Site icon Vistara News

James Anderson: ನಿವೃತ್ತಿ ಸುಳಿವು ನೀಡಿದ ಜೇಮ್ಸ್ ಆ್ಯಂಡರ್ಸನ್

James Anderson

ಲಂಡನ್‌: ಇಂಗ್ಲೆಂಡ್​ ಕ್ರಿಕೆಟ್​ ತಂಡದ ವೇಗದ ಬೌಲಿಂಗ್ ದಿಗ್ಗಜ ಜೇಮ್ಸ್ ಆ್ಯಂಡರ್ಸನ್(James Anderson) ಅವರು ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​ ಟೆಸ್ಟ್​(the ashes 2023) ಸರಣಿಯ 5ನೇ ಪಂದ್ಯ ಅವರಿಗೆ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅಂತಿಮ ಪಂದ್ಯಕ್ಕೂ ಆ್ಯಂಡರ್ಸನ್ ಅವರನ್ನು ಇಂಗ್ಲೆಂಡ್​ ತಂಡದಲ್ಲಿ ಮುಂದುವರಿಸಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್​ ಪಂದ್ಯ ಗುರುವಾರ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್​ ಅವರು “ತನ್ನಲ್ಲಿ ಇನ್ನೂ ಕೂಡ ಟೆಸ್ಟ್​ ಕ್ರಿಕೆಟ್​ ಆಡುವ ಹಸಿವು ಇದೆ” ಎಂದು ದ್ವಂದ್ವ ಹೇಳಿಕೆ ನೀಡುವ ಮೂಲಕ ತಮ್ಮ ಕ್ರಿಕೆಟ್​ ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ವಿಚಾರವಾಗಿ ನಾಯಕ ಬೆನ್​ ಸ್ಟೋಕ್ಸ್​ ಕೂಡ ಮಾತನಾಡಿದ್ದು, ಆ್ಯಂಡರ್ಸನ್​ ಅವರು ತಂಡದಲ್ಲಿ ಇನ್ನೂ ಕ್ರಿಕೆಟ್ ಆಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆ್ಯಶಸ್​ ಸರಣಿಯ ಅಂತಿಮ ಪಂದ್ಯದಲ್ಲಿಯೂ ಅವರು ಆಡಲಿದ್ದಾರೆ ಎಂದು ಹೇಳುವ ಮೂಲಕ ಹಿರಿಯ ಆಟಗಾರನಿಗೆ ಸ್ಮರಣೀಯ ಬೀಳ್ಕೊಡುಗೆ ನಡೆಸುವ ಸಿದ್ಧತೆ ಮಾಡಿದಂತಿದೆ.

ನಾಲ್ಕನೇ ಟೆಸ್ಟ್​ ಮುಗಿದ ಸಂದರ್ಭದಲ್ಲಿ ಆ್ಯಂಡರ್ಸನ್ ಅವರು ಕಳೆದ 10-15 ವರ್ಷಗಳ ತಮ್ಮನ್ನು ತಂಡದಲ್ಲಿ ಆಡಿಸಬೇಕೋ ಅಥವಾ ಬೇಡವೋ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಆದರೆ ನನ್ನಲ್ಲಿ ಇನ್ನೂ ಕ್ರಿಕೆಟ್​ ಜೀವಂತವಾಗಿದೆ. ನಾನು ನಿರಂತರವಾಗಿ ಕೋಚ್ ಹಾಗೂ ನಾಯಕನ ಜತೆ ಮಾತುಕತೆ ನಡೆಸಿದ್ದೇನೆ. ಅವರು ನನ್ನನ್ನು ತಂಡದಲ್ಲಿ ಮುಂದುವರಿಸಲು ಬಯಸಿದ್ದಾರೆ. ನನ್ನಲ್ಲಿ ಎಲ್ಲಿಯವರೆಗೆ ವಿಕೆಟ್ ಕಬಳಿಸುವ ಶಕ್ತಿ ಇದೆಯೋ ಅಲ್ಲಿಯ ವರೆಗೆ ಕ್ರಿಕೆಟ್​ ಆಡುತ್ತೇನೆ” ಎಂದಿದ್ದರು.

ಇದನ್ನೂ ಓದಿ IND vs WI 1st ODI: ಭಾರತಕ್ಕೆ ಸಡ್ಡು ಹೊಡೆದೀತೆ ವಿಂಡೀಸ್​?

ಈಗಾಗಲೇ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್​ ಇನ್ನೇನು ಗೆದ್ದು ಸರಣಿಯನ್ನು ಸಮಬಲ ಮಾಡುತ್ತದೆ ಎನ್ನುವಷ್ಟರಲ್ಲಿ ಇದಕ್ಕೆ ಮಳೆ ಅಡ್ಡಿಪಡಿಸಿ ಪಂದ್ಯ ರದ್ದುಗೊಂಡಿತು. ಇದೀಗ ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವುದು ಇಂಗ್ಲೆಂಡ್​ನ ಯೋಜನೆಯಾಗಿದೆ.

Exit mobile version