Site icon Vistara News

ಟಾಸ್​ಗೂ ಮುನ್ನ ದ್ವಿತೀಯ ಪಂದ್ಯದಿಂದ ಹೊರಬಿದ್ದ ಬುಮ್ರಾ; ಕಾರಣ ಏನು?

Jasprit Bumrah was ruled out of 2nd ODI against Australia

ಇಂದೋರ್​: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ದ್ವಿತೀಯ(India vs Australia, 2nd ODI) ಏಕದಿನ ಪಂದ್ಯ ಆರಂಭಕ್ಕೆ ಮುನ್ನ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಈ ಪಂದ್ಯದಿಂದ ಹೊರಬಿದ್ದರು. ಅವರ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಅವಕಾಶ ನೀಡಲಾಗಿದೆ. ಬುಮ್ರಾ ಅವರು ಈ ಪಂದ್ಯದಿಂದ ಹೊರಗುಳಿದ ವಿಚಾರ ತಿಳಿದ ತಕ್ಷಣ ಅನೇಕ ಭಾರತ ಕ್ರಿಕೆಟ್​ ಅಭಿಮಾನಿಗಳು ಒಂದು ಕ್ಷಣ ಆತಂಕಕ್ಕೆ ಒಳಗಾದರು. ಮತ್ತೆ ಬುಮ್ರಾ ಗಾಯಕ್ಕೆ ತುತ್ತಾದರೇ ಎಂದು ಯೋಚಿಸತೊಡಗಿದರು. ಆದರೆ ಆತಂಕ ಪಡುವ ಅಗತ್ಯವಿಲ್ಲ. ಬುಮ್ರಾಗೆ ಯಾವುದೇ ಗಾಯವಾಗಿಲ್ಲ ಎಂದು ಬಿಸಿಸಿಐ(BCCI) ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

“ಜಸ್​ಪ್ರೀತ್​ ಬುಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯಕ್ಕಾಗಿ ಇಂದೋರ್‌ಗೆ ತಂಡದೊಂದಿಗೆ ಪ್ರಯಾಣಿಸಲಿಲ್ಲ. ಅವರು ತಮ್ಮ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದಾರೆ. ಜತೆಗೆ ವಿಶ್ವಕಪ್​ಗೂ ಮುನ್ನ ಅವರಿಗೆ ಸಣ್ಣ ವಿಶ್ರಾಂತಿ ನೀಡಲಾಗಿದೆ. ಅವರಿಗೆ ಯಾವುದೇ ಗಾಯವಾಗಿಲ್ಲ. ಮುಖೇಶ್ ಕುಮಾರ್ ಅವರು ಬುಮ್ರಾ ಬದಲಿಯಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಡುವ ಬಳಗದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಗಿದೆ. ಮೂರನೇ ಪಂದ್ಯಕ್ಕೆ ಬುಮ್ರಾ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ” ಎಂದು ಬಿಸಿಸಿಐ ಟ್ವಿಟ್​ ಮೂಲಕ ತಿಳಿಸಿದೆ.

ತೀವ್ರ ಸ್ವರೂಪದ ಬೆನ್ನು ನೋವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿ 11 ತಿಂಗಳ ಬಳಿಕ ಬುಮ್ರಾ ಅವರು ಐರ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಬುಮ್ರಾ ಅವರು ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್​ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸದಲ್ಲಿ 29 ರ ಹರೆಯದ ವೇಗಿ ಎರಡು ಟಿ20 ಪಂದ್ಯಗಳನ್ನು ಆಡಿದ ನಂತರ ಟೀಮ್​ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾ ಕಪ್​, ಟಿ20 ವಿಶ್ವಕಪ್‌ ಐಪಿಎಲ್​ ಸೇರಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕೂಡ ಆಡಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ Ind vs Aus: ಪಂದ್ಯ ಆರಂಭ; ಉತ್ತಮ ಸ್ಥಿತಿಯಲ್ಲಿ ಭಾರತ

ವಿಶ್ವಕಪ್​ ದೃಷ್ಟಿಯಿಂದ ಬಿಸಿಸಿಐ ಮತ್ತು ಭಾರತ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಒಂದೊಮ್ಮೆ ಅವರು ಮತ್ತೆ ಗಾಯಗೊಂಡರೆ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಕಲೇ ಅವರ ಅನುಪಸ್ಥಿತಿಯಲ್ಲಿ ಐಸಿಸಿ ಟೆಸ್ಟ್​ ವಿಶ್ವಕಪ್​ ಕಳೆದ ವರ್ಷ ನಡೆದ ಏಷ್ಯಾ ಕಪ್​ ಮತ್ತು ತ20 ವಿಶ್ವಕಪ್​ನಲ್ಲಿ ಭಾರತ ಸೋಲು ಕಂಡಿತ್ತು. 

Exit mobile version