Site icon Vistara News

Jasprit Bumrah : ಜಸ್​ಪ್ರಿತ್​ ಬುಮ್ರಾಗೆ ನ್ಯೂಜಿಲ್ಯಾಂಡ್​ನಲ್ಲಿ ಸರ್ಜರಿ, ಸೆಪ್ಟೆಂಬರ್​ನಲ್ಲಿ ತಂಡಕ್ಕೆ ವಾಪಸ್​

Jasprit Bumrah underwent surgery in New Zealand, returned to the team in September

#image_title

ಮುಂಬಯಿ: ಭಾರತ ತಂಡದ ವೇಗದ ಬೌಲರ್​ ಜಸ್​ಪ್ರಿತ್​ ಬುಮ್ರಾ (Jasprit Bumrah) ಅವರಿಗೆ ನ್ಯೂಜಿಲ್ಯಾಂಡ್​ನಲ್ಲಿ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಕ್ರಿಕ್​ಬಜ್​​ ವರದಿ ಮಾಡಿದೆ. ನ್ಯೂಜಿಲ್ಯಾಂಡ್​ನ ತಜ್ಞ ವೈದ್ಯ ರೋವನ್​ ಶೌಟೆನ್​ ಅವರೊಂದಿಗೆ ಬಿಸಿಸಿಐನ ವೈದ್ಯಕೀಯ ತಂಡ ಹಾಗೂ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ವೈದ್ಯರು ಸಂಪರ್ಕದಲ್ಲಿದ್ದಾರೆ. ತಕ್ಷಣದಲ್ಲಿ ಬುಮ್ರಾ ಅವರನ್ನು ಅಲ್ಲಿಗೆ ಕಳುಹಿಸಿ ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾಗಿದೆ ಎಂದು ವರದಿಯಾಗಿದೆ. ರೋವನ್ ಶೌಟೆನ್ ಅವರು ಈ ಹಿಂದೆ ಇಂಗ್ಲೆಂಡ್ ತಂಡದ ವೇಗದ ಬೌಲರ್​ ಜೋಫ್ರಾ ಆರ್ಚರ್​ಗೆ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆ ಮಾಡಿದ್ದರು.

ಒಂದು ವೇಳೆ ಜಸ್​ಪ್ರಿತ್​ ಬುಮ್ರಾ ತಕ್ಷಣದಲ್ಲೇ ನ್ಯೂಜಿಲ್ಯಾಂಡ್​ಗೆ ತೆರಳಿ ಚಿಕಿತ್ಸೆಗೆ ಒಳಗಾದರೆ ಮುಂದಿನ ಸೆಪ್ಟೆಂಬರ್​ನಲ್ಲಿ ತಂಡಕ್ಕೆ ಮರಳು ಸಾಧ್ಯತೆ ಇದೆ ಎಂಬುದಾಗಿಯೂ ಕ್ರಿಕ್​ಬಜ್​ ಬರೆದುಕೊಂಡಿದೆ. ಹಾಗಾದರೆ ಅವರು ಅಕ್ಟೋಬರ್ ವೇಳೆಯಲ್ಲಿ ನಡೆಯುವ ಏಕ ದಿನ ವಿಶ್ವ ಕಪ್​ನಲ್ಲಿ ಆಡುವ ಸಾಧ್ಯತೆಗಳಿವೆ.

ಕಳೆದ ವರ್ಷ ನಡೆದ ಏಷ್ಯಾ ಕಪ್​ ವೇಳೆ ಜಸ್​ಪ್ರಿತ್​ ಬುಮ್ರಾ ಅವರು ಬೆನ್ನಿನ ಒತ್ತಡ ಗಾಯಕ್ಕೆ ಒಳಗಾಗಿದ್ದರು. ಬಳಿಕ ಹಲವು ತಿಂಗಳ ವಿಶ್ರಾಂತಿ ಹಾಗೂ ಪುನಶ್ಚೇತನದ ಬಳಿಕವೂ ಅವರು ಸುಧಾರಿಸಿಕೊಂಡಿಲ್ಲ. ಹೀಗಾಗಿ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ : INDvsAUS : ಜಸ್​ಪ್ರಿತ್​ ಬುಮ್ರಾ ಇನ್ನೂ ಫಿಟ್​ ಆಗಿಲ್ಲ, ಐಪಿಎಲ್​ಗೆ ನೇರ ಪ್ರವೇಶದ ನಿರೀಕ್ಷೆ

ಜನವರಿಯಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ವೇಳೆ ಬುಮ್ರಾ ಭಾರತ ತಂಡಕ್ಕೆ ಮರಳುವರು ಎಂದು ಹೇಳಲಾಗಿತ್ತು. ಮೊದಲಿಗೆ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದ್ದರೂ ಬಳಿಕ ಸಂಪೂರ್ಣ ಫಿಟ್​ ಎನಿಸಿಕೊಳ್ಳದ ಕಾರಣ ತಂಡದಿಂದ ಕೈ ಬಿಡಲಾಗಿತ್ತು.

Exit mobile version