ಬೆಂಗಳೂರು : ಐಪಿಎಲ್ ೧೬ನೇ ಆವೃತ್ತಿಗೆ (IPL 2023) ಆಟಗಾರರ ನಡುವಿನ ಟ್ರೇಡಿಂಗ್ ಪ್ರಕ್ರಿಯೆ ಆರಂಭಗೊಂಡದ್ದು, ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡಾರ್ಫ್, ಮುಂಬಯಿ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.
ಜೇಸನ್ ಅವರನ್ನು ಕಳೆದ ಆವೃತ್ತಿಯ ಐಪಿಎಲ್‌ಗೆ ಮೊದಲು ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ತಂಡ ೭೫ ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿ ಮಾಡಿತ್ತು. ಅವರನ್ನು ಮುಂಬಯಿ ಇಂಡಿಯನ್ಸ್ ತಂಡ ತನ್ನ ಪಾಲಿಗೆ ತೆಗೆದುಕೊಂಡಿದೆ. ಮುಂದಿನ ಆವೃತ್ತಿಯ ಐಪಿಎಲ್‌ಗೆ ಡಿಸೆಂಬರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಬಹುದು ಎಂದು ವರದಿಯಾಗಿದೆ. ಅಂತೆಯೇ ಅದಕ್ಕಿಂತ ಒಂದು ತಿಂಗಳು ಮೊದಲು ಉಳಿಕೆ ಆಟಗಾರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ಅಂತೆಯೇ ಇದೀಗ ತಮಗೆ ಬೇಕಾಗಿರುವ ಆಟಗಾರರು ಬೇರೆ ಫ್ರಾಂಚೈಸಿಗಳಲ್ಲಿ ಇದ್ದರೆ ಅವರನ್ನು ಖರೀದಿಸುವ ಕೆಲಸಗಳು ಅರಂಭಗೊಂಡಿವೆ. ಅದಾದ ಬಳಿಕ ತಮಗೆ ಬೇಡವಾದ ಆಟಗಾರರನ್ನು ಫ್ರಾಂಚೈಸಿಗಳು ಕೈಬಿಡಲಿವೆ. ಆ ಆಟಗಾರರಿಗಾಗಿ ಹರಾಜಿನಲ್ಲಿ ಉಳಿದ ಫ್ರಾಂಚೈಸಿಗಳು ಹೂಡಿಕೆ ಮಾಡಲಿವೆ.
ಬೆಹ್ರೆನ್‌ಡಾರ್ಫ್ ಅವರದ್ದು ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಮೊಟ್ಟ ಮೊದಲ ಟ್ರೇಡಿಂಗ್ ಅಗಿದೆ. ಜೇಸನ್ ಅವರು ೨೦೨೧ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರೆ, ೨೦೧೮ರಲ್ಲಿ ಮುಂಬಯಿ ಇಂಡಿಯನ್ಸ್ದ್ ತಂಡದ ಭಾಗವಾಗಿದ್ದರು.
ಇದನ್ನೂ ಓದಿ | Boycott IPL | ವಿಶ್ವ ಕಪ್ ಸೆಮಿ ಫೈನಲ್ ಸೋಲಿನ ಬಳಿಕ ಬಾಯ್ಕಾಟ್ ಐಪಿಎಲ್ ಟ್ರೆಂಡಿಂಗ್ ಜೋರು