ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕ ದಿನ ಸರಣಿಗೆ 14 ಸದಸ್ಯರ ಇಂಗ್ಲೆಂಡ್ ತಂಡ ಗುರುವಾರ ಪ್ರಕಟಗೊಂಡಿದೆ. ಸುದೀರ್ಘ ಕಾಲದ ಬಳಿಕ ವೇಗಿ ಜೋಫ್ರಾ ಆರ್ಚರ್(Jofra Archer) ಮತ್ತೆ ತಂಡಕ್ಕೆ ಮರಳಿದ್ದಾರೆ.
2019ರ ಏಕ ದಿನ ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ಚರ್, ಬಳಿಕ ಬಲಗೈ ಮಣಿಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮೂಲಕ ಸರಿಸುಮಾರು 2 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ.
2021ರ ಮಾರ್ಚ್‌ನಲ್ಲಿ ಟಿ20 ಸರಣಿಗೆ ಭಾರತ ಪ್ರವಾಸದ ಕೈಗೊಂಡಿದ್ದ ವೇಳೆ ಆರ್ಚರ್ ಗಾಯಗೊಂಡು ತಂಡದಿಂದ ಹೊರಬಿದ್ದರು. ಇದಾದ ಬಳಿಕ ಯಾವುದೇ ಪಂದ್ಯದಲ್ಲಿಯೂ ಅವರು ಕಾಣಿಸಿಕೊಂಡಿರಲಿಲ್ಲ. ಇದೀಗ ಸಂಪೂರ್ಣ ಚೇತರಿಕೆ ಕಂಡಿರುವ ಅವರು ಮತ್ತೆ ಕಮ್ಬ್ಯಾಕ್ ಮಾಡಲು ಸಿದ್ದರಾಗಿದ್ದಾರೆ.
ಜೋಫ್ರಾ ಆರ್ಚರ್ ಅವರ ಚೇತರಿಕೆಯ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದ್ದು “ಜೋಫ್ರ ಆರ್ಚರ್ ತಮ್ಮ ಗಾಯದಿಂದ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | PAK VS ENG | ಪಾಕಿಸ್ತಾನಕ್ಕೆ ತವರಿನಲ್ಲೇ ಕ್ಲೀನ್ ಸ್ವೀಪ್ ಮುಖಭಂಗ; ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ಗೆ 8 ವಿಕೆಟ್ ಗೆಲುವು