ಟೋಕಿಯೊ: ಜಪಾನ್ ಓಪನ್ ಸೂಪರ್-750 ಬ್ಯಾಡ್ಮಿಂಟನ್(Japan Open 2023) ಟೂರ್ನಿಯ ಸೆಮಿಫೈನಲ್‌ನಲ್ಲಿ ಪ್ರತಿಭಾನ್ವಿತ ಶಟ್ಲರ್ ಲಕ್ಷ್ಯ ಸೇನ್(lakshya sen) ಸೋಲು ಕಂಡಿದ್ದಾರೆ. ಕೂಟದಲ್ಲಿ ಉಳಿದಿದ್ದ ಏಕೈಕ ಭಾರತಿಯ ಆಟಗಾರನಾನ ಸೋಲಿನಿಂದ ಭಾರತದ ಹೋರಾಟ ಅಂತ್ಯಕಂಡಿದೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ(Jonatan Christie) ಎದುರು ಮೂರು ಗೇಮ್ಗಳ ಹೋರಾಟ ನಡೆಸಿ 21-15, 13-21, 21-16 ಸೋಲು ಕಂಡರು. ಮೊದಲ ಗೇಮ್ ಸೋತರು ದ್ವಿತೀಯ ಗೇಮ್ನಲ್ಲಿ ತಿರುಗಿ ಬಿದ್ದು ಪಂದ್ಯವನ್ನು ಸಮಬಲಕ್ಕೆ ತಂದರು. ಆದರೆ ನಿರ್ಣಾಯಕ ಗೇಮ್ನಲ್ಲಿ ಇದೇ ಲಯವನ್ನು ಮುಂದುವರಿಸುವಲ್ಲಿ ಎಡವಿ ಪರಾಭವಗೊಂಡರು. ಇದು ಲಕ್ಷ್ಯ ಸೇನ್ ಕಂಡ ಸತತ 3ನೇ ಸೆಮಿಫೈನಲ್. ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಕೂಟಗಳಲ್ಲೂ ಅವರು ಉಪಾಂತ್ಯ ತಲುಪಿದ್ದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೇನ್ ಅವರು 21-15, 21-19 ಅಂತರದಿಂದ ಆತಿಥೇಯ ಜಪಾನ್‌ನ ಕೋಕಿ ವಟನಾಬೆ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶ ಪಡೆದಿದ್ದರು.
ಇದನ್ನೂ ಓದಿ Lakshya Sen: ಭಾರತದ ಲಕ್ಷ್ಯ ಸೇನ್, ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಚಾಂಪಿಯನ್
That was some fight 🙌
— BAI Media (@BAI_Media) July 29, 2023
Well played Lakshya!
📸: @badmintonphoto #JapanOpen2023#Badminton pic.twitter.com/FzFrjVYg3D
ಸೋಲು ಕಂಡ ಚಿರಾಗ್-ಸಾತ್ವಿಕ್
ವರ್ಷದ ಮೂರು ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದು ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಭಾರತದ ಸ್ಟಾರ್ ಪುರುಷ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶುಕ್ರವಾರ ಕ್ವಾರ್ಟರ್ ಫೈನಲ್ನಲ್ಲಿ ಒಲಿಂಪಿಕ್ ವಿಜೇತರಾದ ಚೈನೀಸ್ ತೈಪೆನ ಲೀ ಯಾಂಗ್ ಮತ್ತು ವಾಂಗ್ ಚಿ-ಲಾನ್ ವಿರುದ್ಧ 15-21, 25-23, 16-21 ಅಂತರದಿಂದ ಪರಾಭವಗೊಂಡಿದ್ದರು. ದ್ವಿತೀಯ ಗೇಮ್ನಲ್ಲಿ ಪ್ರಬಲ ಪೈಪೋಟಿ ನೀಡಿ ಗೆಲುವು ದಾಖಲಿಸಿದ ಭಾರತೀಯ ಜೋಡಿ ಅಂತಿಮ ಗೇಮ್ನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಶರಣಾಗಿದ್ದರು.