Site icon Vistara News

James Anderson: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಜೇಮ್ಸ್​ ಆ್ಯಂಡರ್ಸನ್

James Anderson

ವಿಶಾಖಪಟ್ಟಣಂ: ಭಾರತ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ(India vs England 2nd Test) ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ನೂತನ ದಾಖಲೆ ಬರೆದಿದ್ದಾರೆ. 41 ವರ್ಷದ ​ಆ್ಯಂಡರ್ಸನ್ ಪದಾರ್ಪಣೆ ಪಂದ್ಯದಿಂದ ಹಿಡಿದು ಇದುವರೆಗೆ ಆಡಿದ ಎಲ್ಲ ಟೆಸ್ಟ್​ ಪಂದ್ಯಗಳಲ್ಲಿ ವಿಕೆಟ್​ ಕಿತ್ತ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ(Dr. Y.S. Rajasekhara Reddy ACA-VDCA Cricket Stadium) ನಡೆಯುತ್ತಿರುವ ದ್ವಿತೀಯ ಟೆಸ್ಟ್​ನ ದ್ವಿತೀಯ ದಿನದಾಟದಲ್ಲಿ ಆ್ಯಂಡರ್ಸನ್ 47 ರನ್​ಗೆ 3 ವಿಕೆಟ್​ ಕಿತ್ತು ಮಿಂಚಿದರು. ಇದೇ ವೇಳೆ ಅವರು ಪ್ರತಿ ವರ್ಷ ಆಡಿದ ಟೆಸ್ಟ್​ನಲ್ಲಿ ವಿಕೆಟ್ ಕಬಳಿಸಿದ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು. 2003ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಆ್ಯಂಡರ್ಸನ್ ಇದೀಗ 2024 ರಲ್ಲೂ ವಿಕೆಟ್ ಪಡೆಯುತ್ತಿದ್ದಾರೆ.

ಸದ್ಯ 184 ಟೆಸ್ಟ್ ಪಂದ್ಯ ಆಡಿರುವ 41 ವರ್ಷದ ಜೇಮ್ಸ್ ಅ್ಯಂಡರ್ಸನ್ 693* ವಿಕೆಟ್​ ಕಬಳಿಸಿದ್ದಾರೆ. ಇನ್ನು ಕೇವಲ 7 ವಿಕೆಟ್​ ಪಡೆದರೆ 700 ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ. ಟೆಸ್ಟ್​ನಲ್ಲಿ 700 ವಿಕೆಟ್​ ಕಿತ್ತ ವಿಶ್ವದ ಮೊದಲ ವೇಗಿ ಎನ್ನುವ ದಾಖಲೆ ಬರೆಯಲಿದ್ದಾರೆ.

ದಾಖಲೆ ಬರೆದ ಬುಮ್ರಾ


ಟೀಮ್​ ಇಂಡಿಯಾದ ಘಾತಕ ವೇಗಿ ಜಸ್​ಪ್ರೀತ್​ ಬುಮ್ರಾ ಅವರು ಜೋ ರೂಟ್​(Joe Root) ವಿಕೆಟ್​ ಕೀಳುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ.  ಜಸ್​ಪ್ರೀತ್​ ಬುಮ್ರಾ ಅವರು ಟೆಸ್ಟ್​ನಲ್ಲಿ ರೂಟ್​ ಅವನ್ನು 8ನೇ ಬಾರಿ ಔಟ್​ ಮಾಡಿದ ದಾಖಲೆ ತಮ್ಮದಾಗಿಸಿಕೊಂಡರು. ಬುಮ್ರಾ ಅವರು 20 ಇನ್ನಿಂಗ್ಸ್‌ಗಳಲ್ಲಿ ರೂಟ್​ಗೆ ಬಿಟ್ಟುಕೊಟ್ಟದ್ದು ಕೇವಲ 245 ರನ್ ಮಾತ್ರ.

ಇದನ್ನೂ ಓದಿ Jasprit Bumrah: ಜೋ ರೂಟ್​ ವಿಕೆಟ್​ ಕಿತ್ತು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 6 ವಿಕೆಟ್​ಗೆ 336 ರನ್​ ಗಳಿಸಿದಲ್ಲಿಂದ ದ್ವಿತೀಯ ದಿನದಾಟ ಆರಂಭಿಸಿದ ಭಾರತ ಯಶಸ್ವಿ ಜೈಸ್ವಾಲ್(209)​ ಅವರ ದ್ವಿಶತಕದ ನೆರವಿನಿಂದ 396 ರನ್​ ಬಾರಿಸಿತು. ಗುರಿ ಬೆನ್ನಟ್ಟಿರುವ ಇಂಗ್ಲೆಂಡ್​ ಪ್ರಮುಖ ಆಟಗಾರರ ವಿಕೆಟ್​ ಕಳೆದುಕೊಂಡು ಇನಿಂಗ್ಸ್​ ಹಿನ್ನಡೆ ಭೀತಿಯಲ್ಲಿದೆ

Exit mobile version