ನವದೆಹಲಿ: ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈ ವರ್ಷದ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾ ಕಪ್ಗೆ ಮುಂಚಿತವಾಗಿ ಕಣಕ್ಕೆ ಮರಳುವ ನಿರೀಕ್ಷೆಯಿದೆ. ಇದರೊಂದಿಗೆ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಭಾರಿ ಉತ್ತೇಜನ ಸಿಗಲಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಆಗಸ್ಟ್ನಲ್ಲಿ ಭಾರತದ ಐರ್ಲೆಂಡ್ ಪ್ರವಾಸದಲ್ಲಿ ಮೈದಾನಕ್ಕೆ ಇಳಿಯುತ್ತಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ನಡೆದ ಟಿ 20 ವಿಶ್ವ ಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಂಡಿದ್ದರು. ಅದಕ್ಕೂ ಮೊದಲು ನಡೆದ ಆಸ್ಟ್ರೇಲಿಯಾ ಸರಣಿಯಿಂದಾಗಿ ಅವರ ಗಾಯ ಉಲ್ಬಣಗೊಂಡ ಕಾರಣ ಏಷ್ಯಾ ಕಪ್ 2022ರಿಂದ ಹೊರಗುಳಿಯಬೇಕಾಯಿತು. ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್ 2023ರಲ್ಲಿ ಮುಂಬಯಿ ಇಂಡಿಯನ್ಸ್ ತಮಡ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು.
ಸ್ಟಾರ್ ವೇಗಿ ಆಗಸ್ಟ್ನಲ್ಲಿ ಭಾರತ ತಂಡ ಮೂರು ಪಂದ್ಯಗಳ ಟಿ20 ಐ ಸರಣಿಗಾಗಿ ಐರ್ಲೆಂಡ್ಗೆ ಪ್ರಯಾಣಿಸುವ ವೇಳೆ ತಂಡ ಸೇರಿಕೊಳ್ಳುವ ಸಕಾರಾತ್ಮಕ ಸುದ್ದಿ ಹರಡಿದೆ. ಪ್ರಸ್ತುತ ಎನ್ಸಿಎಯಲ್ಲಿ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾ ಕಪ್ ಪ್ರಶಸ್ತಿಯ ವೇಳೆಯೂ ತಂಡದಲ್ಲಿ ಇರುತ್ತಾರೆ ಎನ್ನಲಾಗಿದೆ.
ಜಸ್ಪ್ರೀತ್ ಬುಮ್ರಾ ಈ ವರ್ಷದ ಆಗಸ್ಟ್ನಲ್ಲಿ ನಡೆಯಲಿರುವ ಐರ್ಲೆಂಡ್ ಸರಣಿಗೆ ಲಭ್ಯರಾದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಉತ್ತೇಜನ ಸಿಗಲಿದೆ. ಎಲ್ಲವೂ ಇದೇ ರೀತಿ ಮುಂದುವರಿದರೆ, ಗರಿಷ್ಠ ಫಿಟ್ನೆಸ್ ಹೊಂದಿರುವ ಬುಮ್ರಾ ಮೈದಾನಕ್ಕಿಳಿಯುವ ಸಾಧ್ಯತೆಯಿದೆ, “ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Team India : ಪುನಶ್ಚೇತನ ಕಾರ್ಯ ಆರಂಭಿಸಿದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ
ಈ ಹಿಂದೆ ಭಾರತದ ಏಷ್ಯಾ ಕಪ್ 2023 ಅಭಿಯಾನಕ್ಕಾಗಿ ಭಾರತೀಯ ವೇಗಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ ಎಂದು ವರದಿಯಾಗಿತ್ತು. ಆದಾಗ್ಯೂ, ನಿತಿನ್ ಪಟೇಲ್ ಮತ್ತು ಎಸ್ ರಜನಿಕಾಂತ್ ಅವರ ಕಣ್ಗಾವಲಿನಲ್ಲಿ ಬುಮ್ರಾ ಅವರ ಪುನಶ್ಚೇತನವು ಸುಗಮವಾಗಿ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
“ನಿತಿನ್ ಪಟೇಲ್ ಮತ್ತು ರಜನಿಕಾಂತ್ ಅವರು ಎನ್ಸಿಎನಲ್ಲಿ ಬುಮ್ರಾ ಅವರ ಪುನಶ್ಚೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ವಿಶ್ವ ಕಪ್ಗೆ ಮೊದಲು ಬುಮ್ರಾ ತಂಡದಲ್ಲಿ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಅವರಿಬ್ಬರೂ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.