Site icon Vistara News

Pro kabaddi | ಜಿದ್ದಾಜಿದ್ದಿನ ಹೋರಾಟದಲ್ಲಿ ಗುಜರಾತ್‌ ವಿರುದ್ಧ ಗೆದ್ದ ಜೈಪುರ ಪಿಂಕ್‌ ಪ್ಯಾಂಥರ್ಸ್‌

ಬೆಂಗಳೂರು : ಪ್ರೊ ಕಬಡ್ಡಿ ಲೀಗ್‌ನ (Pro kabaddi) ೯ನೇ ಆವೃತ್ತಿಯ ಶನಿವಾರದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ೨೫-೧೮ ಅಂಕಗಳಿಂದ ಗುಜರಾತ್‌ ಜಯಂಟ್ಸ್‌ ತಂಡದ ವಿರುದ್ಧ ಜಯ ಸಾಧಿಸಿತು. ಇದು ಜೈಪುರ ತಂಡದ ಪಾಲಿನ ಹ್ಯಾಟ್ರಿಕ್‌ ಗೆಲುವಾಗಿದೆ. ಮೊದಲ ಪಂದ್ಯದ ಸೋಲಿನ ಬಳಿಕ ಪ್ಯಾಂಥರ್ಸ್‌ ಬಳಗ ಸತತವಾಗಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿತು. ಗುಜರಾತ್‌ ಜಯಂಟ್ಸ್‌ ತಂಡಕ್ಕೆ ಸತತ ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಟೈ ಫಲಿತಾಂಶ ಪಡೆದುಕೊಂಡಿದ್ದ ಗುಜರಾತ್‌ ಬಳಗ ನಂತರದ ಪಂದ್ಯದಲ್ಲಿ ಜಯ ಸಾಧಿಸಿತು. ಆ ಬಳಿಕ ಎರಡೂ ಹಣಾಹಣಿಯಲ್ಲಿ ಸೋಲು ಅನುಭವಿಸಿದೆ.

ಆರಂಭದಿಂದಲೇ ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ನಡೆಯಿತು. ಇತ್ತಂಡಗಳ ಡಿಫೆನ್ಸ್‌ ವಿಭಾಗ ಹೆಚ್ಚು ಕಾರ್ಯಪ್ರವೃತ್ತಗೊಂಡಿದ್ದ ಕಾರಣ ರೇಡರ್‌ಗಳಿಗೆ ಅಂಕ ಗಳಿಸಲು ಕಷ್ಟವಾಯಿತು. ಪ್ರಥಮಾರ್ಧದ ಮುಕ್ತಾಯದ ವೇಳೆಗೆ ಜೈಪುರ ತಂಡ ೧೨-೯ ಅಂಕಗಳಿಂದ ಮುನ್ನಡೆ ಸಾಧಿಸಿಕೊಂಡಿತು. ಅದೇ ಮುನ್ನಡೆಯೊಂದಿಗೆ ಆಡಿದ ಜೈಪುರ ಬಳಗ ದ್ವಿತೀಯಾರ್ಧದಲ್ಲಿ ೧೩ ಅಂಕ ಪಡೆದುಕೊಂಡರೆ, ಗುಜರಾತ್‌ಗೆ ೯ ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಜೈಪುರ ತಂಡದ ಪರ ರಾಹುಲ್‌ ಚೌಧರಿ ೫ ಅಂಕಗಳನ್ನು ಸಂಪಾದಿಸಿದರೆ, ಡಿಫೆಂಡರ್ ಅಂಕುಶ್‌ ೩ ಅಂಕಗಳನ್ನು ಕಲೆ ಹಾಕಿದರು. ಅರ್ಜುನ್‌ ದೇಸ್ವಾಲ್‌ ರೇಡಿಂಗ್‌ ಮೂಲಕ ನಾಲ್ಕು ಅಂಕಗಳನ್ನು ತಂಡಕ್ಕೆ ತಂದುಕೊಟ್ಟರು. ಗುಜರಾತ್‌ ಪರ ಆಲ್‌ರೌಂಡರ್‌ ಶಶಾಂಕ್‌ ಗಡಾಯಿ ೩ ಅಂಕಗಳನ್ನು ಮಾತ್ರ ಪಡೆದುಕೊಂಡರು.

ಇದನ್ನೂ ಓದಿ | Pro Kabaddi | ಹರಿಯಾಣ ಸ್ಟೀಲರ್ಸ್ ಗೆಲುವು ಕಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌

Exit mobile version