ಮುಂಬಯಿ: ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರ ಆಗಮನದ ಬಗ್ಗೆ ಟೀಮ್ ಇಂಡಿಯಾ ಚಿಂತೆ ಪಡಬೇಕಿಲ್ಲ, ಇದರ ಬದಲು ಬೇರೆ ಆಟಗಾರನನ್ನು ನೋಡುವುದು ಸೂಕ್ತ ಎಂದು 1983ರ ವಿಶ್ವ ಕಪ್ ವಿಜೇತ ತಂಡದ ಆಟಗಾರ ಮದನ್ ಲಾಲ್(Madan Lal) ಹೇಳಿದ್ದಾರೆ.
ವೇಗಿ ಜಸ್ಪ್ರೀತ್ ಬುಮ್ರಾ ಅವರು ಬೆನ್ನು ನೋವಿನ ಹೆಚ್ಚಿನ ಚಿಕಿತ್ಸೆಗೆ ನ್ಯೂಜಿಲ್ಯಾಂಡ್ಗೆ ತೆರಳಲಿದ್ದಾರೆ ಹೀಗಾಗಿ ಅವರು ತಂಡಕ್ಕೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ವರದಿಯಾಗಿದೆ. ಇದೇ ವಿಚಾರದಲ್ಲಿ ಮಾತನಾಡಿದ ಮದನ್ ಲಾಲ್, ಬುಮ್ರಾ ವಿಚಾರವನ್ನು ಮರೆತು ಬಿಡಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ವರ್ಷಾಂತ್ಯದಲ್ಲಿ ದೇಶದಲ್ಲೇ ನಡೆಯುವ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿ ತಂಡಕ್ಕೆ ಪರ್ಯಾಯ ವೇಗಿಗಳನ್ನು ಹುಡುಕಾಟ ನಡೆಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ IND VS AUS: ಅತಿ ದೂರದ ಸಿಕ್ಸರ್ ಬಾರಿಸಿ ಪ್ರಶಸ್ತಿ ಗೆದ್ದ ಚೇತೇಶ್ವರ್ ಪೂಜಾರ!
“ಬುಮ್ರಾ ಅವರು ಚೇತರಿಕೆಗೆ ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತಿರುವ ಕಾರಣ ಸದ್ಯಕ್ಕೆ ನಾವು ಅವರಿಂದ ಹಿಂದೆ ಸರಿಯುವ ಸಮಯ ಬಂದಿದೆ. ಅವರು ತಂಡಕ್ಕೆ ಮರಳುವ ಬಗ್ಗೆ ಇನ್ನೂ ಗ್ಯಾರಂಟಿ ಇಲ್ಲ. ಹೀಗಿರುವಾಗ ಅವರ ಬದಲಿಗೆ ಬೇರೆ ಆಟಗಾರನಿಗೆ ತರಬೇತಿ ನೀಡಿ ತಂಡಕ್ಕೆ ಸೇರಿಸಿಕೊಳ್ಳಬಹುದು” ಎಂದು ಮದನ್ ಲಾಲ್ ಹೇಳಿದರು.