Site icon Vistara News

Pro Kabaddi : ಗುಜರಾತ್​ ತಂಡಕ್ಕೆ ಸೆಡ್ಡು ಹೊಡೆಯುವುದೇ ಬುಲ್ಸ್​

Bangalore Bulls

ಅಹ್ಮದಾಬಾದ್: ಪ್ರೊ ಕಬಡ್ಡಿ ಲೀಗ್ (Pro Kabaddi 10ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲಿದೆ. ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ. ಟೂರ್ನಿಯ ಮೊದಲ ಚರಣ ಗುಜರಾತ್​ನಲ್ಲಿ ನಡೆಯುತ್ತಿದ್ದು ಕಬಡ್ಡಿ ಪ್ರೇಮಿಗಳ ಕೌತುಕ ಹೆಚ್ಚಾಗಿದೆ..

ತಮಿಳ್ ತಲೈವಾಸ್ ವಿರುದ್ಧ ದಬಾಂಗ್ ಡೆಲ್ಲಿ ಇದುವರೆಗೆ ಎಂಟು ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಡೆಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದರೆ, ತಲೈವಾಸ್ ಒಂದು ಬಾರಿ ಗೆಲುವು ಸಾಧಿಸಿದೆ. ಉಭಯ ತಂಡಗಳು ಎರಡು ಸಮಬಲದ ಪಂದ್ಯಗಳನ್ನು ಆಡಿವೆ.

ಇದನ್ನೂ ಓದಿ : Pro Kabaddi: ಮೊದಲ ದಿನ ಗುಜರಾತ್​, ಮುಂಬಾ ತಂಡಕ್ಕೆ ಗೆಲುವು

ಗುಜರಾತ್ ಜೈಂಟ್ಸ್ ಮತ್ತು ಬೆಂಗಳೂರು ಬುಲ್ಸ್ ಬಲಶಾಲಿ ತಂಡಳಗಾಗಿದ್ದು. ಸಮಾನರ ನಡುವಿನ ಹೋರಾಟ ಎನಿಸಿಕೊಳ್ಳಲಿದೆ.. ಗುಜರಾತ್ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿರುವ 11 ಪಂದ್ಯಗಳಲ್ಲಿ ತಲಾ 5 ಪಂದ್ಯಗಳನ್ನು ಗೆದ್ದಿವೆ. ಮತ್ತೊಂದು ಗೇಮ್ 30-30ರಲ್ಲಿ ಸಮಬಲ ಸಾಧಿಸಿದೆ.

ಎಲ್ಲಿಯವರೆಗೆ ಟೂರ್ನಿ

ಪಿಕೆಎಲ್ 2023 ಡಿಸೆಂಬರ್ 2, 2023 ರಂದು ಅಹಮದಾಬಾದ್​​ನ ಅರೆನಾ ಬೈ ಟ್ರಾನ್ಸ್ಸ್ಟೇಡಿಯಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಲೀಗ್ ಹಂತವು ಎರಡು ತಿಂಗಳ ಕಾಲ ನಡೆಯಲಿದ್ದು, ಫೆಬ್ರವರಿ 21, 2024 ರಂದು ಕೊನೆಗೊಳ್ಳಲಿದೆ. ವೇಳಾಪಟ್ಟಿಯು ತಂಡಗಳನ್ನು ವಿವಿಧ ಫ್ರ್ಯಾಂಚೈಸಿಗಳ ತವರು ನಗರಗಳಿಗೆ ಹೋಗಲಿದೆ.

ತಂಡಗಳ ವಿವರ ಇಲ್ಲಿದೆ

ತಮಿಳ್ ತಲೈವಾ: ರಿತಿಕ್, ಮಸನ್ಮುತ್ತು ಲಕ್ಷ್ಮಣನ್, ಸತೀಶ್ ಕಾನನ್, ಅಮೀರ್ ಹೊಸೈನ್ ಬಸ್ತಾಮಿ, ಮೊಹಮ್ಮದ್ರೆಜಾ ಕಬುದ್ರಹಂಗಿ, ಅಜಿಂಕ್ಯ ಪವಾರ್, ಸಾಗರ್, ಹಿಮಾಂಶು, ಎಂ ಅಭಿಷೇಕ್, ಸಾಹಿಲ್, ಮೋಹಿತ್, ಆಶಿಶ್, ನರೇಂದರ್, ಹಿಮಾಂಶು, ಜತಿನ್, ಹಿಮಾಂಶು ಸಿಂಗ್, ಸೆಲ್ವಮಣಿ ಕೆ.

