Site icon Vistara News

James Anderson: ಧರ್ಮಶಾಲಾದಲ್ಲಿ ಆ್ಯಂಡರ್ಸನ್​ ವಿಶ್ವ ದಾಖಲೆ ಬರೆಯುವುದು ಖಚಿತ!

James Anderson

ಧರ್ಮಶಾಲಾ: ಇಂಗ್ಲೆಂಡ್​ ತಂಡದ ಪ್ರಧಾನ ವೇಗಿ ಜೇಮ್ಸ್​ ಆ್ಯಂಡರ್ಸನ್​(James Anderson) ಅವರ ಬಹು ದಿನಗಳ ಕನಸು ಧರ್ಮಶಾಲಾ ಟೆಸ್ಟ್​ನಲ್ಲಿ(India vs England 5th Test) ಸಾಕಾರಗೊಳ್ಳುವ ಎಲ್ಲ ಸಾಧ್ಯತೆ ಇದೆ. ಭಾರತ ಎದುರಿನ ಟೆಸ್ಟ್​ ಸರಣಿ ಆರಂಭವಾದ ದಿನದಿಂದಲೂ ಆ್ಯಂಡರ್ಸನ್​ ಅವರು 700 ವಿಕೆಟ್​ ಮೇಲುಗಲ್ಲು ಯಾವಾಗ ಪೂರ್ತಿಗೊಳ್ಳುತ್ತದೆ ಎಂದು ಅಭಿಮಾನಿಗಳು ಕಾದು ಕೂಳಿತಿದ್ದರು. ಈ ಹಿಂದಿನ 2 ಟೆಸ್ಟ್​ಗಳಲ್ಲಿಯೇ ಇದು ಸಾಧ್ಯವಾಗಬೇಕಿತ್ತು. ಆದರೆ ಅವರಿಗೆ ಹೆಚ್ಚಿನ ವಿಕೆಟ್​ ಬಿದ್ದಿರಲಿಲ್ಲ.

ಧರ್ಮಶಾಲಾದಲ್ಲಿ ನಾಳೆಯಿಂದ ಆರಂಭಗೊಳ್ಳಲಿರುವ ಅಂತಿಮ ಟೆಸ್ಟ್​ನಲ್ಲಿ ಜೇಮ್ಸ್​ ಆ್ಯಂಡರ್ಸನ್​ ಅವರು 2 ವಿಕೆಟ್​ ಕಿತ್ತರೆ ಅವರ 700 ವಿಕೆಟ್​ ಕಿತ್ತ ವಿಶ್ವದದ ಮೊದಲ ವೇಗಿ ಎನಿಸಿಕೊಳ್ಳಲಿದ್ದಾರೆ. ಜತೆಗೆ ಅವರ ಟೆಸ್ಟ್​ ವೃತ್ತಿ ಬದುಕು ಕೂಡ ಪರಿಪೂರ್ಣಗೊಳ್ಳಲಿದೆ. ವಯಸ್ಸು 41 ದಾಡಿದರೂ ಕೂಡ ದೀರ್ಘ ಸ್ವರೂಪದ ಟೆಸ್ಟ್​ ಕ್ರಿಕೆಟ್​ ಆಡುತ್ತಿರುವುದು ಸಾಮಾನ್ಯ ಮಾತಲ್ಲ. ಇಂದಿನ ಯುವ ಕ್ರಿಕೆಟಿಗರು ಒಂದೆರಡು ಸರಣಿ ಆಡಿ ಬಳಿಕ ಮಾನಸಿಕವಾಗಿ ಬಳಲಿದ್ದೇನೆ ಎಂದು ಕ್ರಿಕೆಟ್​ನಿಂದ ಹಿಂದೆ ಸರಿಯುತ್ತಾರೆ. ಅಂತಹದರಲ್ಲಿ ಆ್ಯಂಡರ್ಸನ್ ಅವರ ದೃಢತೆಗೆ ದೊಡ್ಡ ಸಲಾಂ ಹೇಳಲೇ ಬೇಕು.

700 ವಿಕೆಟ್​ ಗಡಿ ದಾಟಿದರೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್​ ಎಂಬ ಖ್ಯಾತಿಗೆ ಆ್ಯಂಡರ್ಸನ್ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ಭರ್ತಿ 800 ವಿಕೆಟ್​ ಪಡೆದಿದ್ದಾರೆ. ಈ ಸಾರ್ವಕಾಲಿಕ ದಾಖಲೆ ಮುರಿಯಲು ಸದ್ಯಕ್ಕೆ ಯಾರಿಂದಲೂ ಸಾಧ್ಯವಾಗದು ಎಂದರೂ ತಪ್ಪಾಗಲಾರದು. ಆಸ್ಟ್ರೇಲಿಯಾದ ದಿವಂಗತ ಕ್ರಿಕೆಟಿಗ ಶೇನ್​ ವಾರ್ನ್ ಅವರು 708 ಟೆಸ್ಟ್​ ವಿಕೆಟ್ ಕಿತ್ತು ದ್ವಿತೀಯ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ IND vs ENG 5th Test: ಭಾರತವನ್ನು ಮಣಿಸಲು ದಲೈ ಲಾಮಾ ಆಶೀರ್ವಾದ ಪಡೆದ ಇಂಗ್ಲೆಂಡ್​ ಕ್ರಿಕೆಟಿಗರು

ಆ್ಯಂಡರ್ಸನ್​ಗೆ ವಾರ್ನ್​ ವಿಕೆಟ್​ ದಾಖಲೆ ಮುರಿಯುವು ಕಷ್ಟವಾಗದು. ಏಕೆಂದರೆ ಅವರು ಇನ್ನೊಂದು ವರ್ಷ ಕ್ರಿಕೆಟ್​ ಆಡಿದರೂ ಈ ದಾಖಲೆ ಮುರಿಯಬಹುದು. ಈ ದಾಖಲೆಯನ್ನು ಮುರಿಯಲು ಅವರಿಗೆ ಬೇಕಿರುವುದು ಕೂಡ  10 ವಿಕೆಟ್ ಇದನ್ನು ಒಂದೆಡರು ಸರಣಿಯಲ್ಲಿ ಅವರು ಮಾಡಲಿದ್ದಾರೆ.

2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜೇಮ್ಸ್​ ಆ್ಯಂಡರ್ಸನ್​ ಅವರು ಇಂಗ್ಲೆಂಡ್​ ಕಂಡ ಶ್ರೇಷ್ಠ ಬೌಲರ್​ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅವರು 186 ಟೆಸ್ಟ್​ ಪಂದ್ಯ ಆಡಿ 698* ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್​ ಪಡೆದಿದ್ದಾರೆ.

Exit mobile version