ಬೆಂಗಳೂರು: 2024ರಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿರುವ ಭಾರತ ಇದೀಗ ಇಂಗ್ಲೆಂಡ್(IND vs ENG) ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಸರಣಿಯನ್ನಾಡಲು ಅಣಿಯಾಗಿದೆ. ಈ ಸರಣಿಗೆ ಟೀಮ್ ಇಂಡಿಯಾ(Team India) ಆಟಗಾರರು ನಾಳೆ(ಶನಿವಾರ ಜ.20)ಯಿಂದ ಅಭ್ಯಾಸ ಆರಂಭಿಸಲಿದ್ದಾರೆ ಎಂದು ತಂಡದ ಕೋಚ್ ರಾಹುಲ್ ದ್ರಾವಿಡ್(rahul dravid) ಹೇಳಿದ್ದಾರೆ. ಜತೆಗೆ ಆಟಗಾರರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಮೊದಲ ಟೆಸ್ಟ್ ಜನವರಿ 25 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿದೆ.
ಶುಕ್ರವಾರ ಜಿಯೋ ಸಿನೆಮಾ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ದ್ರಾವಿಡ್, “ಇತ್ತೀಚಿನ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ಉತ್ತಮವಾಗಿದೆ. ನಾನು ಸರಣಿಯನ್ನು ಎದುರು ನೋಡುತ್ತಿದ್ದೇನೆ. ಇದು ಆಸಕ್ತಿದಾಯಕ ಸರಣಿಯಾಗಲಿದೆ. ಇಂಗ್ಲೆಂಡ್ ಉತ್ತಮ ತಂಡವಾಗಿದೆ. ಬಲಿಷ್ಠ ತಂಡಗಳ ನಡುವಣ ಈ ಸರಣಿಯ ಎಲ್ಲ ಪಂದ್ಯಗಳು ಕುತೂಹಲ ಮತ್ತು ರೋಚಕವಾಗಿರುವುದರಲ್ಲಿ ಅನುಮಾನವೇ ಬೇಡ” ಎಂದು ದ್ರಾವಿಡ್ ಹೇಳಿದರು.
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಯಾವಾಗ ಆರಂಭ? ಸರಣಿಯ ವಿಶೇಷತೆ ಏನು?
ಆಟಗಾರರಿಗೆ ಖಡಕ್ ಎಚ್ಚರಿಕೆ
ಆಕ್ರಮಣಕಾರಿ ಆಟದಿಂದ ಹೊಸ ಬಾಜ್‌ಬಾಲ್ ಕ್ರಿಕೆಟ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದ್ದಾರೆ. ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಭಾರತದಲ್ಲಿ ಹಲವು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರು ಈ ಸರಣಿಗೆ ಎಲ್ಲ ತಯಾರಿಯನ್ನು ಮಾಡಿ ಆಟಗಾರರನ್ನು ಕಣಕ್ಕಿಳಿಸಲಿದ್ದಾರೆ. ಹೀಗಾಗಿ ಈ ಸರಣಿಯನ್ನು ಭಾರತೀಯ ಆಟಗಾರರು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ತವರಿನ ಪಿಚ್ ಎನ್ನುವ ಕಲ್ಪನೆಯನ್ನು ಬದಿಗಿಟ್ಟು ಕಠಿಣ ಅಭ್ಯಾಸ ನಡೆಸಬೇಕಿದೆ ಎಂದು ಆಟಗಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.
Test series schedule for upcoming England tour. #INDvsENG pic.twitter.com/o3PJAQ5YCq
— Ankit Verma (@TechyWicket) January 19, 2024
ಭರತ್ ಅವರು ಕೀಪಿಂಗ್ ನಡೆಸಿದರೆ, ಅಯ್ಯರ್(Shreyas Iyer) ಅಥವಾ ರಾಹುಲ್ ಮಧ್ಯೆ ಯಾರು ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ? ಯಾರನ್ನು ಆಯ್ಕೆ ಮಾಡುವುದು ಎನ್ನುವುದು ಈಗ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆ.ಎಲ್ ರಾಹುಲ್ ತವರಿನ ಟೆಸ್ಟ್‌ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದರೆ, ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ, ಭರತ್ ಕೀಪಿಂಗ್ ಮಾಡಿದರೆ ರಾಹುಲ್ ಮತ್ತು ಅಯ್ಯರ್ ನಡುವೆ ಪೈಪೋಟಿ ಏರ್ಪಡಲಿದೆ.
ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್ಕೋಟ್ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ. ಇಂಗ್ಲೆಂಡ್ ಪೂರ್ಣ ಪ್ರಮಾಣದ ತಂಡ ಪ್ರಕಟಿಸಿದೆ. ಆದರೆ ಭಾರತ ಕೇವಲ 2 ಟಸ್ಟ್ಗೆ ಮಾತ್ರ ತಂಡ ಪ್ರಕಟಿಸಿದೆ. ಇದರರ್ಥ ಅಂತಿಮ ಮೂರು ಪಂದ್ಯಗಳಿಗೆ ಬದಲಾವಣೆ ನಿಶ್ಚಿತ.
2 ಟೆಸ್ಟ್ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.