ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಬೆನ್ನು ನೋವಿನ ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲ್ಯಾಂಡ್ ತಲುಪಿದ್ದಾರೆ. ಇದರಿಂದಾಗಿ ಅವರು ಮುಂಬರುವ 16ನೇ ಆವೃತ್ತಿಯ ಐಪಿಎಲ್ (IPL 2023) ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಆಡಳಿತ ಮಂಡಳಿಯ ವೈದ್ಯಕೀಯ ತಂಡವೂ ನ್ಯೂಜಿಲ್ಯಾಂಡ್ನ ತಜ್ಞ ವೈದ್ಯ ರೋವನ್ ಶೌಟೆನ್ ಅವರೊಂದಿಗೆ ಬುಮ್ರಾ ಶಸ್ತ್ರಚಿಕಿತ್ಸೆ ಕುರಿತು ಈಗಾಗಲೇ ಮಾತುಕತೆ ನಡೆಸಿದೆ. ಬಿಸಿಸಿಐ ಮೂಲಗಳು ಸ್ಪೋರ್ಟ್ಸ್ ಟಾಟ್ಗೆ ನೀಡಿದ ಮಾಹಿತಿ ಪ್ರಕಾರ ಬುಮ್ರಾ ಮುಂದಿನ 2 ದಿನಗಳ ಓಳಗಡೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ Jasprit Bumrah: ಬುಮ್ರಾ ವಿಚಾರವನ್ನು ಮರೆತು ಬಿಡಿ; ಟೀಮ್ ಇಂಡಿಯಾಕ್ಕೆ ಸಲಹೆ ನೀಡಿದ ಮಾಜಿ ಆಟಗಾರ
ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಬುಮ್ರಾ ಸುಮಾರು 5 ತಿಂಗಳಿಂದ ಮೈದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20ಯಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ ಬುಮ್ರಾ ಇದಾದ ಬಳಿಕ ಬೆನ್ನುನೋವಿನಿಂದಾಗಿ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಇದಾದ ಬಳಿಕ ಅವರು ಯಾವುದೇ ಮಾದರಿಯ ಕ್ರಿಕೆಟ್ನಲ್ಲಿಯೂ ಕಾಣಿಸಿಕೊಂಡಿಲ್ಲ.