Site icon Vistara News

Shivpal Singh | ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ನಿಷೇಧ ಅವಧಿ ಕಡಿತ!

Shivpal Singh

ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಾಲ್ಕು ವರ್ಷ ನಿಷೇಧಕ್ಕೊಳಗಾಗಿದ್ದ ಭಾರತದ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್​ಗೆ(Shivpal Singh) ಇದೀಗ ಕೊಂಚ ರಿಲೀಫ್​ ಸಿಕ್ಕಿದೆ. ಅವರ ನಿಷೇಧ ಅವಧಿಯನ್ನು ನಾಲ್ಕು ವರ್ಷಗಳಿಂದ ಒಂದು ವರ್ಷಕ್ಕೆ ಕಡಿತ ಮಾಡಲಾಗಿದೆ.

ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಕಾರಣದಿಂದ ಶಿವಪಾಲ್ ಸಿಂಗ್​ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನಾಲ್ಕು ವರ್ಷಗಳ ನಿಷೇಧ ಹೇರಿತ್ತು. ಅದರಂತೆ ಅವರಿಗೆ ನಿಷೇಧದ ಅವಧಿ 2025ರ ಅಕ್ಟೋಬರ್‌ವರೆಗೆ ಇತ್ತು. ಆದರೆ ಇದೀಗ ಅವರು ಉದ್ದೇಶಪೂರ್ವಕವಾಗಿ ಮದ್ದು ಸೇವಿಸಿದ್ದಲ್ಲ ಎಂದು ತಿಳಿದು ಬಂದ ಕಾರಣ ಅವರಿಗೆ ನಿಷೇಧ ಅವಧಿಯನ್ನು ಕಡಿತಗೊಳಿಸಲಾಗಿದೆ.

ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ಕೂಟ ಬಳಿಕ ಶಿವಪಾಲ್ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು. ಈ ವೇಳೆ ಅವರು ಶಕ್ತಿವರ್ಧನೆಗಾಗಿ ಸೇವಿಸಿದ್ದ ವಸ್ತುವಿನಲ್ಲಿ ಉದ್ದೀಪನ ಮದ್ದು ಅಂಶ ಪತ್ತೆಯಾಗಿತ್ತು. ಈ ಕಾರಣದಿಂದ ಅವರಿಗೆ 4 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿತ್ತು.

ಈ ವಿಚಾರವಾಗಿ ಶಿವಪಾಲ್ ತಾನು ಉದ್ದೇಶಪೂರ್ವಕವಾಗಿ ಸೇವಿಸಿದ್ದಲ್ಲ ಎಂದು ನಾಡಾಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಶೀಲಿಸಿದ ಬಳಿಕ ಶಿವಪಾಲ್​ ಉದ್ದೇಶಪೂರ್ವಕವಾಗಿ ಮದ್ದು ಸೇವಿಸಿದಲ್ಲ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸಮಿತಿ ಶಿವಪಾಲ್ ಅವರ ನಿಷೇಧದ ಅವಧಿಯನ್ನು ಕಡಿಮೆ ಮಾಡಿದೆ. ಇದೀಗ ನಿಷೇಧ ಅವಧಿ ಕಡಿತಗೊಂಡ ಕಾರಣ ಶಿವಪಾಲ್ ಅವರು ಮುಂದಿನ ಕೂಟಗಳಲ್ಲಿ ಸ್ಪರ್ಧಿಸಲು ಮುಕ್ತವಾಗಲಿದ್ದಾರೆ.

ಇದನ್ನೂ ಓದಿ | Neeraj Chopra | ಈ ವರ್ಷ 90 ಮೀ. ದೂರ ಜಾವೆಲಿನ್​ ಎಸೆಯುವುದು ನನ್ನ ಮೊದಲ ಗುರಿ; ನೀರಜ್​ ಚೋಪ್ರಾ

Exit mobile version