ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್ (Test Cricket ) ಮಾದರಿಯಲ್ಲಿ ಒಟ್ಟಾರೆ ೨೮ ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ಅವರು ೨೦೧8ರಿಂದ ಒಟ್ಟು ೧೧ ಶತಕಗಳನ್ನು ಬಾರಿಸುವ ಮೂಲಕ ಕ್ರಿಕೆಟ್ ಕ್ಷೇತ್ರದ ದಿಗ್ಗಜರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜೋ ರೂಟ್ ಭಾರತದ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮರು ನಿಗದಿತ ಐದನೇ ಟೆಸ್ಟ್ ಪಂದ್ಯದ ವೇಳೆ ಅಜೇಯ ೧೪೨* ರನ್ ಬಾರಿಸುವ ಮೂಲಕ ೨೮ ಶತಕದ ಶ್ರೇಯಸ್ಸಿಗೆ ಪಾತ್ರರಾದರು. ತಮ್ಮ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದ ವಿಜಯವನ್ನು ಕಸಿದುಕೊಂಡಿದ್ದಾರೆ. ಈ ಶತಕದೊಂದಿಗೆ ಜೊ ರೂಟ್ ಭಾರತದ ವಿರುದ್ಧ ಒಟ್ಟಾರೆ ೯ ಶತಕಗಳನ್ನು ಬಾರಿಸಿದಂತಾಗಿದೆ. ಇದು ಟೀಮ್ ಇಂಡಿಯಾ ವಿರುದ್ಧ ಆಟಗಾರರೊಬ್ಬರು ಕಲೆ ಹಾಕಿದ ಗರಿಷ್ಠ ಶತಕಗಳು.
ಭಾರತ ವಿರುದ್ಧದ ಈ ಸರಣಿಯ ಐದು ಪಂದ್ಯಗಳಲ್ಲಿ ಜೋ ರೂಟ್ ೪ ಶತಕಗಳನ್ನು ದಾಖಲಿಸಿದ್ದು, ಒಟ್ಟಾರೆ ೭೩೭ ರನ್ ಬಾರಿಸಿದ್ದಾರೆ. ರೂಟ್ ಅವರ ಬ್ಯಾಟಿಂಗ್ ಸಾಧನೆಗೆ ಕ್ರಿಕೆಟ್ ಕ್ಷೇತ್ರದ ಹಲವಾರು ಹಿರಿಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
೨೭ರಲ್ಲೇ ಕೊಹ್ಲಿ ಬಾಕಿ
೨೦೧೮ರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಟ್ಟಾರೆ ೨೭ ಶತಕಗಳನ್ನು ಬಾರಿಸಿದ್ದರು. ಈ ವೇಳೆ ರೂಟ್ ೧೭ ಶತಕಗಳನ್ನಷ್ಟೇ ಬಾರಿಸಿದ್ದರು. ೨೦೨೨ ಮಧ್ಯಕ್ಕೆ ರೂಟ್ ೨೮ ಶತಕ ಬಾರಿಸಿದ್ದರೆ ಕೊಹ್ಲಿ ಅಷ್ಟರಲ್ಲೇ ಉಳಿದುಕೊಂಡಿದ್ದಾರೆ. ಪ್ರಸ್ತುತ ಅಡುತ್ತಿರುವ ಆಟಗಾರರಲ್ಲಿ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ೨೭ ಶತಕಗಳನ್ನು ಬಾರಿಸಿದ್ದರೆ ಕೇನ್ ವಿಲಿಯಮ್ಸ್ ೨೪ ಶತಕಗಳನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ: England Tour : ಭಾರತಕ್ಕೆ 7 ವಿಕೆಟ್ ಸೋಲು