Site icon Vistara News

Shubman Gill: ಗಿಲ್​ ಶತಕ ಬಾರಿಸಿದರೂ ಬೇಸರ ವ್ಯಕ್ತಪಡಿಸಿದ ತಂದೆ; ಕಾರಣವೇನು?

shubman gill

ಧರ್ಮಶಾಲಾ: ಭಾರತ ಕ್ರಿಕೆಟ್​ ತಂಡದ ಯುವ ಆಟಗಾರ ಶುಭಮನ್​ ಗಿಲ್(Shubman Gill) ಅವರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 2 ಶತಕ ಬಾರಿಸಿದ್ದಾರೆ. ಆದರೆ, ಅವರ ತಂದೆಗೆ ಮಗ ಮೂರನೇ ಕ್ರಮಾಂಕದಲ್ಲಿ ಆಡುವುದು ಚೂರು ಇಷ್ಟವಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಸ್ವತಃ ಗಿಲ್​ ತಂದೆ ​ಲಖ್ವಿಂದರ್‌(Lakhwinder Singh) ಅವರೇ ಈ ಮಾತನ್ನು ಹೇಳಿದ್ದಾರೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್​ನ(IND vs ENG 5th Test) ಮೊದಲ ಇನಿಂಗ್ಸ್​ನಲ್ಲಿ ಶುಭಮನ್​ ಗಿಲ್​ ಅವರು ಶತಕ ಬಾರಿಸಿ ಟೆಸ್ಟ್ ವೃತಿ ಜೀವನದಲ್ಲಿ ನಾಲ್ಕನೇ ಶತಕವನ್ನು ಪೂರ್ತಿಗೊಳಿಸಿದರು. ಮಗನ ಶತಕವನ್ನು ಕಂಡು ಗ್ಯಾಲರಿಯಲ್ಲಿದ್ದ ಲಖ್ವಿಂದರ್‌ ಸಂಭ್ರಮಾಚರಣೆ ಮಾಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ಮಗನ ಶತಕದ ಬಳಿಕ ಮಾತನಾಡಿದ ಲಖ್ವಿಂದರ್‌, ಗಿಲ್​ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿರುವುದು ತನಗೆ ಇಷ್ಟವಿಲ್ಲ. ಫ್ರಂಟ್‌ ಫುಟ್​ನಲ್ಲಿ ಆಡುತ್ತಿರುವುದು ದೊಡ್ಡ ವ್ಯತ್ಯಾಸ ಉಂಟುಮಾಡಿದೆ. ಅವನಿಗೆ ಓಪನಿಂಗ್‌ ಕ್ರಮಾಂಕವೇ ಸೂಕ್ತ ಎಂದು ಹೇಳಿದರು.

ಈ ಪಂದ್ಯದಲ್ಲಿ ಹೊಡಿಬಡಿ ಆಟವಾಡಿದ ಶುಭಮನ್​ ಗಿಲ್​ 150 ಎಸೆತಗಳಲ್ಲಿ 110 ರನ್ ಬಾರಿಸಿದರು. ಅವರ ಸೆಂಚುರಿ ಇನ್ನಿಂಗ್ಸ್​​​ನಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್​​​ ಸಿಡಿಯಿತು.

ತಂದೆಯ ಶ್ರಮವೂ ಇದೆ

ಶುಭಮನ್ ಪಂಜಾಬಿನ ಜಲಾಲಾಬಾದ ಎಂಬ ಸಣ್ಣ ನಗರದಲ್ಲಿ ಒಬ್ಬ ಸಾಮಾನ್ಯ ರೈತನ ಕುಟುಂಬದಿಂದ ಬಂದವರು. ಆತನ ತಂದೆ ಸುಖವಿಂದರ್ ಮಗನ ಕ್ರಿಕೆಟ್ ಪ್ರತಿಭೆಗೆ ಆಧಾರವಾಗಿ ನಿಂತದ್ದು ನಿಜವಾಗಿಯೂ ಗ್ರೇಟ್! ತನ್ನ ಫಲವತ್ತಾದ ಗದ್ದೆಯನ್ನು ಲೆವೆಲ್ ಮಾಡಿ ಕ್ರಿಕೆಟ್ ಪಿಚ್ ಮಾಡಿ ತನ್ನ ಮಗನ ನೆರವಿಗೆ ನಿಂತವರು ತಂದೆ ಸುಖ್ವಿಂದರ್! ಇಡೀ ದಿನ ಅಪ್ಪನೇ ಬೌಲರ್ ಆಗಿ ಮಗನಿಗೆ ಬ್ಯಾಟಿಂಗ್​ ಪ್ರ್ಯಾಕ್ಟಿಸ್​ ಮಾಡಿಸುತ್ತಿದ್ದರು. ಹೀಗಾಗಿ ಅವರ ಗಿಲ್​ ಆಟದ ವ್ಯತ್ಯಾಸ ತಂದೆಯ ಅರಿವಿಗೆ ಬಂದೇ ಬರುತ್ತದೆ. ಇದೇ ಕಾರಣಕ್ಕೆ ಅವರು ಮಗನಿಗೆ ಆರಂಭಿ ಕ್ರಮಾಂಕವೇ ಸೂಕ್ತ ಎಂದು ಹೇಳಿರಬಹುದು.

ಇದನ್ನೂ ಓದಿ WPL Points Table: ಅಗ್ರಸ್ಥಾನಿ ಡೆಲ್ಲಿ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ಮಗನ ಕ್ರಿಕೆಟ್ ಭವಿಷ್ಯ ರೂಪಿಸಲು ಊರಿನ ಕೃಷಿ ಭೂಮಿಯನ್ನು ಮಾರಿ ಮೊಹಾಲಿಗೆ ಬಂದವರು ಅಪ್ಪ. ಅಲ್ಲಿ ಬಾಡಿಗೆ ಮನೆ ಹಿಡಿದು ಮಗನ ಕ್ರಿಕೆಟ್ ಪ್ರತಿಭೆಗೆ ಆಧಾರವಾಗಿ ನಿಂತವರು ಅವರು! ಶುಭಮನ್ ತನ್ನ ತಂದೆಯ ಕನಸಿಗೆ ರೆಕ್ಕೆ ಮೂಡಿಸಿ ಬೆಳೆಯುತ್ತ ಹೋದರು.

ಬೃಹತ್​ ಮುನ್ನಡೆಯಲ್ಲಿ ಭಾರತ


ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಮೇಲುಗೈ ಸಾಧಿಸಿದೆ. 2ನೇ ದಿನ ಆತಿಥೇಯರು ಆಂಗ್ಲರ ಮೇಲೆ ಸಂಪೂರ್ಣ ಪಾರಮ್ಯ ಸಾಧಿಸಿದ್ದಾರೆ. ಶುಬ್ಮನ್ ಗಿಲ್ (103) ಮತ್ತು ರೋಹಿತ್ ಶರ್ಮಾ (110) ಇಬ್ಬರೂ ಶತಕಗಳನ್ನು ಬಾರಿಸಿದರೆ ಸರ್ಫರಾಜ್ (56) ಮತ್ತು ದೇವದತ್ ಪಡಿಕ್ಕಲ್​​ (65) ಅರ್ಧಶತಕಗಳನ್ನು ದಾಖಲಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಎರಡನೇ ದಿನದಾಟ ಮುಕ್ತಾಯದ ವೇಳೆಗೆ ಭಾರತ ತಂಡ 8 ವಿಕೆಟ್​ಗೆ 473 ರನ್ ಬಾರಿಸಿದ್ದು 255 ರನ್​ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.

Exit mobile version