿದ್ದು ನಿಜಕ್ಕೂ ಗ್ರೇಟ್​. ಆದರೆ ಟೆಸ್ಟ್ ವಿಚಾರಕ್ಕಾಗಿ ಅವರೊಂದಿಗೆ ಸಣ್ಣ ಮನಸ್ತಾಪ ಹೊಂದಿದ್ದೇನೆ” ಎಂದು ವಿಂಕಿ ಹೇಳಿದ್ದಾರೆ. ಆಸೀಸ್​ ವಿರುದ್ಧ ರಾಹುಲ್​ ಅಜೇಯ 97 ರನ್​ ಬಾರಿಸಿ ಮಿಂಚಿದ್ದರು.

ಇದನ್ನೂ ಓದಿ KL Rahul: ಅಂದು ಕಪಿಲ್​, ಇಂದು ರಾಹುಲ್​; ಇದು ಒಂದು ಬಾತ್​ರೂಮ್​ನ ರೋಚಕ ಕತೆ

ವಿಶ್ವಕಪ್​ ಆರಂಭಕ್ಕೂ ಮುನ್ನ ವೆಂಕಟೇಶ್‌ ಪ್ರಸಾದ್‌ ಅವರು ರಾಹುಲ್​ ಅವರ ಮಾವ ಸುನೀಲ್​ ಶೆಟ್ಟಿ ಜತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್​ ಅವರು ಈ ಬಾರಿಯ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ತೋರುವಂತೆ ತಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.

31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್​ಸಿಬಿ ವಿರುದ್ಧದ ಐಪಿಎಲ್​ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಪ್ರಚಂಡ ಬ್ಯಾಟಿಂಗ್​ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

Exit mobile version