Site icon Vistara News

INDvsENG ODI : ಹೊರಗೂ ಡಕ್‌ ಒಳಗೂ ಡಕ್‌ ಎಂದ ಬುಮ್ರಾ ಪತ್ನಿ ಸಂಜನಾ!

INDvsENG ODI

ಲಂಡನ್‌: ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರಿತ್‌ ಬುಮ್ರಾ ಅವರ ಪತ್ನಿ ಸಂಜನಾ ಕ್ರೀಡಾ ಟಿವಿ ನಿರೂಪಕಿ. ಮಂಗಳವಾರ ನಡೆದ INDvsENG ODI ಪಂದ್ಯಕ್ಕೂ ಅವರು ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಅವರು ಇಂಗ್ಲೆಂಡ್‌ ತಂಡದ ಕಳಪೆ ಬ್ಯಾಟಿಂಗ್‌ ಪ್ರದರ್ಶನವನ್ನು ವಿಭಿನ್ನವಾಗಿ ಟ್ರೋಲ್‌ ಮಾಡಿದ್ದಾರೆ.

ಇನಿಂಗ್ಸ್‌ ಬ್ರೇಕ್‌ ವೇಳೆಯಲ್ಲಿ ಸಂಜನಾ ಸ್ಟೇಡಿಯಮ್‌ ಹೊರಗಿರುವ ಫುಡ್‌ ಸ್ಟಾಲ್‌ಗಳಿಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ತಿನಿಸೊಂದನ್ನು ಖರೀದಿ ಮಾಡಿ ತಿನ್ನುವ ವೇಳೆ ಅವರಿಗೆ ಅಲ್ಲೇ ಇದ್ದ ‌ʼಕ್ರಿಸ್ಪಿ ಡಕ್ʼ ಎಂಬ ಅಹಾರದ ಮಳಿಗೆ ಕಂಡಿದೆ. ಬಾತುಕೋಳಿಯ ಮಾಂಸದಿಂದ ತಯಾರಿಸಿದ ಹಲವಾರು ಖಾದ್ಯಗಳು ಅಲ್ಲಿದ್ದವು. ಪ್ರಮುಖವಾಗಿ ಡಕ್‌ ಕ್ರಿಸ್ಪಿ ಚಿಪ್ಸ್‌, ಡಕ್‌ ಫ್ಯಾಟ್‌ ಚಿಪ್ಸ್‌ ಎಂದೆಲ್ಲ ಬರೆದಿತ್ತು. ತಕ್ಷಣ ಜಾಗೃತರಾದ ಅವರು ಇಂಗ್ಲೆಂಡ್‌ ತಂಡದ ಪ್ರದರ್ಶನವನ್ನು ಆ ಅಂಗಡಿಗೆ ಹೋಲಿಸಲು ಆರಂಭಿಸಿದರು.

ಏನಿದೂ ಹೊರಗೂ, ಒಳಗೂ ಡಕ್‌?

ಸಂಜನಾ ಅವರು ಟ್ರೋಲ್‌ ಮಾಡಿದ ರೀತಿ ಈ ರೀತಿ ಇತ್ತು “ಇಲ್ಲಿದೆ ನೋಡಿ ದೊಡ್ಡ ಫುಡ್‌ ಏರಿಯಾ. ಇಂಗ್ಲೆಂಡ್‌ ತಂಡದ ಅಭಿಮಾನಿಗಳು ಈ ಕ್ರಿಕೆಟ್‌ಗಿಂತ ಇಲ್ಲಿನ ಫುಡ್‌ ಜಾಯಿಂಟ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಏರಿಯಾ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ನೋಡಿ ಇಲ್ಲೊಂದು ಮಳಿಗೆಯಿದೆ. ಆದರೆ, ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಇಲ್ಲಿಗೆ ಯಾವ ಕಾರಣಕ್ಕೂ ಬರುವುದಿಲ್ಲ. ಯಾಕೆಂದರೆ ಇದರ ಹೆಸರು ಕ್ರಿಸ್ಪಿ ಡಕ್‌. (ಬ್ಯಾಟರ್‌ಗಳು ಶೂನ್ಯಕ್ಕೆ ಔಟಾಗುವುದನ್ನು ಡಕ್‌ ಔಟ್‌ ಎಂದು ಹೇಳುತ್ತಾರೆ) ಇಲ್ಲಿ ಬಗೆಬಗೆಯ ಡಕ್‌ ಕ್ರಿಸ್ಪಿ ಸಿಗುತ್ತದೆ. ಹೀಗಾಗಿ ಇಲ್ಲೂ ಡಕ್‌, ಅತ್ತ ಸ್ಟೇಡಿಯಮ್‌ ಒಳಗೂ ಡಕ್‌ ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಸಂಜನಾ ಅವರ ಪತಿ ಜಸ್‌ಪ್ರಿತ್‌ ಬುಮ್ರಾ ಮೂವರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ (ಡಕ್‌ ಔಟ್‌) ಔಟ್‌ ಮಾಡಿದ್ದರು. ಅಲ್ಲದೆ, ಆ ತಂಡದ ಒಟ್ಟಾರೆ ನಾಲ್ಕು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಸಂಜನಾ ಇಂಗ್ಲೆಂಡ್‌ ತಂಡವನ್ನು ತಮಾಷೆಗೆ ಈಡು ಮಾಡಿದ್ದರು.

ಇದನ್ನೂ ಓದಿ: ICC ODI Ranking : ಬುಮ್ರಾ ವರ್ಲ್ಡ್‌ ನಂಬರ್‌ 1, ಆರು ವಿಕೆಟ್‌ ಪಡೆದ ಮರುದಿನವೇ ಸಾಧನೆ

Exit mobile version