Site icon Vistara News

Team India : ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌; ಐರ್ಲೆಂಡ್‌ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ ಮಾರಕ ವೇಗಿ!

jasprit Bumrah

#image_title

ಮುಂಬಯಿ: 2023 ರ ವಿಶ್ವಕಪ್‌ಗೆ ಮುಂಚಿತವಾಗಿ ಭಾರತ ಕ್ರಿಕೆಟ್ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಶುಭ ಸುದ್ದಿ ದೊರಕಿದೆ. ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಭಾರತದ ಐರ್ಲೆಂಡ್ ಪ್ರವಾಸ ಹೋಗಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದಾಗಿ 2022ರ ಸೆಪ್ಟೆಂಬರ್‌ನಿಂದ ಬುಮ್ರಾ ಆಡಿರಲಿಲ್ಲ. ಅದರ ಪರಿಣಾಮ ಪ್ರತಿಯೊಂದು ಟೂರ್ನಿಯಲ್ಲಿ ಪ್ರತಿಫಲನಗೊಂಡಿತ್ತು. ಹೀಗಾಗಿ ಅವರ ಮರಳುವಿಕೆ ತಂಡಕ್ಕೆ ಚೈತನ್ಯ ತಂದೆ.

ಟೀಮ್‌ ಇಂಡಿಯಾದ ಆಯ್ಕೆದಾರರು ಮತ್ತು ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ಬುಮ್ರಾ ಅವರು ಫಿಟ್‌ ಆಗಿರುವ ಸೂಚನೆ ಕೊಟ್ಟಿದೆ. 50 ಓವರ್‌ಗಳ ಆಟದ ಒತ್ತಡವನ್ನು ನೀಡುವ ಮೊದಲು ತಂಡದ ಮ್ಯಾನೇಜ್ಮೆಂಟ್‌ ಟಿ 20 ಪಂದ್ಯಗಳಲ್ಲಿ ಅವರ ಫಿಟ್‌ನೆಸ್‌ ಪರೀಕ್ಷೆ ಮಾಡಲು ಬಯಸಿದೆ. ಭಾರತವು ಆಗಸ್ಟ್ 18, 20 ಮತ್ತು 23ರಂದು ಐರ್ಲೆಂಡ್ ವಿರುದ್ಧ ಮೂರು ಟಿ ೨೦ ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಬುಮ್ರಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : World Cup 2023 : ಜೂನ್‌ 27ರಂದು ವಿಶ್ವ ಕಪ್‌ ವೇಳಾಪಟ್ಟಿ ಪ್ರಕಟ

2023ರ ವಿಶ್ವಕಪ್ ವೇಳೆಗೆ ಬುಮ್ರಾ ಅವರನ್ನು ಫುಟ್‌ ಫಿಟ್‌ ಮಾಡುವುದು ಬಿಸಿಸಿಐ ಆಲೋಚನೆಯಾಗಿದೆ. ಆದಾಗ್ಯೂ, ಅವರು ಸುಮಾರು ಒಂದು ವರ್ಷದಿಂದ ಕ್ರಿಕೆಟ್‌ ಆಡದ ಅವರಿಗೆ ಏಕಾಏಕಿ ತಂಡಕ್ಕೆ ಪ್ರವೇಶ ಕೊಡಿಸಲು ಬಿಸಿಸಿಐ ಉತ್ಸುಕವಾಗಿಲ್ಲ. ಹಂತಹಂತವಾಗಿ ಆಡಿಸುವ ಉದ್ದೇಶ ಹೊಂದಿದೆ. ಐರ್ಲೆಂಡ್ ಪ್ರವಾಸದ ಬಳಿಕ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತ ತಂಡ ಆಡಲಿದೆ. ಇದು ವಿಶ್ವ ಕಪ್‌ಗೆ ಮೊದಲು ಬುಮ್ರಾ ಅವರ ಮೊದಲ 50 ಓವರ್‌ಗಳ ಪಂದ್ಯವಾಗಿರಲಿದೆ.

ಕಳೆದ ಒಂದು ವರ್ಷದಿಂದ ಬುಮ್ರಾ ಅವರ ಗಾಯದ ವಿವರ ಮತ್ತು ಚಟುವಟಿಕೆ

ವೇಗಿ ಬುಮ್ರಾ ಪ್ರಸ್ತುತ ಎನ್‌ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಕ್ರಿಕ್ಬಝ್ ವರದಿಯ ಪ್ರಕಾರ, ಅವರು ಶೇಕಡಾ 70 ಚೇತರಿಸಿಕೊಂಡಿದ್ದಾರೆ. ಐರ್ಲೆಂಡ್ ಪ್ರವಾಸಕ್ಕೆ ಎರಡು ತಿಂಗಳು ಬಾಕಿಯಿದ್ದು, ಅಷ್ಟೊತ್ತಿಗಾಗಲೇ ಅವರೂ ಪೂರ್ತಿಯಾಗಿ ಚೇತರಿಸಿಕೊಳ್ಳಲಿದ್ದಾರೆ. ಬುಮ್ರಾ ಶೇಕಡಾ 100 ಫಿಟ್ ಆಗಿದ್ದರೆ ಮಾತ್ರ ಐರ್ಲೆಂಡ್ ವಿರುದ್ಧ ಆಡಲಿದ್ದಾರೆ.

ತಮ್ಮ ಸುಧಾರಣೆಯನ್ನು ಮುಂದುವರಿಸಲು, ಬುಮ್ರಾ ಮುಂದಿನ ತಿಂಗಳು ಎನ್‌ಸಿಎನಲ್ಲಿ ಕೆಲವು ಪಂದ್ಯಗಳನ್ನು ಆಡಲಿದ್ದಾರೆ ಮತ್ತು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಲಿದ್ದಾರೆ. ಈ ಪಂದ್ಯಗಳು ವೇಗದ ಬೌಲರ್‌ಗೆ ದೊಡ್ಡ ಪರೀಕ್ಷೆಯಾಗಿದೆ.

Exit mobile version