Site icon Vistara News

Jasprit Bumrah: ನಂ.1 ಸ್ಥಾನ ಅಲಂಕರಿಸಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

Jasprit Bumrah

ಮುಂಬಯಿ: ನೂತನ ಐಸಿಸಿ ಟೆಸ್ಟ್​ ಬೌಲಿಂಗ್​ ಶ್ರೇಯಾಂಕದಲ್ಲಿ(ICC Test Rankings) ನಂ.1 ಸ್ಥಾನ ಪಡೆದ ಟೀಮ್​ ಇಂಡಿಯಾ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಟೆಸ್ಟ್​ನಲ್ಲಿ ಅಗ್ರಸ್ಥಾನ ಪಡೆದ ಭಾರತದ ಮೊದಲ ವೇಗಿ ಎಂಬ ಹಿರಿಮೆಗೆ ಬುಮ್ರಾ ಪಾತ್ರರಾಗಿದ್ದಾರೆ.

ದಾಖಲೆ ನಂ.1


ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಂ.1ಸ್ಥಾನ ಪಡೆದ ವಿಶ್ವದ ಮೊದಲ ಬೌಲರ್​ ಎಂಬ ವಿಶ್ವ ದಾಖಲೆಯನ್ನು ಜಸ್​ಪ್ರೀತ್​ ಬುಮ್ರಾ ತಮ್ಮ ಹೆಸರಿಗೆ ಸೇರಿಸಿಕೊಂಡರು. ಒಟ್ಟಾರೆಯಾಗಿ ಮೂರು ಸ್ವರೂಪದಲ್ಲಿ ಅಗ್ರಸ್ಥಾನ ಸಂಪಾದಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ವಿರಾಟ್​ ಕೊಹ್ಲಿಗೆ ಮೊದಲ ಸ್ಥಾನ. ವಿರಾಟ್​ ಕೊಹ್ಲಿ ಅವರು ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅಗ್ರಸ್ಥಾನ ಪಪಡೆದಿದ್ದರು.

ದಾಖಲೆ ನಂ.2


ಇದುವರೆಗಿನ ಟೆಸ್ಟ್​ ಬೌಲಿಂಗ್​ ಶ್ರೇಯಾಂಕದಲ್ಲಿ ಭಾರತದ ಸ್ಪಿನ್ ಬೌಲರ್​ಗಳು ಅಗ್ರಸ್ಥಾನ ಪಡೆದಿದ್ದರು. ಆದರೆ ವೇಗಿಗಳು ಈ ಸಾಧನೆ ಮಾಡಿರಲಿಲ್ಲ. ಇದೀಗ ಬುಮ್ರಾ ಈ ಸಾಧನೆ ಮಾಡಿದರೆ. ಟೆಸ್ಟ್​ನಲ್ಲಿ ಅಗ್ರಸ್ಥಾನ ಪಡೆದ ಭಾರತದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ 150 ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಭಾರತದ ವೇಗದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬುಮ್ರಾ, ಇಂಗ್ಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ 32 ಓವರ್​ ಬೌಲಿಂಗ್​ ನಡೆಸಿ ಒಟ್ಟು 9 ವಿಕೆಟ್​ ಉರುಳಿಸಿದ್ದರು. ಈ ಪ್ರದರ್ಶನದಿಂದ ಅವರು ಅಗ್ರಸ್ಥಾನ ಪಡೆದರು. ಸದ್ಯ ಅವರು 881 ರೇಟಿಂಗ್​ ಅಂಕ ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು 4ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ ICC Test Rankings: ಮೊದಲ ಬಾರಿಗೆ ಟೆಸ್ಟ್​ ಬೌಲಿಂಗ್​ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಬುಮ್ರಾ

ಭಾರತ ಪರ 34 ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ 10 ಬಾರಿ ಐದು ವಿಕೆಟ್​ಗಳನ್ನು ಕಿತ್ತ ಸಾಧನೆಗಳನ್ನು ಹೊಂದಿದ್ದರೂ ಸಹ ಬುಮ್ರಾ ಮೂರನೇ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನಕ್ಕೇರಿರಲಿಲ್ಲ. ಇದೀಗ ಈ ಸಾಧನೆಯನ್ನು ಕೂಡ ಮಾಡಿದ್ದಾರೆ. ಅವರ ನಂ.1 ಸ್ಥಾನಕ್ಕೆ ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದ ಪ್ರದರ್ಶನವೇ ಪ್ರಮುಖ ಕಾರಣ.

ಇಂಗ್ಲೆಂಡ್​ ವಿರುದ್ಧದ 2 ಟೆಸ್ಟ್ ಪಂದ್ಯಗಳು ಸೇರಿ ಒಟ್ಟು 57 ಓವರ್​ ಬೌಲಿಂಗ್​ ನಡೆಸಿದ ಬುಮ್ರಾ ಅವರ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೂರನೇ ಟೆಸ್ಟ್​ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Exit mobile version