Site icon Vistara News

John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

John Cena: John Cena announces retirement from WWE, 2025 to be his last year in professional wrestling

ನ್ಯೂಯಾರ್ಕ್​: ‘ನೆವರ್‌ ಗೀವ್‌ ಅಪ್‌’ ಎಂಬ ಘೋಷವಾಕ್ಯದೊಂದಿಗೆ ಡಬ್ಲ್ಯೂ ಡಬ್ಲ್ಯೂಇ(WWE) ಬಾಕ್ಸಿಂಗ್​ ರಿಂಗ್​ನಲ್ಲಿ 16 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಖ್ಯಾತ ರಸ್ಲರ್​ ಜಾನ್​ ಸೀನ(John Cena) ಅವರು ತಮ್ಮ ಬಾಕ್ಸಿಂಗ್​ ವೇತ್ತಿ ಜೀವನಕ್ಕೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ. ಟೊರೊಂಟಒದಲ್ಲಿ ನಡೆದ ಮನಿ​ ಇನ್​ ದಿ ಬ್ಯಾಂಕ್​ ಟೂರ್ನಿಯಲ್ಲಿ ತನ್ನ ನಿವೃತ್ತಿ ಪ್ರಕಟಿಸಿದ್ದಾರೆ. ಜಾನ್​ ಸೀನ ನಮ್ಮಲ್ಲಿ ಹಲವರ ಬಾಲ್ಯದ ಹೀರೋ ಆಗಿರುವುದು ಕೂಡ ರೋಮಾಂಚಕ ಸಾಧನೆಯೇ ಸರಿ!

‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್​ ಧರಿಸಿ ಸೀನಾ ತನ್ನ ನಿವೃತ್ತಿಯನ್ನು ಪ್ರಕಟಿಸಿದರು. ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ನಿವೃತ್ತಿಯಾಗಲಿದ್ದಾರೆ. 2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ.

ಆತ ಹುಟ್ಟು ಹೋರಾಟಗಾರ!

1977 ಏಪ್ರಿಲ್ 23ರಂದು ಅಮೆರಿಕದಲ್ಲಿ ಜನಿಸಿದ ಜಾನ್ ಸೀನಾ ರೆಸ್ಲರ್ ಆಗುವ ಕನಸು ಕೂಡ ಕಂಡವರಲ್ಲ! ಅವರ ಕನಸು ಏನಿದ್ದರೂ ಬಾಡಿ ಬಿಲ್ಡಿಂಗ್ ಮತ್ತು ಸಿನಿಮಾದಲ್ಲಿ ನಟನೆ ಮಾತ್ರ ಆಗಿತ್ತು. ಆರು ಅಡಿ ಒಂದು ಇಂಚು ಎತ್ತರದ ಮತ್ತು 114 ಕಿಲೋಗ್ರಾಂ ತೂಕ ಇದ್ದ ಜಾನ್ ಸೀನಾ ಜಿಮ್ ತರಬೇತಿಯ ಮೂಲಕ ಕಟ್ಟುಮಸ್ತಾದ ಮತ್ತು ಹುರಿಮಾಡಿದ ಬಾಡಿ ಬಿಲ್ಡಿಂಗ್ ಮಾಡಿಕೊಂಡಿದ್ದ.

ಇದನ್ನೂ ಓದಿ MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

ಮೊದಲ ಪಂದ್ಯದಲ್ಲಿ ಭಾರೀ ಸೋಲು!

ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ಇರುವ ಸ್ಟ್ರಾಂಗ್ ಮೈಂಡ್ ಸೆಟ್ ಹೊಂದಿರುವ ಆತ ರೆಸ್ಲಿಂಗ್ ರಿಂಗ್ ಪ್ರವೇಶ ಮಾಡಿದ್ದು ಆಕಸ್ಮಿಕ! 1999ರ ನವೆಂಬರ್ ತಿಂಗಳ ಹೊತ್ತಿಗೆ ಯಾರದ್ದೋ ಸವಾಲನ್ನು ಸ್ವೀಕಾರ ಮಾಡಿ ರೆಸ್ಲಿಂಗ್ ಬೆಲ್ಟ್ ಧರಿಸಿದ ಜಾನ್ ಸೀನಾ ಮೊದಲ ಪಂದ್ಯದಲ್ಲಿಯೇ ಸೋತು ಸುಣ್ಣ ಆಗಿದ್ದ! ಸೋತದ್ದು ಮಾತ್ರವಲ್ಲ ತನ್ನ ಎರಡೂ ದವಡೆಗಳನ್ನು ಮುರಿದುಕೊಂಡಿದ್ದ.

