Site icon Vistara News

IPL 2024: ಬೆಂಗಳೂರಿಗೆ ಬಂದಿಳಿದ ಆರ್ಚರ್​; ಕೊಹ್ಲಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕಣಕ್ಕೆ!

Virat Kohli

ಬೆಂಗಳೂರು: ಗಾಯದಿಂದಾಗಿ ಹಲವು ವರ್ಷಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಇಂಗ್ಲೆಂಡ್ ತಂಡದ ಸ್ಟಾರ್​ ವೇಗಿ ಜೋಫ್ರಾ ಆರ್ಚರ್(Jofra Archer) ಅವರು ಬೆಂಗಳೂರಿಗೆ ಆಗಮಿಸಿದ್ದು ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಆರ್ಚರ್​ ಬೆಂಗಳೂರಿಗೆ ಬಂದ ವಿಚಾರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ಬ್ಯೂಸಿ ಇನ್​ ಬೆಂಗಳೂರು’ ಎಂದು ಬರೆದುಕೊಂಡಿದ್ದಾರೆ. ಇದನ್ನೇ ಕೆಲ ನೆಟ್ಟಿಗರು ಆರ್ಚರ್​ ಆರ್​ಸಿಬಿ(RCB) ಪರ ಆಡಲು ಬಂದಿರುವುದಾಗಿ ಸುದ್ದಿ ಹಬ್ಬಿಸಿದ್ದಾರೆ.

ಹೌದು, ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು(IPL 2024) ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್​ 22ರಂದು ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ತಂಡ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಆದರೆ ತಂಡದ ಸ್ಟಾರ್​ ಆಟಗಾರ ವಿರಾಟ್‌ ಕೊಹ್ಲಿ(virat kohli) ಇನ್ನೂ ಕೂಡ ತಂಡ ಸೇರಿಲ್ಲ. ಅವರ ಅನುಪಸ್ಥಿತಿಯಲ್ಲೇ ತಂಡ ಅಭ್ಯಾಸ ನಡೆಸುತ್ತಿದೆ. ಕೊಹ್ಲಿ ತಂಡ ಸೇರಲು ಇನ್ನೂ ಕೆಲವು ದಿನಗಳಾಗುತ್ತವೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ. ಬಿಸಿಸಿಐ ಮೂಲಗಳು ನೀಡಿದ ಹೇಳಿಕೆ ಕಂಡು ಈ ಬಾರಿ ಕೊಹ್ಲಿ ಐಪಿಎಲ್​ ಆಡುವುದು ಬಹುತೇಖ ಅನುಮಾನ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.

ಕೊಹ್ಲಿ ಐಪಿಎಲ್ ಆಡುತ್ತಾರೋ? ಇಲ್ಲವೋ? ಎಂದು ಅಭಿಮಾನಿಗಳು ಚಿಂತಿಸುತಿದ್ದ ವೇಳೆ ಆರ್ಚರ್​ ಕೂಡ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದನ್ನೇ ನೆಟ್ಟಿಗರು ಆಹಾರವನ್ನಾಗಿ ಬಳಸಿಕೊಂಡು ಆರ್ಚರ್​ ಆರ್​ಸಿಬಿ ಪರ ಆಡಲಿದ್ದಾರೆ ಎನ್ನುವು ಸುಳ್ಳು ಸುದ್ದಿ ಹಬ್ಬಿಸಲು ಆರಂಭಿಸಿದ್ದಾರೆ. ಆರ್ಚರ್​ ಕೂಡ ಈ ಬಾರಿಯ ಹರಾಜಿನಲ್ಲಿ ಸೇಲ್​ ಆಗಿರಲಿಲ್ಲ. ಹೀಗಾಗಿ ಅವರನ್ನು ಆರ್​ಸಿಬಿ ತಂಡ ಬದಲಿ ಆಟಗಾರನಾಗಿ ಖರೀದಿಸಿದ್ದು ಮಾರ್ಚ್ 19ರಂದು ನಡೆಯುವ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದ ವೇಳೆ ಇದನ್ನು ಪ್ರಕಟಿಸಲಾಗುತ್ತದೆ ಎಂದು ನೆಟ್ಟಿಗರು ಸುದ್ದಿ ಹರಡಿದ್ದಾರೆ.

ಇದನ್ನೂ ಓದಿ IPL 2024 : ಐಪಿಎಲ್​ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್​ ಬಾರಿಸಿದ ಐವರು ಬ್ಯಾಟರ್​ಗಳು ಇವರು

ತಂಡದ ನಾಯಕ ಫಾಫ್​ ಡು ಪ್ಲೆಸಿಸ್‌, ಅಲ್ಜಾರಿ ಜೋಸೆಫ್, ದಿನೇಶ್​ ಕಾರ್ತಿಕ್, ಗ್ಲೆನ್ ಮ್ಯಾಕ್ಸ್​ವೆಲ್​​ ಸೇರಿ ಉಳಿದ ಎಲ್ಲ ಆಟಗಾರರು ಅಭ್ಯಾಸ ನಿರತರಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್​ ಕೊಹ್ಲಿ(Virat Kohli), ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್​ಗೆ ತೆರೆಳಿದ್ದರು. ಜನವರಿ 15ರಂದು ಕೊಹ್ಲಿ ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಲಂಡನ್​ನಲ್ಲಿಯೇ ಇದ್ದಾರೆ.

ಆರ್ಚರ್​ ಬಂದಿದ್ದೇ ಬೇರೆ ಕಾರಣಕ್ಕೆ


ಅಸಲಿಗೆ ಆರ್ಚರ್​ ಅವರು ಬೆಂಗಳೂರಿಗೆ ಬಂದಿದ್ದಿ ಕೌಂಟಿ ಕ್ರಿಕೆಟ್​ ಅಭ್ಯಾಸಕ್ಕೆಂದು. ಆರ್ಚರ್​ ಮಾತ್ರವಲ್ಲದೆ ಇನ್ನೂ ಕೆಲ ಕೌಂಟಿ ತಂಡದ ಆಟಗಾರರು ಕೂಡ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆರ್ಚರ್​ ಕಳೆದ ಬಾರಿ ಮುಂಬೈ ಇಂಡಿಯನ್ಸ್‌ ಪರ 5 ಪಂದ್ಯಗಳನ್ನು ಆಡಿ ಕೇವಲ 2 ವಿಕೆಟ್ ಮಾತ್ರ ಕಿತ್ತಿದ್ದರು.

Exit mobile version