Site icon Vistara News

Jasprit Bumrah : ಗಾಯದ ಆತಂಕಕ್ಕೆ ಸಿಲುಕಿದ ಜಸ್​ಪ್ರಿತ್​ ಬುಮ್ರಾ; ಮುಂದೇನಾಯಿತು?

Jasprit bumrah

ಕೊಲೊಂಬೊ: ಕೊಲಂಬೊದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. 11 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ ಮರಳಿದ ಜಸ್ಪ್ರೀತ್ ಬುಮ್ರಾ (Jasprit Bumrah) ಏಷ್ಯಾ ಕಪ್​ನಲ್ಲಿ ಸಾಕಷ್ಟು ಉತ್ಸಾಹದಿಂದ ಬೌಲಿಂಗ್​ ಮಾಡುತ್ತಿದ್ದಾರೆ. ಅಂತೆಯೇ ಲಂಕಾ ವಿರುದ್ದ ಭಾರತ ಕೇವಲ 214 ರನ್​ಗಳ ಗುರಿ ನೀಡಿದ್ದರಿಂದ ಅವರು ಹುಮ್ಮಸ್ಸಿನಲ್ಲಿ ಬೌಲಿಂಗ್ ಮಾಡುವಾಗ ಗಾಯದ ಆತಂಕಕ್ಕೆ ಒಳಗಾದರು.

ಗುಜರಾತ್ ಮೂಲದ ವೇಗಿ ಬೌಲಿಂಗ್ ಮಾಡಿ ಮನವಿ ಮಾಡಲು ಅಂಪೈರ್​ ಕಡೆಗೆ ತಿರುಗುವ ವೇಳೆ ಅವರ ಪಾದ ತಿರುಚಿದಂತಾಯಿತು. ಈ ವೇಳೆ ಅವರ ಅಭಿಮಾನಿಗಳು ಹಾಗೂ ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್​​ಗೆ ಆತಂಕ ಎದುರಾಯಿತು. ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ಇನ್ನಿಂಗ್ಸ್​ನ ನಾಲ್ಕನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಬುಮ್ರಾ ಆರಂಭಿಕ ಬ್ಯಾಟರ್​ ನಿಸ್ಸಾಂಕಾಗೆ ದೊಡ್ಡ ಇನ್​ಸ್ವಿಂಗ್​ ಎಸೆತ ಎಸೆದಿದ್ದರು. ಅದು ಬ್ಯಾಟರ್​ನ ಎಡಕಾಲಿಗೆ ಬಡಿಯಿತು. ಈ ವೇಳೆ ತಿರುಗಲು ಮುಂದಾದ ಬುಮ್ರಾ ಕಾಲು ತಿರುಗಿತು. ಆದರೆ ತಕ್ಷಣ ಚೇತರಿಸಿಕೊಂಡ ಅವರು ಬೌಲಿಂಗ್ ಮುಂದುವರಿಸಿದರು. ಬಳಿಕ ಅವರು ತಮ್ಮ ಶೂ ಬದಲಾಯಿಸಿದರು.

ಅದೃಷ್ಟವಶಾತ್, ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ 2023 ರ ಮುಖಾಮುಖಿಯಲ್ಲಿ, ಅವರು ನಿಸ್ಸಂಕ ಅವರನ್ನು ತಮ್ಮ ಮುಂದಿನ ಓವರ್​ನಲ್ಲಿ ಔಟ್ ಮಾಡಿದರು. ಜಸ್ಪ್ರೀತ್ ಬುಮ್ರಾ ತಮ್ಮ ನಾಲ್ಕನೇ ಓವರ್​ನಲ್ಲಿ ಅನುಭವಿ ಕುಸಾಲ್ ಮೆಂಡಿಸ್ ಅವರನ್ನು ನಿಧಾನಗತಿಯ ಎಸೆತದೊಂದಿಗೆ ಪೆವಿಲಿಯನ್​ಗೆ ಕಳುಹಿಸಿದರು. ಐದು ಓವರ್​ಗಳ ಅದ್ಭುತ ಸ್ಪೆಲ್ ಎಸೆದ ನಂತರ, ಬುಮ್ರಾ ಡ್ರೆಸ್ಸಿಂಗ್ ಕೋಣೆಯೊಳಗೆ ಹೋದರು, ಬಹುಶಃ ಕೆಲವು ಚಿಕಿತ್ಸೆಗಾಗಿ, ಮತ್ತು ಒಂದೆರಡು ಓವರ್​ಗಳ ನಂತರ ಮೈದಾನಕ್ಕೆ ಮರಳಿದರು.

ಇದನ್ನೂ ಓದಿ : IND vs SL : ಶ್ರೀಲಂಕಾ ವಿರುದ್ಧ ಭಾರತಕ್ಕೆ 41 ರನ್​ಗಳ ಭರ್ಜರಿ ಜಯ, ಏಷ್ಯಾ ಕಪ್ ಫೈನಲ್​ಗೆ ಪ್ರವೇಶ

ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ 29ರ ಹರೆಯದ ಜಸ್​ಪ್ರಿತ್​ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ್ದರು. ಅವರು ಯುರೋಪಿಯನ್ ರಾಷ್ಟ್ರದಲ್ಲಿ ನಡೆದ ಸರಣಿಯಲ್ಲಿ ಎರಡನೇ ಸ್ಟ್ರಿಂಗ್ ತಂಡವನ್ನು ಮುನ್ನಡೆಸಿದರು. ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಭಾರತ ಗೆದ್ದಿತ್ತು. ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸೆಪ್ಟೆಂಬರ್ 11 ರ ಸೋಮವಾರ, ಬುಮ್ರಾ ಹೊಸ ಚೆಂಡಿನೊಂದಿಗೆ ಉತ್ತಮ ಸ್ಪೆಲ್ ಎಸೆದು ಇಮಾಮ್-ಉಲ್-ಹಕ್ ಅವರ ವಿಕೆಟ್ ಪಡೆದಿದ್ದರು. ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಮತ್ತು ನಂತರದ ಏಕದಿನ ವಿಶ್ವಕಪ್​ನಲ್ಲಿ ಭಾರತದ ಅವಕಾಶಗಳಿಗೆ ಸ್ಟಾರ್ ವೇಗಿ ಪ್ರಮುಖ ಎನಿಸಿಕೊಂಡಿದ್ದಾರೆ.

Exit mobile version