ನವ ದೆಹಲಿ : ತಮ್ಮ ಮತ್ತು ಪತಿ ಯಜ್ವೇಂದ್ರ ಚಹಲ್ (Yuzvendra Chahal) ದಾಂಪತ್ಯದ ಬಗ್ಗೆ ಅಪಸ್ವರ ಎಬ್ಬಿಸಿದವರ ಬಗ್ಗೆ ಕೊರಿಯೊಗ್ರಾಫರ್ ಹಾಗೂ ಯೂಟ್ಯೂಬರ್ ಧನಶ್ರೀ ವರ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿ ಹರಡಿ ಎರಡು ದಿನಗಳಾದ ಬಳಿಕ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಪ್ರಕಟಿಸಿದ ಅವರು ಇಂಥ ಸುದ್ದಿಗಳು ಆಧಾರ ರಹಿತ ಎಂದಿದ್ದಾರೆ. ಜತೆಗೆ. ದ್ವೇಷ ಪೂರಿತ ಹಾಗೂ ನೋವಿನ ಸಂಗತಿ ಎಂದು ಹೇಳಿದ್ದಾರೆ.
ಧನಶ್ರೀ ಅವರು ತಾವು ಕಾಲು ನೋವಿನ ಸಮಸ್ಯೆಗೆ ಒಳಗಾಗಿರುವುದನ್ನೂ ಈ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ನೋವಿನ ಸಮಸ್ಯೆ ನಿವಾರಣೆಗೆ ಸರ್ಜರಿಗೆ ಒಳಗಾಗಿದ್ದಾರೆ. ಶೀಘ್ರ ಗುಣಮಮುಖರಾಗಿ ಡಾನ್ಸ್ ಅಭ್ಯಾಸಕ್ಕೆ ಹೊರಡಬೇಕಾಗಿದೆ. ಕಷ್ಟ ಕಾಲದಲ್ಲಿ ನನ್ನ ಬೆಂಬಲಕ್ಕೆ ನಿಂತ ಪತಿ ಯಜ್ವೇಂದ್ರ ಚಹಲ್‌ಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.
ಏನೆಂದರ ಧನಶ್ರಿ
ಇಲ್ಲಿ ಕೆಲವು ಮಾಹಿತಿಗಳನ್ನು ತಿಳಿಸಬೇಕಾಗಿದೆ. ಕೆಲವೊಂದು ತಮಾಷೆಗಳನ್ನು ನೋಡಿದ ಬಳಿಕ ಇವತ್ತು ತಡವಾಗಿ ಎದ್ದೆ. ದೀರ್ಘ ನಿದ್ದೆ ನನಗೆ ಅವಶ್ಯಕ ಎನಿಸಿತ್ತು. ಕಳೆದ ೧೪ ದಿನಗಳಿಂದ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೆ. ಡಾನ್ಸ್ ಪ್ರಾಕ್ಟೀಸ್ ಮಾಡುವಾಗ ಕಾಲು ನೋವು ಆಗಿ ಲಿಗಮೆಂಟ್ ಸರ್ಜರಿಗೆ ಒಳಗಾದೆ. ನನಗೆ ಆ ಅವಧಿಯಲ್ಲಿ ಎಲ್ಲರ ಬೆಂಬಲವೂ ಬೇಕಾಗಿತ್ತು. ಆದರೆ, ಯಾವುದೂ ಅನಗತ್ಯ ಸುದ್ದಿಗಳನ್ನು ಎತ್ತಿಕೊಂಡು ಹರಡಲಾಯಿತು. ಇಂಥ ಪ್ರಸಂಗಗಳಿಂದ ಹೊರಬರಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.
ಕ್ರಿಕೆಟಿಗ ಯಜ್ವೇಂದ್ರ ಚಹಲ್ ಹಾಗೂ ಧನ ಶ್ರೀ ಅವರು ಡೈವೋರ್ಸ್ ಕೊಡಲು ಮುಂದಾಗಿದ್ದಾರೆ ಎಂಬುದಾಗಿ ಸುದ್ದಿ ಹರಡಿತ್ತು. ಧನಶ್ರಿ ಇನ್‌ಸ್ಟಾಗ್ರಾಮ್‌ನಿಂದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ, ಯಜ್ವೇಂದ್ರ ಹೊಸ ಜೀವನ ಆರಂಭ ಎಂಬುದಾಗಿ ಪೋಸ್ಟ್ ಹಾಕಿದ್ದಾರೆ. ಹೀಗಾಗಿ ಡೈವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿತ್ತು.
ಇದನ್ನೂ ಓದಿ | Yuzvendra Chahal | ನಮ್ಮ ದಾಂಪತ್ಯ ಜೀವನದಲ್ಲಿ ಒಡಕು ಮೂಡಿಲ್ಲ, ವದಂತಿ ಹಬ್ಬಿಸಬೇಡಿ ಎಂದ ಚಹಲ್