ಸ್ಯಾನ್ ಜೋಸ್: ಅಮೇರಿಕದ ಫುಟ್ಬಾಲ್ ಆಟಗಾರ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್(29)(Jesus Alberto) ಅವರು ಮೊಸಳೆ ದಾಳಿಗೆ(Jesus Alberto Lopez Ortiz Crocodile Video) ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕಾದ ಕೋಸ್ಟರಿಕಾ ರಾಜಧಾನಿ ಸ್ಯಾನ್ ಜೋಸ್‌ನಿಂದ 140 ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ಮೊಸಳೆಯು ಒರ್ಟಿಜ್ ದೇಹವನ್ನು ನದಿಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್(viral video) ಆಗಿದೆ.
ಜೀಸಸ್ ಆಲ್ಬರ್ಟೊ ಅವರು ಮೀನುಗಾರಿಕೆ ಸೇತುವೆಯ ಬಳಿ ವ್ಯಾಯಾಮ ಮಾಡುತ್ತಿದ್ದಾಗ ಅವರ ಮೇಲೆ ಮೊಸಳೆ ದಾಳಿ ಮಾಡಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಒರ್ಟಿಜ್ ಡಿಪೋರ್ಟಿವೊರಿಯೊ ಕ್ಯಾನಸ್ ಅಮೆಚೂರ್ ಸಾಕರ್ ಕ್ಲಬ್ನ ಸದಸ್ಯರಾಗಿದ್ದಾರೆ.
ಇದನ್ನೂ ಓದಿ Viral Video : ಹರ್ಯಾಣ್ವಿ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿದ ಪುಟಾಣಿ! ಈ ವಿಡಿಯೊವನ್ನು ನೋಡದೇ ಇರಲು ಸಾಧ್ಯವೇ?
ದಾಳಿ ನಂತರ ಮೊಸಳೆ ಜೀಸಸ್ ಆಲ್ಬರ್ಟೋ ದೇಹವನ್ನು ಬಾಯಿಯಿಂದ ಕಚ್ಚಿಕೊಂಡು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಎಳೆದೊಯ್ಯುತ್ತಿರುವ ದೃಶ್ಯಗಳನ್ನು ಇಲ್ಲಿನ ಸ್ಥಳೀಯರು ವಿಡಿಯೊ ಮಾಡಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮೊಸಳೆಯನ್ನು ಗುಂಡಿಕ್ಕಿ ಕೊಂದು ಜೀಸಸ್ ಆಲ್ಪರ್ಟೊ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಕನಾಸ್ ನದಿಯು ಮೊಸಳೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಅಪಾರ ಪ್ರಮಾಣದ ಮೊಸಳೆಗಳು ಕಾಣಸಿಗುತ್ತದೆ. ಜೀಸಸ್ ಆಲ್ಪರ್ಟೊ ಸಾವಿಗೆ ಅಮೆರಿಕ ಸೇರಿ ಅನೇಕ ಫುಟ್ಬಾಲ್ ಕ್ಲಬ್ ಕಂಬನಿ ಮಿಡಿದಿದೆ.