Site icon Vistara News

Jonty Rhodes: ‘ನಮಸ್ಕಾರ ಮೋದಿಜಿ’ ಬ್ರಿಕ್ಸ್‌ ಸಮ್ಮೇಳನಕ್ಕೆ ಸ್ವಾಗತಿಸಿದ ಜಾಂಟಿ ರೋಡ್ಸ್

jonty rhodes and modi

ಜೊಹಾನ್ಸ್​ಬರ್ಗ್​: ಭಾರತದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಆಗಸ್ಟ್ 22ರಿಂದ 24ರ ವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ(johannesburg) ನಡೆಯಲಿರುವ 15ನೇ ಬ್ರಿಕ್ಸ್‌ ಸಮ್ಮೇಳನದಲ್ಲಿ(15th BRICS Summit) ಭಾಗವಹಿಸಲಿದ್ದಾರೆ. ಅವರ ಆಗಮನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್(Jonty Rhodes) ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೊ ಮೂಲಕ ಸ್ವಾಗತ ಕೋರಿರುವ ಜಾಂಟಿ ರೋಡ್ಸ್, ‘ನಮಸ್ಕಾರ ಮೋದಿಜಿ’ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(viral videos)​ ಆಗಿದೆ.

ಟ್ವಿಟರ್​ನಲ್ಲಿ ವಿಡಿಯೊ ಹಂಚಿಕೊಂಡಿರುವ ಜಾಂಟಿ ರೋಡ್ಸ್​, ನಮಸ್ಕಾರ ಮೋದಿಜಿ. ಭಾರತಕ್ಕೆ ನನ್ನ ಕುಟುಂಬ ಹಲವು ಬಾರಿ ಭೇಟಿ ನೀಡಿದೆ. ಭಾರತವೆಂದರೆ ಭಾವನಾತ್ಮಕ ಸಂಬಂದವೂ ನನಗಿದೆ. ಅದ್ಭುತ ದೇಶ, 15ನೇ ಬಿಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸಲು ನಮ್ಮ ದೇಶಕ್ಕೆ ಬರುತ್ತಿರುವ ನಿಮಗೆ ಹೃದಯಸ್ಪರ್ಶಿ ಸ್ಪಾಗತ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಅರ್ಥಶಾಸ್ತ್ರದಲ್ಲಿ ನೀವೊಬ್ಬರು ರೋಲ್ ಮಾಡೆಲ್. ನಿಮ್ಮ ಅನುಭವವನ್ನು ದಕ್ಷಿಣ ಆಫ್ರಿಕಾದ ಜನತೆಗೂ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ಮಗಳಿಗೆ ಇಂಡಿಯಾ ಎಂದು ನಾಮಕರಣ

ಭಾರತವೆಂದರೆ ಜಾಂಟಿ ರೋಡ್ಸ್​ಗೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ಅವರು ತನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ. ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವ ಅವರು ಮುಂಬೈನಲ್ಲಿ ಸರ್ಫಿಂಗ್​ ಮತ್ತು ಕೆಲವು ತೀರ್ಥಕ್ಷೇತ್ರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತಾರೆ.

ಪವಿತ್ರ ಗಂಗೆಯಲ್ಲಿ ತೀರ್ಥಸ್ನಾನ

2020ರಲ್ಲಿ ಹೃಷಿಕೇಶ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ಹಬ್ಬಕ್ಕೆ ಆಗಮಿಸಿದ್ದ ವೇಳೆ ಜಾಂಟಿ ರೋಡ್ಸ್‌ ಗಂಗಾ ನದಿಗೂ ಭೇಟಿ ನೀಡಿದ್ದರು. ಮೊದಲೇ ಭಾರತ ನೆಲ, ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಜಾಂಟಿ ರೋಡ್ಸ್‌ ಭಾರತೀಯರಿಗೆ ಅತ್ಯಂತ ಪವಿತ್ರವಾಗಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿ ಸಾರ್ಥಕತೆಯ ಖುಷಿ ಅನುಭವಿಸಿದ್ದರು.

ಇದನ್ನೂ ಓದಿ IPL 2023 : ನಾಯಕತ್ವದಿಂದ ರಾಹುಲ್ ಪ್ರದರ್ಶನಕ್ಕೆ ಅಡಚಣೆಯಾಗಿಲ್ಲ ಎಂದ ಎಲ್​ಎಸ್​ಜಿ ಫೀಲ್ಡಿಂಗ್​ ಕೋಚ್​

ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​

ಕ್ರಿಕೆಟ್ ಲೋಕದ ಬೆಸ್ಟ್ ಫೀಲ್ಡರ್ ಯಾರು ಎಂದು ಕೇಳಿದರೆ ಕ್ರಿಕೆಟ್ ಅಭಿಮಾನಿಗಳು ತಕ್ಷಣ ಹೇಳುವ ಹೆಸರು ಜಾಂಟಿ ರೋಡ್ಸ್. ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ ಕೇವಲ ಫೀಲ್ಡಿಂಗ್ ನಲ್ಲಿ ಪಂದ್ಯದ ಸ್ಥಿತಿ ಬದಲಿಸುವ ತಾಕತ್ತು ಹೊಂದಿದ್ದರು. 54 ವರ್ಷದ ಜಾಂಟಿ ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಫೀಲ್ಡಿಂಗ್​ ಕೋಚ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪಂಜಾಜ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡದ ಪರ ಫೀಲ್ಡಿಂಗ್​ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.​

ಗ್ಯಾರಿ ಕರ್ಸ್ಟನ್‌(Gary Kirsten) ಕೂಡ ಮೋದಿ ಅವರ ಆಗಮನಕ್ಕೆ ಸ್ವಾಗತ ಕೋರಿದ್ದಾರೆ. “ದಕ್ಷಿಣ ಆಫ್ರಿಕಾಗೆ ನಿಮ್ಮನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯವೆಂದು ಭಾವಿಸುತ್ತೇವೆ. ನಾನು ಆಟಗಾರನಾಗಿ ಹಾಗೂ ಕೋಚ್‌ ಆಗಿ ಭಾರತದಲ್ಲಿ ಸಾಕಷ್ಟು ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಭಾರತದಲ್ಲಿ ಸಿಕ್ಕ ಬೆಂಬಲ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ” ಎಂದು ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. 28 ವರ್ಷಗಳ ಬಳಿಕ ಭಾರತ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಗ್ಯಾರಿ ಕರ್ಸ್ಟನ್‌ ಪ್ರಮುಖ ಪಾತ್ರಬಹಿಸಿದ್ದರು. ಹೀಗಾಗಿ ಪ್ರತಿಯೊಬ್ಬ ಭಾರತೀಯ ಹೃದಯದಲ್ಲಿ ಗ್ಯಾರಿ ಕರ್ಸ್ಟನ್​ಗೆ ವಿಶೇಷ ಸ್ಥಾನವಿದೆ.

Exit mobile version