ಬೆಂಗಳೂರು: ಟೀಮ್ ಇಂಡಿಯಾದ ವೇಗದ ಬೌಲರ್ ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡದ ನಡುವಿನ (INDvsAUS ) ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಲಭ್ಯರಾಗುವುದು ಅನುಮಾನ ಎನಿಸಿದೆ. ಟೆಸ್ಟ್ ಸರಣಿ ಆರಂಭಗೊಳ್ಳುವ ಮೊದಲು ಅವರು ಅಡಬಲ್ಲರು ಎಂದು ನಿರೀಕ್ಷೆ ಮಾಡಲಾಗಿದ್ದರೂ ಬಳಿಕ ಬದಲಾದ ಪರಿಸ್ಥಿತಿಯಲ್ಲಿ ಅವರ ಪುನಶ್ಚೇತನ ಮುಂದುವರಿಸಲಾಗಿತ್ತು. ಅವರೀಗ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ನಲ್ಲಿ ಪುನಶ್ಚೇತಕ್ಕೆ ಒಳಗಾಗುತ್ತಿದ್ದಾರೆ.
ಈ ವರ್ಷಾಂತ್ಯದಲ್ಲಿ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ನಡೆಯಲಿದೆ. ಹಲವು ವರ್ಷಗಳ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತ ತಂಡದ ಪಾಲಿಗೆ ತವರಿನಲ್ಲಿ ನಡೆಯುವ ಈ ಟೂರ್ನಿ ಅಮೂಲ್ಯ. ಜಸ್ಪ್ರಿತ್ ಬುಮ್ರಾ ತಂಡದಲ್ಲಿದ್ದರೆ ಗೆಲುವಿನ ಯಾತ್ರೆ ಸುಲಭ. ಆದರೆ, ಅವರಿಗೆ ಇನ್ನೂ ಎನ್ಸಿಎನಲ್ಲಿ ಫಿಟ್ನೆಸ್ ಪ್ರಮಾಣಪತ್ರ ದೊರಕಿಲ್ಲ. ವಿಶ್ವ ಕಪ್ಗೆ ಮೊದಲು ಜಸ್ಪ್ರಿತ್ ಬುಮ್ರಾ ಕೆಲವೊಂದು ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ಅಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಅವರು ಪಾಲ್ಗೊಳ್ಳಬೇಕಾಗಿದೆ. ಆದರೆ, ಅವರ ಫಿಟ್ನೆಸ್ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ : Chetan Sharma: ಫಿಟ್ನೆಸ್ ಇಲ್ಲದಿದ್ದರೂ ತಂಡಕ್ಕೆ ಬುಮ್ರಾ ಆಯ್ಕೆ; ಚೇತನ್ ಶರ್ಮಾ
ಜಸ್ಪ್ರಿತ್ ಬುಮ್ರಾ ಕಳೆದ ಅಕ್ಟೋಬರ್ಗಿಂತ ಮೊದಲು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಟಿ20 ವಿಶ್ವ ಕಪ್ನಲ್ಲಿ ಆಡುವ ಅವಕಾಶ ಗಳಿಸಿಕೊಂಡಿರಲಿಲ್ಲ. ಆ ಬಳಿಕ ನಡೆದ ಪ್ರಮುಖ ಟೂರ್ನಿಗೂ ಅವರು ಅಲಭ್ಯರಾಗಿದ್ದರು. ಮೂಲಗಳ ಪ್ರಕಾರ ಜಸ್ಪ್ರಿತ್ ಬುಮ್ರಾ ಎನ್ಸಿಎನಲ್ಲಿ ಕೆಲವೊಂದು ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ನಿರಂತರವಾಗಿ ಬೌಲಿಂಗ್ ಮಾಡುವುದಕ್ಕೆ ಅವರು ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎನ್ನಲಾಗಿದೆ.