Site icon Vistara News

Jack Leach: ಟೆಸ್ಟ್​ ಸರಣಿಯಿಂದಲೇ ಹೊರಬಿದ್ದ ಇಂಗ್ಲೆಂಡ್​ ಸ್ಟಾರ್​ ಸ್ಪಿನ್ನರ್​

Jack Leach

ಅಬುಧಾಬಿ: ಭಾರತ(india vs england test series) ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಪ್ರವಾಸಿ ಇಂಗ್ಲೆಂಡ್​ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್​ ಹಾಗೂ ಅನುಭವಿ ಸ್ಪಿನ್ನರ್​ ಜಾಕ್​ ಲೀಚ್(Jack Leach)​ ಅವರು ಎಡ ಮೊಣಕಾಲಿನ ಗಾಯದಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಇಸಿಬಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ ಲೀಚ್​ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ ಮಾಡಿಲ್ಲ.

ಭಾರತ ಮತ್ತು ಇಂಗ್ಲೆಂಡ್​ ನಡುವಣ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15ರಿಂದ ರಾಜ್​ಕೋಟ್​ನಲ್ಲಿ ಆರಣಂಭಗೊಳ್ಳಕಿದೆ. ಭಾರತ ತಂಡ ಕೂಡಕ್ಕೂ ಗಾಯದ ಚಿಂತೆ ತಪ್ಪಿಲ್ಲ. ಶ್ರೇಯಸ್​ ಅಯ್ಯರ್​ ಗಾಯದಿಂದ ಹೊರಬಿದ್ದರೆ, ರಾಹುಲ್​ ಮತ್ತು ಜಡೇಜಾ ಚೇತರಿಕೆ ಕಂಡಿದ್ದರೂ ಆಡುವ ಸ್ಥಿತಿಯಲ್ಲಿಲ್ಲ. ಈ ಮಧ್ಯೆ ಇಂಗ್ಲೆಂಡ್​ ಆಟಗಾರು ಕೂಡ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಇಂಗ್ಲೆಂಡ್​ ಆಟಗಾರರು ಸದ್ಯ ಅಬುಧಾಬಿಯಲ್ಲಿ ವಿಶ್ರಾಂತಿ ಮತ್ತು ತರಬೇತಿ ಪಡೆಯುತ್ತಿದೆ. ದ್ವಿತೀಯ ಟೆಸ್ಟ್​ ಪಂದ್ಯ ಮುಕ್ತಾಯ ಕಂಡ ತಕ್ಷಣವೇ ಸ್ಟೋಕ್ಸ್​ ಪಡೆ ಅಬುಧಾಬಿಗೆ ವಿಮಾನ ಏರಿತ್ತು. ಭಾರತ ಪ್ರವಾಸಕ್ಕೆ ಬರುವ ಮುನ್ನವೂ ಇಂಗ್ಲೆಂಡ್​ ಅಬುಧಾಬಿಯಲ್ಲೇ ತರಬೇತಿ ಶಿಬಿರ ಆಯೋಜಿಸಿತ್ತು.

ಇದನ್ನೂ ಓದಿ U19 World Cup Final: ಭಾರತ ಗೆಲುವಿಗೆ 254 ರನ್​ ಗುರಿ ನೀಡಿದ ಆಸ್ಟ್ರೇಲಿಯಾ

ಇಂಗ್ಲೆಂಡ್ ಟೆಸ್ಟ್ ತಂಡ


ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫಾಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್, ಓಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಗಸ್ ಅಟ್ಕಿನ್ಸನ್.

ಭಾರತ ಟೆಸ್ಟ್​ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್​ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Exit mobile version