Site icon Vistara News

Jasprit Bumrah: ಬುಮ್ರಾ ಕಮ್​ಬ್ಯಾಕ್​ ಬಗ್ಗೆ ಮಹತ್ವದ ಅಪ್​ಡೇಟ್​ ನೀಡಿದ ನಾಯಕ ರೋಹಿತ್​ ಶರ್ಮ

jasprit bumrah and rohit sharma

ಬಾರ್ಬಡಾಸ್​: ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸರಿ ಸುಮಾರು ಒಂದುವರೆ ವರ್ಷಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಜಸ್​ಪ್ರೀತ್​ ಬುಮ್ರಾ(Jasprit Bumrah Fitness) ಅವರ ಕ್ರಿಕೆಟ್​ ಕಮ್​ಬ್ಯಾಕ್​ ಯಾವಾಗ ಎಂಬ ಅಭಿಮಾನಿಗಳ ಕಾಯುವಿಕೆಗೆ ನಾಯಕ ರೋಹಿತ್​(Rohit Sharma) ಶರ್ಮ ತೆರೆ ಎಳೆದಿದ್ದಾರೆ. ಬಹುನಿರೀಕ್ಷಿತ ಏಷ್ಯಾ ಕಪ್​(Asia Cup) ಟೂರ್ನಿಗೂ ಮುನ್ನವೇ ಬುಮ್ರಾ ಟೀಮ್​ ಇಂಡಿಯಾ(Team India) ಸೇರಲಿದ್ದಾರೆ ಎಂದು ರೋಹಿತ್​ ಹೇಳಿದ್ದಾರೆ.

ವಿಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ರೋಹಿತ್​ ಶರ್ಮ ಅವರು ಬುಮ್ರಾ ಅವರ ಮರಳುವಿಕೆಯನ್ನು ತಿಳಿಸಿದ್ದಾರೆ. ಐರ್ಲೆಂಡ್​ ವಿರುದ್ಧದ ಟಿ 20 ಸರಣಿಯಲ್ಲಿ ಆಡುವ ಮೂಲಕ ಬುಮ್ರಾ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ರೋಹಿತ್​ ತಿಳಿಸಿದ್ದಾರೆ.

“ಜಸ್​ಪ್ರೀತ್​ ಬುಮ್ರಾ ಅವರು ಸಂಪೂರ್ಣ ಫಿಟ್​ ಆಗಿದ್ದಾರೆ. ಈಗಾಗಲೇ ಅವರ ಫಿಟ್​ನೆಸ್​ ಬಗ್ಗೆ ಎನ್​ಸಿಎ(NCA) ವರದಿ ಸಲ್ಲಿಸಿದ್ದು ಅವರು ಕ್ರಿಕೆಟ್​ ಆಡಲು ಸಂಪೂರ್ಣ ಸಜ್ಜಾಗಿದ್ದಾರೆ ಎಂದು ತಿಳಿಸಿದೆ. ಹೀಗಾಗಿ ಅವರು ಐರ್ಲೆಂಡ್​ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದಲ್ಲದೆ ಏಕದಿನ ವಿಶ್ವಕಪ್​ ದೃಷ್ಟಿಯಲ್ಲಿ ಬುಮ್ರಾ ಹಲವು ಸರಣಿಯಲ್ಲಿಯೂ ಆಡಲಿದ್ದಾರೆ” ಎಂದು ರೋಹಿತ್​ ಖಚಿತಪಡಿಸಿದ್ದಾರೆ.

ಸದ್ಯ ಬೆಂಗಳೂರಿನ ಎನ್​ಸಿಎಯಲ್ಲಿರುವ ಬುಮ್ರಾ ದಿನಕ್ಕೆ 8ರಿಂದ 10 ಓವರ್ ಬೌಲಿಂಗ್ ನಡೆಸುತ್ತಿದ್ದಾರೆ. ಬುಮ್ರಾ ಅವರ ಫಿಟ್​ನೆಸ್ ಬಗ್ಗೆ​ ಕಳೆದ ವಾರ ಎನ್​ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಮಾಹಿತಿ ನೀಡಿದ್ದು ಶೀಘ್ರದಲ್ಲೇ ಭಾರತ ತಂಡ ಸೇರಲಿದ್ದಾರೆ ಎಂದಿದ್ದರು.

ಇದನ್ನೂ ಓದಿ Jasprit Bumrah: ಫಿಟ್​ನೆಸ್​ ಬಗ್ಗೆ ಬಿಗ್​ ಅಪ್​ಡೇಟ್​ ನೀಡಿದ ಬುಮ್ರಾ; ಈ ಸರಣಿಯಲ್ಲಿ ಆಡುವುದು ಖಚಿತ!

ತೀವ್ರ ತರದ ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಅವರು ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್​ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸದಲ್ಲಿ 29 ರ ಹರೆಯದ ವೇಗಿ ಎರಡು ಟಿ20 ಪಂದ್ಯಗಳನ್ನು ಆಡಿದ ನಂತರ ಟೀಮ್​ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾ ಕಪ್​, ಟಿ20 ವಿಶ್ವಕಪ್‌ ಐಪಿಎಲ್​ ಸೇರಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕೂಡ ಆಡಲು ಸಾಧ್ಯವಾಗಿರಲಿಲ್ಲ.

Exit mobile version