ಮುಂಬಯಿ: ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿರುವ ಜಯ್ ಶಾ ಅವರು ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಏಷ್ಯಾಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿರುವುದೇ ಅವರ ಕೋಪಕ್ಕೆ ಕಾರಣ. ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ತಿಳಿದಿದ್ದರೂ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಪಂದ್ಯಗಳನ್ನು (Asia Cup 2023) ಆಯೋಜಿಸಿದ್ದಕ್ಕಾಗಿ ಅಭಿಮಾನಿಗಳು ಜಯ್ ಶಾ ವಿರುದ್ಧ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿತ್ತು. ಆದರೆ, ಮಳೆ ಅವರ ಉತ್ಸಾಹಕ್ಕೆ ಭಂಗ ತಂದಿತು. ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿತ್ತು. ಇದೀಗ ಸೂಪರ್ 4 ರ ಪಂದ್ಯದಲ್ಲೂ ಅದೇ ರೀತಿ ಆಗಿದೆ. ಈ ಬಾರಿ ಮೀಸಲು ದಿನದ ಆಯ್ಕೆ ಇದ್ದರೂ, ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದವು.
ಇದು ಮಾನ್ಸೂನ್ ಅವಧಿಯಾಗಿದೆ. ಸ್ವಾಭಾವಿಕವಾಗಿ ಭಾರತದ ಜೊತೆಗೆ,ಶ್ರೀಲಂಕಾ ಕೂಡ ವರ್ಷದ ಈ ಹಂತದಲ್ಲಿ ಭಾರಿ ಮಳೆ ಬರುತ್ತದೆ. ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ತಿಳಿದಿದ್ದರೂ ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಜಯ್ ಶಾ ಅವರನ್ನು ಟೀಕಿಸಿದರು.
ಟಿಕೆಟ್ ಬೆಲೆ ಇಳಿಕೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ (Asia Cup 2023) ಟಿಕೆಟ್ ದರವನ್ನು ಶೇ.95ರಷ್ಟು ಕಡಿತಗೊಳಿಸಿದೆ. ಏಷ್ಯಾ ಕಪ್ ಪಂದ್ಯದ ಟಿಕೆಟ್ ಬೆಲೆಯನ್ನು ಶೇಕಡಾ 40ರಷ್ಟು ಏರಿಕೆ ಮಾಡಿದ್ದ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಅಂತಿಮವಾಗಿ ಬೆಲೆಯನ್ನು ಇಳಿಕೆ ಮಾಡಲು ಮಂದಾಗಿ ಪ್ರೇಕ್ಷಕರು ಹೆಚ್ಚು ಉತ್ಸಾಹ ತೋರದ ಕಾರಣ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ ಶ್ರೀಲಂಕಾದಲ್ಲಿ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಟಿಕೆಟ್ ಬೆಲೆ 250 ರೂಪಾಯಿಗಳಾಗಿತ್ತು.
ಶ್ರೀಲಂಕಾದಲ್ಲಿ ಟೂರ್ನಿ ನಡೆಯುತ್ತಿದ್ದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸುತ್ತಿದೆ. ಹೀಗಾಗಿ ಕೆಲವು ಟಿಕೆಟ್ಗಲ ಬೆಲೆಯನ್ನು 10,000 ರೂ.ಗೆ ಹೆಚ್ಚಿಸಲಾಗಿತ್ತು. ಆದರೆ, ಅಭಿಮಾನಿಗಳು ಉತ್ಸಾಹ ತೋರದ ಕಾರಣ ಬೆಲೆ ಇಳಿಸಲಾಗಿದೆ. ಕೊಲಂಬೊದ 35,000 ಆಸನ ಸಾಮರ್ಥ್ಯದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಸೂಪರ್ ಫೋರ್ ಪಂದ್ಯಕ್ಕೆ ಕೇವಲ 7,000 ತವರಿನ ಬೆಂಬಲಿಗರು ಆಗಮಿಸಿದ್ದರು. ಆತಂಕಕ್ಕೆ ಒಳಗಾದ ಸಂಸ್ಥೆ ಬೆಲೆ ಇಳಿಸಿದೆ. ಅದೇ ರೀತಿ ಪಂದ್ಯಗಳಿಗೆ ಮಳೆಯೂ ಅಡಚಣೆ ಮಾಡುತ್ತಿರುವ ಕಾರಣ ಪ್ರೇಕ್ಷಕರು ಮೈದಾನದ ಕಡೆಗೆ ಬರುತ್ತಿಲ್ಲ. ಇವೆಲ್ಲ ಕಾರಣಕ್ಕೆ ಪಂದ್ಯದ ಟಿಕೆಟ್ ದರ ಇಳಿಸುವುದು ಅನಿವಾರ್ಯವಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ದಿನದ ಪಂದ್ಯ ಸೇರಿದಂತೆ ಉಳಿದ ಎಲ್ಲಾ ಸೂಪರ್ ಫೋರ್ ಪಂದ್ಯಗಳಿಗೆ ಟಿಕೆಟ್ ದರದಲ್ಲಿ ಶೇಕಡಾ 95 ರಷ್ಟು ಬೆಲೆ ಕಡಿತವನ್ನು ಘೋಷಿಸಿದೆ. ಇಷ್ಟಾದರೂ ಭಾನುವಾರ ಸ್ಟೇಡಿಯಮ್ನಲ್ಲಿ ಕೇವಲ 20 ಸಾವಿರ ಜನರು ಮಾತ್ರ ಕಂಡು ಬಂದರು ಎನ್ನಲಾಗಿದೆ.
ಅಭಿಮಾನಿಗಳ ಕೋಪ
ಟಿಕೆಟ್ ಬೆಲೆ ಏರಿಕೆಯ ಕುರಿತು ಅಭಿಮಾನಿಗಳನ್ನು ಬೇಸರ ವ್ಯಕ್ತಪಡಿಸಿದ್ದರು . ವಿದೇಶಿ ವಿನಿಮಯ ಬಿಕ್ಕಟ್ಟಿನ ನಂತರ ಶ್ರೀಲಂಕಾ ಕಳೆದ ವರ್ಷ ತಿಂಗಳುಗಟ್ಟಲೆ ಆಹಾರ, ಇಂಧನ ಮತ್ತು ಔಷಧಿಗಳ ಕೊರತೆಯನ್ನು ಅನುಭವಿಸಿತು, ಇದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಇದು ಅಧ್ಯಕ್ಷರನ್ನು ಪದಚ್ಯುತಗೊಳಿಸುವಲ್ಲಿ ಕೊನೆಗೊಂಡಿತ್ತು. ಇದೀಗ ಟಿಕೆಟ್ ಬೆಲೆ ಏರಿಕೆ ಮಾಡಿರುವುದು ಅಭಿಮಾನಿಗಳನ್ನು ಕೆರಳಿಸಿದೆ.
50 ಓವರ್ಗಳ ಏಷ್ಯಾ ಕಪ್ ಮುಂಬರುವ ಏಕದಿನ ವಿಶ್ವ ಕಪ್ಗೆ ಅಭ್ಯಾಸದಂತಿದೆ. ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತವು ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ ನಂತರ ಹೆಚ್ಚಿನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಮಳೆ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಿವೆ.