Site icon Vistara News

ICC World Cup 2023 : ಹಿಮಾಚಲ ಪ್ರದೇಶದಲ್ಲಿ ಆಡಿದರೆ ಕೈಕಾಲು ಮುರಿತ ಖಚಿತ; ಹಲವರ ಆತಂಕ

HPCA cricket Ground

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ 2023 ರ (ICC World Cup 2023) 3 ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೆಣಸಾಡಿತು. ಈ ಪಂದ್ಯವು ಅಫ್ಘಾನಿಸ್ತಾನಕ್ಕೆ ನಿರಾಶೆಯಲ್ಲಿ ಮೂಡಿಸಿತು. ಏಕೆಂದರೆ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರಿ ಸೋಲಿಗೆ ಶರಣಾಯಿತು. ಇವೆಲ್ಲದರ ನಡುವೆ ಪಂದ್ಯ ನಡೆದ ಕ್ರೀಡಾಂಗಣದ ಗುಣಮಟ್ಟದ ಬಗ್ಗೆ ಚರ್ಚೆ ನಡೆಯಿತು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಮೇಲ್ಮೈಯ ಸ್ಥಿತಿಯ ಬಗ್ಗೆ ಹಲವಾರು ಚರ್ಚೆಗಳು ನಡೆದವು. ಔಟ್ ಫೀಲ್ಡ್ ನಲ್ಲಿ ಹೆಚ್ಚು ಮರಳು ಇರುವ ಕಾರಣ ಆಟಗಾರರಿಗೆ ಗಾಯದ ಅಪಾಯವಿದೆ ಎಂದು ಹೇಳಲಾಯಿತು.

ಈ ಬಗ್ಗೆ ಮಾತನಾಡಿದ ಅಫ್ಘಾನಿಸ್ತಾನದ ಮುಖ್ಯ ಕೋಚ್ ಜೊನಾಥನ್ ಟ್ರಾಟ್, ಮುಜೀಬ್ ಉರ್ ರೆಹಮಾನ್ ಮರಳಲ್ಲಿ ಜಾರಿ ಬಿದ್ದ ಪ್ರಸಂಗವನ್ನು ಉಲ್ಲೇಖಿಸಿ ಆಗಬಹುದಾದದ ಅಪಾಯದ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಮುಜೀಬ್​ ಚೆಂಡನ್ನು ಪಡೆಯಲು ಡೈವಿಂಗ್ ಮಾಡಿದ ವೇಳೆ ಮರಳಿನಲ್ಲಿ ಸಮತೋಲನ ತಪ್ಪಿ ಬಿದ್ದಿದ್ದರು. ಇದರಿಂದ ಅವರಿಗೆ ಗಾಯಗಳಾಗುವ ಸಾಧ್ಯತೆಗಳು ಇದ್ದವು.

ಅಫ್ಘಾನಿಸ್ತಾನದ ಸೋಲು ಮತ್ತು ಅವರ ಕಳಪೆ ಪ್ರದರ್ಶನಕ್ಕೆ ತಾನು ಮೇಲ್ಮೈಯನ್ನು ದೂಷಿಸುತ್ತಿಲ್ಲ ಎಂಬುದಾಗಿ ಟ್ರಾಟ್ ಸ್ಪಷ್ಟಪಡಿಸಿದ್ದಾರೆಮ ಆದರೆ ಇದು ಅಧಿಕಾರಿಗಳು ಗಮನಿಸಬೇಕಾದ ವಿಷಯ ಎಂದು ಅಭಿಪ್ರಾಯಪಟ್ಟರು.

ಆಟಗಾರರು ಡೈವ್ ಮಾಡಬಹುದೇ ಎಂದು ತಿಳಿದುಕೊಳ್ಳುವ ಅವಶ್ಯಕತೆ ಎದುರಾಗಿದೆ. ವಿಶ್ವದಾದ್ಯಂತ ಕ್ರಿಕೆಟ್​​ ಸುಧಾರಣೆ ಹಾದಿಯಲ್ಲಿ ಸಾಗುತ್ತಿದೆ. ಆಟಗಾರರ ಫೀಲ್ಡಿಂಗ್ ಅನ್ನು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಆದರೆ ಇಂಥ ಮೇಲ್ಮೈನಿಂದ ಆಟಗಾರರು ಗಾಯಗೊಳ್ಳುವ ಆತಂಕವಿದೆ. ನನ್ನ ಪ್ರಕಾರ, ಮುಜೀಬ್​ ಗಂಭೀರ ಮೊಣಕಾಲು ಗಾಯಕ್ಕೆ ಒಳಗಾಗದಿರುವುದು ನಮ್ಮ ಅದೃಷ್ಟ,” ಎಂದು ಜೊನಾಥನ್ ಟ್ರಾಟ್ ಹೇಳಿದ್ದಾರೆ.

ಇದನ್ನೂ ಓದಿ : ICC World Cup 2023 : ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೈಭವ; ಆಸ್ಟ್ರೇಲಿಯಾ ತಂಡದ ದಾಖಲೆ ನಿರ್ನಾಮ

ಇಂಗ್ಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ 2023 ರ ಋತುವಿನ ಆರಂಭಿಕ ಪಂದ್ಯದಲ್ಲಿ ಇದೇ ರೀತಿಯ ಪರಿಸ್ಥಿತಿಯಿಂದ ಪಾರಾದ ಡೆವೊನ್ ಕಾನ್ವೇ ಅವರ ಉದಾಹರಣೆಯನ್ನು ಟ್ರಾಟ್ ಇಲ್ಲಿ ಉಲ್ಲೇಖಿಸಿದರು. ಮರಳು ತುಂಬಿದ ಔಟ್ ಫೀಲ್ಡ್ ನಲ್ಲಿನ ಸೋಲಿಗೆ ತಾನು ದೂಷಿಸುತ್ತಿಲ್ಲ ಎಂದು ಒತ್ತಿ ಹೇಳಿದ ಅವರು ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಸಂಘಟಕರನ್ನು ಒತ್ತಾಯಿಸಿದರು.

ಹೌದು, ಮುಜೀಬ್​ ಬಹುಶಃ ಮೊಣಕಾಲಿನಿಂದ ಧುಮುಕಬಾರದಿತ್ತು. ಆದರೆ ನಾವು ಕಳೆದ ರಾತ್ರಿ [ಅಹಮದಾಬಾದ್ನಲ್ಲಿ] ನ್ಯೂಜಿಲೆಂಡ್​​ನ ಡೆವೊನ್ ಕಾನ್ವೇ ಅವರನ್ನು ನೋಡಿದ್ದೇವೆ. ಅಲ್ಲೂ ಇದೇ ರೀತಿ ಆಗಿದೆ. ನಾನು ಖಂಡಿತವಾಗಿಯೂ ಅದರ ಮೇಲೆ ಯಾವುದೇ ದೂಷಣೆ ಮಾಡುತ್ತಿಲ್ಲ. ಅದು ಭವಿಷ್ಯದ ಮೇಲೆ ಕಣ್ಣಿಡಬೇಕಾದ ವಿಷಯವಾಗಿದೆ ಎಂದು ಟ್ರಾಟ್ ಹೇಳಿದರು.

Exit mobile version