ಆಗ ಅವನಿಗೆ ತನ್ನ ತಪ್ಪುಗಳ ಅರಿವಾಯಿತು. ಮುಂದೆ ಎರಡು ವರ್ಷ ಕಠಿಣ ಪರಿಶ್ರಮ ಪಟ್ಟು ಬೆವರು ಹರಿಸಿದ. ಕೋಚ್ ಹೇಳಿದ ಎಲ್ಲವನ್ನೂ ಕರಾರುವಾಕ್ಕಾಗಿ ಪಾಲಿಸಿದ. ಮಾನಸಿಕ ಮತ್ತು ದೈಹಿಕವಾಗಿ ಮುಂದಿನ ಪಂದ್ಯಗಳಿಗೆ ಸಿದ್ಧನಾದ!

ಮುಂದೆ ಸತತ ಗೆಲುವಿನ ಹಸಿವು! ಸೋಲುಗಳನ್ನು ಮೆಟ್ಟಿ ನಿಂತ ದೃಢತೆ!

ಅಂತಾರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ (WWF) ಜೊತೆ ಒಪ್ಪಂದ ಮಾಡಿಕೊಂಡ ನಂತರ ಸೀನಾ ವೃತ್ತಿಪರ ರೆಸ್ಲರ್ ಆಗಿ ಬದಲಾದನು. ಆತನ ಅತ್ಯಂತ ಬಲಯುತ ಪಂಚ್‌ಗಳು, ಚಿರತೆಯ ವೇಗದ ಚಲನೆ, ಎಂತಹ ಬಲಿಷ್ಠ ಪಟುಗಳನ್ನು ಕೂಡ ಕೆಡವಿ ಸಿಂಹನಾದ ಮಾಡುವ ತಾಕತ್ತು, ಶಕ್ತಿಯುತ ಪಟ್ಟುಗಳು………..ಹೀಗೆ ಜಾನ್ ಸೀನಾ ಕೆಲವೇ ತಿಂಗಳಲ್ಲಿ ರೆಸ್ಲಿಂಗ್ ಬಾದಷಾ ಆಗಿ ಬದಲಾದ. ಅತಿರಥ ಮಹಾರಥ ಪಟುಗಳನ್ನು ಸೋಲಿಸಿ ದಾಖಲೆಯ ಮೇಲೆ ದಾಖಲೆಯನ್ನು ಬರೆದ.

ರೆಸ್ಲಿಂಗ್ ಬಾದಷಾ ಎಂಬ ಕೀರ್ತಿ!

ಬ್ರೂಕ್ ಲೆಸ್ನಾರ್, ರಾಂಡಿ ಆರ್ಟನ್, ಶಾನ್ ಮೈಕೆಲ್, ಬಟಿಸ್ಟಾ, ಅಂಡರ್ ಟೇಕರ್, ಬಿಗ್ ಶಾ ಇವರೆಲ್ಲ ಸೀನಾ ಕೈಯ್ಯಲ್ಲಿ ಒಂದಲ್ಲ ಒಂದು ಬಾರಿ ಸೋಲು ಉಂಡವರೆ ಆಗಿದ್ದಾರೆ! ಬೇರೆಯವರ ಆಟಕ್ಕಿಂತ ಸೀನಾ ಆಟ ತುಂಬಾ ಭಿನ್ನ ಆಗಿರುತ್ತದೆ. ಆತನು ಆರಂಭದಲ್ಲಿ ಆಕ್ರಮಣವನ್ನು ಮಾಡುವುದಿಲ್ಲ. ಆದರೆ ಆಟ ಕುದುರಿದ ಹಾಗೆ ಅವನು ಹೆಚ್ಚು ಆಕ್ರಮಣಕ್ಕೆ ಇಳಿಯುತ್ತಾನೆ. ಎಷ್ಟು ಬಾರಿ ಕೆಳಗೆ ಬಿದ್ದರೂ ಅರ್ಧ ಕ್ಷಣದಲ್ಲಿ ಮತ್ತೆ ಎದ್ದುಬರುವುದು ಆತನ ಶಕ್ತಿ!

ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ ‘ರೆಸ್ಟಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ಹೆಚ್ಚು ದೊರೆಯುವುದಿಲ್ಲ. ಆತನ ನಗು ಮತ್ತು ಆಟಿಟ್ಯುಡ್ ಯಾರ ಮನಸ್ಸನ್ನಾದರೂ ಸೆಳೆಯದೆ ಇರಲು ಸಾಧ್ಯವಿಲ್ಲ!

Exit mobile version