ಮುಂಬಯಿ: ಗುರುವಾರದ ಐಪಿಎಲ್(IPL 2024) ಪಂದ್ಯದಲ್ಲಿ ಮೊನಚಾದ ಬೌಲಿಂಗ್ ದಾಳಿ ನಡೆಸಿ 21 ರನ್ಗೆ 5 ವಿಕೆಟ್ ಕಿತ್ತ ಮುಂಬೈ ಇಂಡಿಯನ್ಸ್(Mumbai Indians) ತಂಡದ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಆರ್ಸಿಬಿ(Royal Challengers Bengaluru) ತಂಡದ ವಿರುದ್ಧ ನೂತನ ದಾಖಲೆ ಬರೆದಿದ್ದಾರೆ. ಆರ್ಸಿಬಿ ತಂಡದ ಅತ್ಯಧಿಕ ವಿಕೆಟ್ ಕಿತ್ತ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬುಮ್ರಾ ತಾನೆಸೆದ ಮೊದಲ ಓವರ್ನಲ್ಲಿಯೇ ವಿರಾಟ್ ಕೊಹ್ಲಿಯ ವಿಕೆಟ್ ಬೇಟೆಯಾಡಿದರು. ಇದಾದ ಬಳಿಕ ಮುಂದಿನ ಮೂರು ಓವರ್ಗಳಲ್ಲಿಯೂ ಕೂಡ ವಿಕೆಟ್ ಕಿತ್ತು ಮಿಂಚಿದರು. 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಲಭಿಸಿತು. ಆದರೆ ಇದರಲ್ಲಿ ಯಶಸ್ಸು ಕಾಣಲಿಲ್ಲ. ದಿನೇಶ್ ಕಾರ್ತಿಕ್ ಮಾತ್ರ ಇವರಿಗೆ ಒಂದು ಸಿಕ್ಸರ್ ರುಚಿ ತೋರಿಸಿದರು. ಉಳಿದಂತೆ ಎಲ್ಲ ಬ್ಯಾಟರ್ಗಳು ಪರದಾಟ ನಡೆಸಿದರು.
That's a FIVE-WICKET HAUL for @Jaspritbumrah93 🔥💥🔥
— IndianPremierLeague (@IPL) April 11, 2024
He finishes off with figures of 5/21
Watch the match LIVE on @JioCinema and @StarSportsIndia 💻📱#TATAIPL | #MIvRCB pic.twitter.com/VXZVpAUgNI
5 ವಿಕೆಟ್ ಕೀಳುವ ಮೂಲಕ ಆರ್ಸಿಬಿ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ರವೀಂದ್ರ ಜಡೇಜಾ ಮತ್ತು ಸಂದೀಪ್ ಶರ್ಮ ಹೆಸರಿನಲ್ಲಿತ್ತು. ಉಭಯ ಆಟಗಾರರು 26 ವಿಕೆಟ್ ಪಡೆದಿದ್ದರು. ಇದೀಗ ಬುಮ್ರಾ 29 ವಿಕೆಟ್ ಪಡೆಯುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ. ಸುನೀಲ್ ನರೈನ್ 24 ವಿಕೆಟ್, ಆಶೀಶ್ ನೆಹ್ರಾ ಮತ್ತು ಹರ್ಭಜನ್ ಸಿಂಗ್ ತಲಾ 23 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ IPL 2024 Points Table: ರಾಜಸ್ಥಾನ್ಗೆ ಮೊದಲ ಸೋಲು; ಅಂಕಪಟ್ಟಿಯಲ್ಲಿ ಪ್ರಮುಖ ಬದಲಾವಣೆ
ಆರ್ಸಿಬಿ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳು
ಜಸ್ಪ್ರೀತ್ ಬುಮ್ರಾ-29 ವಿಕೆಟ್
ರವೀಂದ್ರ ಜಡೇಜಾ-26 ವಿಕೆಟ್
ಸಂದೀಪ್ ಶರ್ಮ-26 ವಿಕೆಟ್
ಸುನೀಲ್ ನರೈನ್-24 ವಿಕೆಟ್
ಆಶೀಶ್ ನೆಹ್ರಾ-23 ವಿಕೆಟ್
ಹರ್ಭಜನ್ ಸಿಂಗ್-23 ವಿಕೆಟ್
Most wickets vs RCB (IPL)
— Ankoor singh (@Ankoorsingh23) April 11, 2024
29 J Bumrah
26 R Jadeja/ Sandeep Sharma
24 S Narine
23 A Nehra/ Harbhajan Singh#RCBvMI pic.twitter.com/MWrqDWuRYf
ಬುಮ್ರಾ ಅವರು 5 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡರು. ಇದು ಮಾತ್ರವಲ್ಲದೆ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯನ್ನು 5 ನೇ ಬಾರಿಗೆ ಔಟ್ ಮಾಡಿದ ಸಾಧನೆ ಕೂಡ ಮಾಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ದಿನೇಶ್ ಕಾರ್ತಿಕ್(53*), ರಜತ್ ಪಾಟಿದಾರ್(50) ಮತ್ತು ನಾಯಕ ಫಾಫ್ ಡುಪ್ಲೆಸಿಸ್(61) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 196 ರನ್ ಬಾರಿಸಿ ಸವಾಲೊಡ್ಡಿದೆ.