ದಬಾಂಗ್ ಡೆಲ್ಲಿ ಕೆ.ಸಿ.: ನಿತಿನ್ ಚಂದೇಲ್, ಬಾಳಾಸಾಹೇಬ್ ಶಹಾಜಿ ಜಾಧವ್, ಆಕಾಶ್ ಪ್ರಶೇರ್, ವಿಕ್ರಾಂತ್, ಫೆಲಿಕ್ಸ್ ಲಿ, ಯುವರಾಜ್ ಪಾಂಡೆಯಾ, ಮೋಹಿತ್, ನವೀನ್ ಕುಮಾರ್, ವಿಜಯ್, ಮಂಜೀತ್, ಆಶಿಶ್ ನರ್ವಾಲ್, ಸೂರಜ್ ಪನ್ವಾರ್, ವಿಶಾಲ್ ಭಾರದ್ವಾಜ್, ಸುನಿಲ್, ಅಶು ಮಲಿಕ್, ಮೀತು.

ಗುಜರಾತ್ ಜೈಂಟ್ಸ್: ಸೋಂಬೀರ್, ವಿಕಾಸ್ ಜಗ್ಲಾನ್, ಸೌರವ್ ಗುಲಿಯಾ, ದೀಪಕ್ ರಾಜೇಂದರ್ ಸಿಂಗ್, ರವಿ ಕುಮಾರ್, ಮೋರ್ ಜಿಬಿ, ಜಿತೇಂದರ್ ಯಾದವ್, ನಿತೇಶ್, ಜಗದೀಪ್, ಬಾಲಾಜಿ ಡಿ, ಮನುಜ್, ಸೋನು, ರಾಕೇಶ್, ರೋಹನ್ ಸಿಂಗ್, ಪಾರ್ತೀಕ್ ದಹಿಯಾ, ಫಝೆಲ್ ಅತ್ರಾಚಲಿ, ರೋಹಿತ್ ಗುಲಿಯಾ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಅರ್ಕಮ್ ಶೇಖ್.

ಬೆಂಗಳೂರು ಬುಲ್ಸ್: ಪಿಯೋಟರ್ ಪಮುಲಕ್, ಪೊನ್ಪರ್ತಿಬನ್ ಸುಬ್ರಮಣಿಯನ್, ಸುಂದರ್, ಸುರ್ಜೀತ್ ಸಿಂಗ್, ಅಭಿಷೇಕ್ ಸಿಂಗ್, ಬಂಟಿ, ಮೋನು, ಅಂಕಿತ್, ಸುಶೀಲ್, ರಕ್ಷಿತ್, ರೋಹಿತ್ ಕುಮಾರ್, ನೀರಜ್ ನರ್ವಾಲ್, ಭರತ್, ಸೌರಭ್ ನಂದಾಲ್, ಯಶ್ ಹೂಡಾ, ವಿಶಾಲ್, ವಿಕಾಸ್ ಖಂಡೋಲಾ, ರಣ್ ಸಿಂಗ್, ಮೊಹಮ್ಮದ್ ಲಿಟನ್ ಅಲಿ.

ಪಂದ್ಯ ವೀಕ್ಷಣೆ ಎಲ್ಲಿ?

ಲೈವ್ ಪಂದ್ಯಗಳನ್ನು ವೀಕ್ಷಿಸಲು ಉತ್ಸುಕರಾಗಿರುವ ಅಭಿಮಾನಿಗಳಿಗಾಗಿ, ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ ಟಿವಿ ಚಾನೆಲ್​ಗಳು ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್​ನ ​ ಹತ್ತನೇ ಆವೃತ್ತಿಯ ಪ್ರಸಾರ ಹಕ್ಕುಗಳನ್ನು ಹೊಂದಿವೆ. ಹೆಚ್ಚುವರಿಯಾಗಿ, ಪಂದ್ಯಗಳು ಡಿಸ್ನಿ + ಹಾಟ್ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​​ನಲ್ಲಿ ಲೈವ್ ಸ್ಟ್ರೀಮಿಂಗ್ಗೆ ಲಭ್ಯವಿರುತ್ತವೆ.

Exit mobile version