Site icon Vistara News

Joe Root: ಕೇವಲ 2 ರನ್ ಗಳಿಸಿ ಭಾರತ ವಿರುದ್ಧ ವಿಶ್ವ ದಾಖಲೆ ಬರೆದ ಜೋ ರೂಟ್​

Joe Root

ಹೈದರಾಬಾದ್​: ಇಂಗ್ಲೆಂಡ್ ತಂಡದ ಸ್ಟಾರ್​ ಬ್ಯಾಟರ್​ ಜೋ ರೂಟ್(Joe Root) ಅವರು ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್(Ricky Ponting) ಅವರನ್ನು ಹಿಂದಿಕ್ಕಿ ಟೆಸ್ಟ್ ಪಂದ್ಯಗಳಲ್ಲಿ(India in Test cricket) ಭಾರತದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಇತಿಹಾಸವನ್ನು ಬರೆದಿದ್ದಾರೆ. ರೂಟ್ ಅವರು ಇಂಗ್ಲೆಂಡ್ ಮತ್ತು ಭಾರತದ ನಡುವೆ ಒಟ್ಟು 2557* ಟೆಸ್ಟ್ ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಕೂಡ ರೂಟ್​ ಮುರಿದಿದ್ದರು.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರೂಟ್ ಆರು ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರೂ ಕೂಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಭಾರತ ವಿರುದ್ಧ ಟೆಸ್ಟ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡರು. ರೂಟ್​ ಭಾರತ ಎದುರು 26 ಟೆಸ್ಟ್‌ ಪಂದ್ಯಗಳನ್ನಾಡಿ 9 ಶತಕ ಮತ್ತು 10 ಅರ್ಧ ಶತಕ ಬಾರಿಸಿದ್ದಾರೆ.

ಭಾರತದಲ್ಲಿ 1000 ರನ್‌ಗಳನ್ನು ಗಳಿಸಿದ ಐದನೇ ಪ್ರವಾಸಿ ಬ್ಯಾಟರ್​ ಎನ್ನುವ ದಾಖಲೆಯನ್ನ ಕೂಡ ರೂಟ್​ ಬರೆದಿದ್ದಾರೆ. 33 ವರ್ಷದ ಜೋ ರೂಟ್ ಟೆಸ್ಟ್​ ವೃತ್ತಿ ಜೀವನದಲ್ಲಿ ಇದುವರೆಗೆ 11,447* ರನ್‌ಗಳನ್ನು ಬಾರಿಸಿದ್ದಾರೆ. 30 ಶತಕಗಳು ಕೂಡ ಒಳಗೊಂಡಿದೆ.

ಇದನ್ನೂ ಓದಿ Ravindra Jadeja : ವಿಶ್ವದ ಪ್ರಖ್ಯಾತ ಆಲ್​ರೌಂಡರ್​ಗಳ ಪಟ್ಟಿ ಸೇರಿದ ರವೀಂದ್ರ ಜಡೇಜಾ

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ರೂಟ್​ ವಿಶ್ವ ದಾಖಲೆ ಬರೆದಿದ್ದಾರೆ. ಇದುವರೆಗೆ 48 ಪಂದ್ಯಗಳನ್ನಾಡಿರುವ ರೂಟ್ 12 ಶತಕ ಹಾಗೂ 16 ಅರ್ಧಶತಕಗಳೊಂದಿಗೆ ಒಟ್ಟು 4016 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೊದಲ ಇನಿಂಗ್ಸ್​ನಲ್ಲಿ ರೂಟ್​ ಅವರು ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯೊಂದನ್ನು ಮುರಿದಿದ್ದರು. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದರು.

ಸಚಿನ್ ತೆಂಡೂಲ್ಕರ್​ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ಗಳಲ್ಲಿ 32 ಪಂದ್ಯಗಳಲ್ಲಿ 51.73 ಸರಾಸರಿಯಲ್ಲಿ 2,535 ರನ್ ಗಳಿಸುವ ಮೂಲಕ ಪ್ರಮುಖ ರನ್ ಗಳಿಸಿ ಇದುವರೆಗೆ ಅಗ್ರಸ್ಥಾನ ಪಡೆದಿದ್ದರು. ಈಗ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ. ರೂಟ್‌ ಅವರು ಭಾರತದ ವಿರುದ್ಧ 25 ಪಂದ್ಯಗಳಿಂದ 63.15 ಸರಾಸರಿಯಲ್ಲಿ ಒಂಬತ್ತು ಶತಕಗಳು ಮತ್ತು 10 ಅರ್ಧ ಶತಕಗಳೊಂದಿಗೆ 2,556* ರನ್ ಗಳಿಸಿದ್ದಾರೆ.

Exit mobile version