ಕೋಲ್ಕೊತಾ : ಭಾರತ ತಂಡದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ಮುಂದಿನ ೪ರಿಂದ ಆರು ತಿಂಗಳ ಕಾಲ ಭಾರತ ತಂಡದ ಸೇವೆಗೆ ಲಭ್ಯವಿಲ್ಲ ಎಂಬ ಚರ್ಚೆ ನಡೆಯುತ್ತಿರುವ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸ್ಫೋಟಕ ಮಾಹಿತಿಯೊಂದನ್ನು ಪ್ರಕಟಿಸಿದ್ದು, ವೇಗಿ ಬುಮ್ರಾ ಇನ್ನೂ ತಂಡದಿಂದ ಹೊರ ಬಿದ್ದಿಲ್ಲ. ಟಿ೨೦ ವಿಶ್ವ ಕಪ್‌ಗೆ ಇನ್ನೂ ದಿನಗಳ ಬಾಕಿ ಇರುವ ಕಾರಣ ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಮಾರಕ ವೇಗಿ ಬುಮ್ರಾ ಅವರ ಸೇವೆ ಟಿ೨೦ ವಿಶ್ವ ಕಪ್‌ಗೆ ಲಭಿಸಬಹುದು ಎಂಬ ಆಶಾಭಾವ ಮೂಡಿದೆ.
ರೇವ್ ಸ್ಪೋರ್ಟ್ಸ್ ಜತೆ ಮಾತನಾಡಿದ ಗಂಗೂಲಿ ಅವರು “ಜಸ್‌ಪ್ರಿತ್ ಬುಮ್ರಾ ಅವರು ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಇನ್ನೂ ತಂಡದಿಂದ ಹೊರಕ್ಕೆ ಬಿದ್ದಿಲ್ಲ. ವಿಶ್ವ ಕಪ್‌ಗೆ ಇನ್ನೂ ಸಾಕಷ್ಟು ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲಿ ಸುಧಾರಣೆಯಾದರೆ ತಂಡ ಸೇರಿಕೊಳ್ಳಲಿದ್ದಾರೆ,” ಎಂದು ಹೇಳಿದ್ದಾರೆ.
ಜಸ್‌ಪ್ರಿತ್ ಬುಮ್ರಾ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಟಿ೨೦ ವಿಶ್ವ ಕಪ್‌ಗೆ ಲಭ್ಯವಾಗದಿರುವುದು ಕ್ರಿಕೆಟ್ ಕಾರಿಡಾರ್‌ನಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಅನುಭವಿಗಳ ಗೈರು ಹಾಜರಿಯಿಂದ ತಂಡಕ್ಕೆ ಹಿನ್ನಡೆಯಾಗಲಿದೆ,” ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Jasprit Bumrah | ಬೆನ್ನು ನೋವಿನ ಹೊರತಾಗಿಯೂ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ ವೇಗಿ ಬುಮ್ರಾ