Site icon Vistara News

Jasprit Bumrah : ಮುಂಬೈ ತಂಡದ ಬ್ಯಾಟರ್​ಗಳಿಗೆ ಬೌಲಿಂಗ್ ಆರಂಭಿಸಿದ ಜಸ್​ಪ್ರಿತ್ ಬುಮ್ರಾ

Jasprit Bumrah

ನವದೆಹಲಿ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಈಗ ಐರ್ಲೆಂಡ್ ಟಿ20 ಐ ಸರಣಿಗೆ ಮತ್ತು ಏಷ್ಯಾ ಕಪ್ ಮತ್ತು 2023ರ ಆವೃತ್ತಿಗೆ ಲಭ್ಯವಾಗುವ ಸೂಚನೆ ನೀಡಿದ್ದಾರೆ. ಅವರು ಬೆಂಗಳೂರಿನ ಹೊರಗಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಅಂತರ್ ತಂಡದ ಅಭ್ಯಾಸ ಪಂದ್ಯದಲ್ಲಿ ಅವರು ಮುಂಬೈನ ಕೆಲವು ಯುವ ಬ್ಯಾಟರ್​ಗಳಿಗೆ 10 ಓವರ್​ಗಳನ್ನು ಎಸೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಬೆನ್ನುನೋವಿನಿಂದ ಬಳಲಿದ್ದ ಬಳಿಕ ಅವರು ಕ್ರೀಡಾಂಗಣಕ್ಕೆ ಇಳಿದಿದ್ದಾರೆ. ಸತತ ಪುನಶ್ಚೇತನ ಕಾರ್ಯದ ಬಳಿಕ ಸಮಸ್ಯೆ ನಿವಾರಣೆಯಾಗದ ಕಾರಣ ಅವರು ಅಂತಿಮವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ಪುನಶ್ಚೇತನಕ್ಕೆ ಒಳಗಾಗಿ ತಂಡಕ್ಕಾಗಿ ಆಡಲು ಸಜ್ಜಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಮಾಹಿತಿಯ ಪ್ರಕಾರ ಜಸ್ಪ್ರೀತ್ ಬುಮ್ರಾ ಅಭ್ಯಾಸ ಪಂದ್ಯದ ವೇಳೆ ಒಂದು ವಿಕೆಟ್ ಪಡೆದರು. ಇದರಲ್ಲಿ ಮುಂಬೈನ ಹಲವಾರು ಉತ್ತಮ ಬ್ಯಾಟರ್​ಗಳು ಇದ್ದರು. ಜತೆಗೆ ಉತ್ತಮ ಬೌಲರ್​ಗಳು ಕೂಡ ಇದ್ದರು. ಮುಂಬಯಿ ತಂಡದ ಆರಂಭಿಕ ಬ್ಯಾಟರ್​ ಅಂಗ್​ಕ್ರಿಶ್​ ರಘುವಂಶಿ ವಿಕೆಟ್​ ಪಡೆದರು.

ಬೆನ್ನಿನ ಒತ್ತಡ ಗಾಯದಿಂದ ಬಳಲಿದ್ದ ಒಳಗಾಗಿದ್ದ ಮತ್ತೊಬ್ಬ ಬೌಲರ್ ಪ್ರಸಿದ್ಧ್ ಕೃಷ್ಣ. ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಮುಂಬೈ ಬ್ಯಾಟರ್​ಗಳಿಗೆ ಬೌಲಿಂಗ್ ಮಾಡಿದ್ದಾರೆ. ಪ್ರಸಿದ್ಧ್ ಅವರು 10 ಓವರ್​​ಗಳಲಲಿ 2 ಮೇಡನ್​ ಓವರ್ ಎಸೆದರು. 26 ರನ್​ ನೀಡಿ 1 ವಿಕೆಟ್ ಪಡೆದರು.

ಇದನ್ನೂ ಓದಿ : World Cup 2023 : ಭಾರತ, ಪಾಕಿಸ್ತಾನ ಪಂದ್ಯದ ತಾಣ ಬದಲು; ಜಯ್​ ಶಾ ಸ್ಪಷ್ಟನೆ ಏನು?

ಬುಮ್ರಾ ಮತ್ತು ಕೃಷ್ಣ ಇಬ್ಬರೂ ಎನ್ಸಿಎ ಆಯೋಜಿಸಲಿರುವ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ ಎಂದು ಬಿಸಿಸಿಐ ಜುಲೈ 21ರಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ. ಬಿಸಿಸಿಐನ ವೈದ್ಯಕೀಯ ತಂಡವು ಅವರ ಬೆಳವಣಿಗೆಯಿಂದ ಸಂತೋಷವಾಗಿದೆ ಮತ್ತು ಅಭ್ಯಾಸ ಪಂದ್ಯಗಳನ್ನು ಅನುಸರಿಸಿ ಮೌಲ್ಯಮಾಪನ ಮಾಡಿದ ನಂತರ ಒಂದು ತೀರ್ಮಾನಕ್ಕೆ ಬರಲಿದ್ದೇವೆ ಎಂದು ಹೇಳಿದೆ.

ಐರ್ಲೆಂಡ್​ ಪ್ರವಾಸಕ್ಕೆ ಆಯ್ಕೆ

ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಫಿಟ್ನೆಸ್​ ಹೊಂದಿದ್ದಾರೆ. ಮುಂಬರುವ ಆಗಸ್ಟ್​​ನಲ್ಲಿ ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದೊಂದಿಗೆ ಪ್ರಯಾಣಿಸಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಗುರುವಾರ ಹೇಳಿದ್ದಾರೆ. ಮುಂದಿನ ವಾರ, ಸರಣಿಯ ತಂಡದ ಪಟ್ಟಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಮೂರು ಟಿ 20 ಪಂದ್ಯಗಳು ಆಗಸ್ಟ್ 18, 20 ಮತ್ತು 23ರಂದು ನಡೆಯಲಿವೆ.

ವೇಗಿ ಮಾರ್ಚ್​​ನಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೆಪ್ಟೆಂಬರ್​ರ್​ನಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ 20ಐ ಮುಖಾಮುಖಿಯ ನಂತರ, ಅವರು ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡಿಲ್ಲ. ಅವರ ಬೆನ್ನುನೋವಿನಿಂದಾಗಿ ಅವರು ಏಷ್ಯಾ ಕಪ್ ಆಟದ ಗಮನಾರ್ಹ ಅವಕಾಶ ತಪ್ಪಿಸಿಕೊಂಡಿದ್ದರು. ನಂತರ ಅವರು ಆಸ್ಟ್ರೇಲಿಯಾ ವಿರುದ್ಧದ ತವರು ಟಿ 20 ಐ ಸರಣಿಯಲ್ಲಿ ಆಡಲು ಸ್ವಲ್ಪ ಸಮಯ ತೆಗೆದುಕೊಂಡರು. ಆದರೆ, ಸಮಸ್ಯೆ ನಿವಾರಣೆ ಆಗಿರಲಿಲ್ಲ.

Exit mobile version