ಲಂಡನ್ : ಮೂರು ಪಂದ್ಯಗಳ ಏಕ ದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಖುಷಿಯೊಂದಿಗೆ ಭಾರತಕ್ಕೆ ಮರಳಿದ ಮಹಿಳೆಯರ ತಂಡದ ಆಟಗಾರ್ತಿಯರು ಏರ್‌ಪೋರ್ಟ್‌ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಯಾಟ್ ಮಾಡಿದ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಬ್ಯಾಟರ್ ಜೆಮಿಮಾ ರೋಡ್ರಿಗಸ್ ಅವರು ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Dear Jhulu di, I know you must have gotten a million messages, but I just want you to know that I’ve always looked up to you (not just because you’re way taller than me😛) but in so many aspects.
— Jemimah Rodrigues (@JemiRodrigues) September 26, 2022
You always inspired me and led by example how to be a good senior. pic.twitter.com/EpFgf4Jnq7
ಈ ವಿಡಿಯೊದ ಪ್ರಮುಖ ಹೈಲೈಟ್ ಬೌಲರ್ ಜೂಲನ್ ಗೋಸ್ವಾಮಿ. ಅವರು ಅಂತಾರಾಷ್ಟ್ರೀಯ ಸರಣಿಗೆ ವಿದಾಯ ಹೇಳಿದ್ದು, ಹೀಗಾಗಿ ಎಲ್ಲ ಆಟಗಾರ್ತಿಯರು ಅವರಿಗೆ ವಿದಾಯ ಕೋರುತ್ತಿದ್ದಾರೆ. ಅಂತೆಯೇ ಇಂಗ್ಲೆಂಡ್‌ನಿಂದ ವಾಪಸಾಗುವ ವೇಳೆ ಡಾನ್ಸ್ ಕೂಡ ಮಾಡಿದ್ದಾರೆ. ಟ್ವೀಟ್ ಮಾಡಿರುವ ಜೆಮಿಮಾ ಅವರು ಜೂಲನ್ ಗೋಸ್ವಾಮಿಗೆ ಶುಭಾಶಯ ಕೂಡ ಕೋರಿದ್ದಾರೆ. ಅಲ್ಲದೆ, ಅವರ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ.
ಜೆಮಿಮಾ ರೋಡ್ರಿಗಸ್, ಜೂಲನ್ ಗೋಸ್ವಾಮಿ, ಹರ್ಲಿನ್ ದೇವಲ್ ಕ್ಯಾಟ್‌ವಾಕ್ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರು ಪಿಪಿಇ ಕಿಟ್ ಹಾಕಿಕೊಂಡು ಏರ್‌ಪೋರ್ಟ್‌ನಲ್ಲಿ ಕ್ಯಾಟ್‌ವಾಕ್ ಮಾಡಿದ್ದಾರೆ.
ಭಾರತ ಮಹಿಳೆಯರ ತಂಡಕ್ಕೆ ೨೦೨೨ರಲ್ಲಿ ಅದು ಕೊನೇ ಅಂತಾರಾಷ್ಟ್ರೀಯ ಟೂರ್ನಿಯಾಗಿದೆ. ೨೦೨೩ ವಿಶ್ವ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಅದಕ್ಕಿಂತ ಮೊದಲು ಮಹಿಳೆಯರ ಐಪಿಎಲ್ ನಡೆದರೆ ಅದರಲ್ಲಿ ಪಾಲ್ಗೊಳ್ಳಬಹುದು.
ಇದನ್ನೂ ಓದಿ | Jhulan Goswami | ಕೋಲ್ಕೊತಾದಲ್ಲಿ ಜೂಲನ್ ಗೋಸ್ವಾಮಿಗೆ ಪುಷ್ಪ ವೃಷ್ಟಿ