ನವ ದೆಹಲಿ: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ನಲ್ಲಿ ಪಾಕಿಸ್ತಾನದಲ್ಲೇ ನಡೆಯಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೋಡಿಕೊಂಡಿದ್ದಾರೆ. ಶನಿವಾರ ಬಹ್ರೇನ್ನಲ್ಲಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರೂ ಆಗಿರುವ ಜಯ್ ಶಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಮ್ ಸೇಥಿ ಮಾತುಕತೆ ನಡೆಸಿದ್ದು, ಈ ವೇಳೆ ಪಾಕಿಸ್ತಾನದಲ್ಲಿ ನಡೆಸಬೇಕು ಎಂಬ ಪಿಸಿಬಿಯ ಒತ್ತಾಯಕ್ಕೆ ಜಯ್ ಶಾ ಸೊಪ್ಪು ಹಾಕಿಲ್ಲ ಎಂದು ಹೇಳಲಾಗಿದೆ.
ಪಿಸಿಬಿಯ ಹಿಂದಿನ ಅಧ್ಯಕ್ಷರಾಗಿದ್ದ ರಮೀಜ್ ರಾಜಾ ಏಷ್ಯಾ ಕಪ್ ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಹಠ ಹಿಡಿದಿದ್ದರು. ಹೊಸ ಅಧ್ಯಕ್ಷ ನಜಮ್ ಅವರೂ ಅದೇ ಮಾತನ್ನು ಪುನರುಚ್ಚರಿಸಿದ್ದರು. ಆದರೆ, ಜಯ್ ಶಾ ಅಂಥದ್ದೊಂದು ಅವಕಾಶವನ್ನು ನಿರಾಕರಿಸುತ್ತಲೇ ಬಂದಿದ್ದರು. ಭಾರತ ತಂಡ ಏಷ್ಯಾ ಕಪ್ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ. ಅಲ್ಲಿಗೆ ಪ್ರವಾಸ ಮಾಡುವ ವಿಚಾರ ಕೇಂದ್ರ ಸರಕಾರದ ವಿವೇಚನೆಗೆ ಬಿಟ್ಟಿರುವ ಕಾರಣ ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಇದೀಗ ಮತ್ತೆ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಟೂರ್ನಿ ನಡೆಯದ ಕಾರಣ ಬೇರೆ ಕಡೆಗೆ ಅದನ್ನು ಸ್ಥಳಾಂತರ ಮಾಡಲು ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ಯುಎಇ ಟೂರ್ನಿ ನಡೆಸಲು ಮೊದಲ ಆದ್ಯತೆಯ ತಟಸ್ಥ ತಾಣವಾಗಿದೆ. ಶ್ರೀಲಂಕಾವನ್ನು ಎರಡನೇ ಆಯ್ಕೆಯಾಗಿ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : Asia Cup | ಏಷ್ಯಾ ಕಪ್ ಬಗ್ಗೆ ಚರ್ಚಿಸಲು ಜಯ್ ಶಾ ಭೇಟಿಗೆ ಮುಂದಾದ ಪಾಕ್ ಕ್ರಿಕೆಟ್ ಅಧ್ಯಕ್ಷ!
ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ನಡೆಯುವ ಏಷ್ಯಾ ಕಪ್ನ ಆತಿಥ್ಯ ಹಕ್ಕು ಪಾಕಿಸ್ತಾನಕ್ಕೆ ಲಭಿಸಿತ್ತು. ಸೆಪ್ಟೆಂಬರ್ನಲ್ಲಿ ಟೂರ್ನಿ ನಿಗದಿಯಾಗಿದೆ. ಅದರೆ, ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಒಪ್ಪಿಲ್ಲ. ಈ ಹೇಳಿಕೆಯ ಬಳಿಕ ಎರಡೂ ದೇಶಗಳ ಕ್ರಿಕೆಟ್ ಮಂಡಳಿಯ ಮಾತಿನ ಸಮರಕ್ಕೆ ಕಾರಣವಾಗಿತ್ತು. ಇದೀಗ ಏಷ್ಯಾ ಕ್ರಿಕೆಟ್ ಕೌನ್ಸಿಲ್ ತನ್ನ ನಿಲುವನ್ನು ಖಾತರಿಪಡಿಸಿದೆ.