ಮುಂಬಯಿ: ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮುಂಬೈನ ತಾಜ್ ಹೋಟೆಲ್ನಲ್ಲಿ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ತನ್ನ ಆಟದ ದಿನಗಳಲ್ಲಿ, ಜೂಲನ್ ತನ್ನ ವೇಗ ಮತ್ತು ಮೊನಚಾದ ದಾಳಿಯ ಮೂಲಕ ಎದುರಾಳಿಯಗಳನ್ನು ನಡುಗಿಸುತ್ತಿದ್ದರು. ಇದೀಗ ಅದೇ ರೀತಿಯ ಭಾವನೆಯನ್ನು ಹೋಟೆಲ್ ವಿರುದ್ಧವೂ ತೋರಿದ್ದಾರೆ.
ಭಾರತದ ಮಾಜಿ ಅನುಭವಿ ವೇಗಿ ಟ್ವಿಟರ್ನಲ್ಲಿ ಹೋಟೆಲ್ ಅನ್ನು ಟ್ಯಾಗ್ ಮಾಡಿ, @TajMahalMumbai ಹೋಟೆಲ್ನಲ ಆಹಾರದ ಗುಣಮಟ್ಟದಿಂದ ನಿರಾಶೆಗೊಂಡಿದ್ದೇನೆ. ಸಿಬ್ಬಂದಿಗೆ ಅನೇಕ ಬಾರಿ ವಿವರಣೆ ನೀಡಿದ ನಂತರವೂ ಮೂರು ಬಾರಿ ಕಳಪೆ ಊಟ ನೀಡಲಾಗಿದೆ. ಪ್ರಖ್ಯಾತಿ ಪಡೆದಿರುವ ಹೋಟೆಲ್ನಿಂದ ಇಂಥದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಹೋಟೆಲ್ನ ಮ್ಯಾನೇಜ್ಮೆಂಟ್ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.
ವಿದಾಯ ಹೇಳಿದ್ದಾರೆ ಜೂಲನ್
ವಿಶ್ವದ ಶ್ರೇಷ್ಠ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ (Jhulan Goswami) ಅವರು 2022ರ ಸೆಪ್ಟೆಂಬರ್ 24ರಂದು ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿನ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ಅವರು ಅವರು ಕೊನೇ ಪಂದ್ಯವನ್ನಾಡಿದ್ದಾರೆ. ಸುಮಾರು ೨೦ ವರ್ಷಗಳ ಕಾಲ ಮಹಿಳೆಯರ ತಂಡದ ಕಾಯಂ ಸದಸ್ಯರಾಗಿದ್ದ ಅವರ ಕೆಲವೊಂದು ಸಾಧನೆಗಳ ಪಟ್ಟಿ ಇಲ್ಲಿದೆ.
ಜೂಲನ್ ಗೋಸ್ವಾಮಿ ಅವರು ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಏಕ ದಿನ ವಿಕೆಟ್ಗಳನ್ನು ಕಬಳಿಸಿದ ಸಾಧಕಿ. ೨೦೩ ಪಂದ್ಯಗಳನ್ನು ಆಡಿರುವ ಅವರು ೨೫೩ ವಿಕೆಟ್ ಉರುಳಿಸಿದ್ದಾರೆ.
ಜೂಲನ್ ಅವರು ಮಹಿಳೆಯ ಕ್ರಿಕೆಟ್ ವಿಶ್ವ ಕಪ್ನಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ವಿಶ್ವದ ಕ್ರಿಕೆಟ್ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅವರ ಖಾತೆಯಲ್ಲಿ ಒಟ್ಟು ೪೦ ವಿಶ್ವ ಕಪ್ ವಿಕೆಟ್ಗಳಿವೆ. ಆಸ್ಟ್ರೇಲಿಯಾದ ಲಿನ್ ಫುಲ್ಸ್ಟಾನ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
ಜೂಲನ್ ಅವರು ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಬಳಿಕ ದೀರ್ಘ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ್ತಿ. ೩೯ ವರ್ಷದ ಜೂಲಾನ್ ಗೋಸ್ವಾಮಿ ಅವರು ೨೦ ವರ್ಷ ೭೫ ದಿನಗಳ ಕಾಲ ಆಡಿದ್ದಾರೆ.
ಜೂಲನ್ ಗೋಸ್ವಾಮಿ ಅವರು ಏಕ ದಿನ ಮಾದರಿಯಲ್ಲಿ ೧೦೦೦ ರನ್ ಬಾರಿಸಿದ್ದರಲ್ಲದೆ, ೫೦ ಕ್ಯಾಚ್ಗಳನ್ನೂ ಪಡೆದುಕೊಂಡಿದ್ದಾರೆ.
ಜೂಲನ್ ಗೋಸ್ವಾಮಿ ಅವರು ೨೦೦೬ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ೧೦ ವಿಕೆಟ್ಗಳ ಸಾಧನೆ ಮಾಡಿದ್ದರು. ಆ ವೇಳೆ ೨೩ ವರ್ಷವಾಗಿದ್ದ ಜೂಲನ್ ಟೆಸ್ಟ್ನಲ್ಲಿ ೧೦ ವಿಕೆಟ್